ಶುಕ್ರವಾರ, ಮೇ 10, 2024
ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪೊಲೀಸ್ ವಶಕ್ಕೆ; ಏನಿದು ಪ್ರಕರಣ?-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಕ್ಯಾಮೆರಾಗಳ ಮುಂದೆನೇ ನಾಯಕ ಕೆ ಎಲ್ ರಾಹುಲ್ ಗೆ ತರಾಟೆಗೆ ತೆಗೆದುಕೊಂಡ LSG ಮಾಲೀಕ ; ಅಭಿಮಾನಿಗಳು ಆಕ್ರೋಶ..!-ಮನೆಯಲ್ಲಿ ನೇಣುಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ-SSLC ಪಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್-ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ-ಜೆಪಿ ನಡ್ಡಾ ಮತ್ತು ಅಮಿತ್ ಮಾಲವೀಯಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ಸಮನ್ಸ್.!-ಇಂದು SSLC ಪಲಿತಾಂಶ ಪ್ರಕಟ; ಎಷ್ಟು ಹೊತ್ತಿಗೆ ಪಲಿತಾಂಶ ಪ್ರಕಟವಾಗಲಿದೆ.?-Gold Price: ದುಬಾರಿಯಾಗಿದ್ದ ಚಿನ್ನದ ದರ ಇಂದು ಹೇಗಿದೆ.?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪಾನ್ - ಆಧಾರ್ ಕಾರ್ಡ್ ಲಿಂಕ್ ಮಾಡಲು ಇವತ್ತಿನ ಕೇವಲ ಒಂದೇ ದಿನ ಬಾಕಿ; ತಪ್ಪಿದಲ್ಲಿ ಕಾರ್ಡ್ ನಿಷ್ಕ್ರಿಯ! ಆಧಾರ್ - ಪಾನ್ ಲಿಂಕ್ ಮಾಡುವುದು ಹೇಗೆ?

Twitter
Facebook
LinkedIn
WhatsApp
link aadhar to pan via sms

ನವದೆಹಲಿ (ಜೂನ್ 29, 2023): ಆಧಾರ್‌ ಕಾರ್ಡ್‌ ನಂಬರ್‌ಗೆ ಪ್ಯಾನ್‌ ಕಾರ್ಡ್‌ ಲಿಂಕ್‌ ಮಾಡಲು ನೀಡಲಾಗಿರುವ ಅವಧಿ ಮುಕ್ತಾಯವಾಗಲು ಇನ್ನು ಕೇವಲ1 ದಿನ ಬಾಕಿ ಉಳಿದಿದೆ. ಜೂನ್‌ 30ರೊಳಗೆ ಲಿಂಕ್‌ ಮಾಡದಿದ್ದರೆ ಪ್ಯಾನ್‌ ಕಾರ್ಡ್‌ ಅಮಾನ್ಯವಾಗಲಿದೆ. 1 ಸಾವಿರ ರೂ. ದಂಡದೊಂದಿಗೆ ಆಧಾರ್‌ ಮತ್ತು ಪ್ಯಾನ್‌ ಲಿಂಕ್‌ ಮಾಡಲು ನೀಡಲಾಗಿದ್ದ ಅವಧಿ ಜೂನ್‌ 30ಕ್ಕೆ ಮುಕ್ತಾಯವಾಗಲಿದೆ. ಇದಾದ ಬಳಿಕ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗಲಿದ್ದು, ಬ್ಯಾಂಕಿಂಗ್‌ ವ್ಯವಹಾರ ಸೇರಿದಂತೆ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಸಮಸ್ಯೆಯಾಗಲಿದೆ.

ಬ್ಯಾಂಕ್‌ ಖಾತೆ ತೆರೆಯಲು, ನಿಗದಿತ ಠೇವಣಿಗಳಲ್ಲಿ ಹೂಡಿಕೆ ಮಾಡಲು, ಡಿಮ್ಯಾಟ್‌ ಅಕೌಂಟ್‌ಗಳನ್ನು ತೆರೆಯಲು ಪ್ಯಾನ್‌ ಕಾರ್ಡ್‌ ಅವಶ್ಯಕವಾಗಿದ್ದು, ಒಂದು ವೇಳೆ ಜೂನ್‌ 30ರೊಳಗೆ ಜೋಡಣೆ ಮಾಡದಿದ್ದರೆ ಈ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.ಅಲ್ಲದೇ ಈ ದಿನಾಂಕದ ಬಳಿಕ ಆಧಾರ್‌ ಮತ್ತು ಪ್ಯಾನ್‌ ಲಿಂಕ್‌ ಮಾಡಿಸಲು ಸುಮಾರು 10 ಸಾವಿರ ರೂ. ಖರ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಆಧಾರ್‌ ಪ್ಯಾನ್‌ ಜೋಡಣೆಗೆ ನೀಡಲಾಗಿದ್ದ ಅಂತಿಮ ದಿನವನ್ನು ಮಾರ್ಚ್‌ 31ರಿಂದ ಜೂನ್ 30ಕ್ಕೆ ಮುಂದೂಡಲಾಗಿತ್ತು.

ಆಧಾರ್‌ ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ?
ಆಧಾರ್‌ ಮತ್ತು ಪ್ಯಾನ್‌ ನಂಬರ್‌ಗಳನ್ನು ಲಿಂಕ್‌ ಮಾಡಲು ಆದಾಯ ತೆರಿಗೆ ಇಲಾಖೆ 2 ವಿಧಾನಗಳನ್ನು ನೀಡಿದ್ದು, ಇದರ ಮೂಲಕ ಆಧಾರ್‌ ಮತ್ತು ಪ್ಯಾನ್‌ ಜೋಡಣೆ ಮಾಡಿಕೊಳ್ಳಬಹುದು.
ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್‌ ಪೋರ್ಟಲ್‌ (https://www.incometax.gov.in/iec/foportal/) ಗೆ ಹೋಗಿ ಅದರಲ್ಲಿ ಸ್ಕ್ರೀನ್‌ನ ಎಡಭಾಗದಲ್ಲಿ ಮೇಲ್ಭಾಗದಲ್ಲಿರುವ ‘ಕ್ವಿಕ್‌ ಲಿಂಕ್ಸ್‌’ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಲಿಂಕ್‌ ಆಧಾರ್‌ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ಅಲ್ಲಿ ಕೇಳುವ ಮಾಹಿತಿಗಳನ್ನು ತುಂಬುವ ಮೂಲಕ ಲಿಂಕ್‌ ಮಾಡಬಹುದು. ಇಲ್ಲವೇ, UIDPAN ಎಂದು ಟೈಪ್‌ ಮಾಡಿ ಸ್ಪೇಸ್‌ ಕೊಟ್ಟು ಆಧಾರ್‌ ನಂಬರ್‌ ಬಳಿಕ ಸ್ಪೇಸ್‌ ಕೊಟ್ಟು ಪಾನ್‌ ಕಾರ್ಡ್‌ ನಂಬರ್‌ ಟೈಪ್‌ ಮಾಡಿ 567678 ಅಥವಾ 56161 ಗೆ ಎಸ್‌ಎಂಎಸ್‌ ಕಳುಹಿಸಬೇಕು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ