Vetri Duraisamy: 9 ದಿನಗಳ ಬಳಿಕ ನದಿಯಲ್ಲಿ ತಮಿಳುನಾಡು ಮಾಜಿ ಮೇಯರ್ ಪುತ್ರನ ಶವ ಪತ್ತೆ...!
ತಮಿಳು ಚಲನಚಿತ್ರ ನಿರ್ದೇಶಕ ಮತ್ತು ಚೆನ್ನೈನ ಮಾಜಿ ಮೇಯರ್ ಪುತ್ರ ವೆಟ್ರಿ ದುರೈಸಾಮಿ ಅವರು ಶಿಮ್ಲಾದಿಂದ ಸ್ಪಿತಿಗೆ ಪ್ರಯಾಣಿಸುತ್ತಿದ್ದ ಕಾರು ನದಿಯಲ್ಲಿ ಬಿದ್ದ ಒಂಬತ್ತು ದಿನಗಳ ನಂತರ ಮೃತದೇಹ ಪತ್ತೆಯಾಗಿದೆ. ಶಿಮ್ಲಾದಿಂದ ಸ್ಪಿತಿಗೆ ಪ್ರಯಾಣಿಸುತ್ತಿದ್ದಾಗ ಫೆಬ್ರವರಿ 4 ರಂದು ಅವರ ವಾಹನ ಅಪಘಾತಕ್ಕೀಡಾಗಿತ್ತು.
ಅಪಘಾತ ಸಂಭವಿಸಿ 9 ದಿನಗಳ ಬಳಿಕ ತಮಿಳುನಾಡು ಮಾಜಿ ಮೇಯರ್ ಸೈದೈ ದುರೈಸಾಮಿ(Saidai Duraisamy) ಅವರ ಪುತ್ರನ ಶವ ನದಿಯಲ್ಲಿ ಪತ್ತೆಯಾಗಿದೆ. ಕಳೆದ 9 ದಿನಗಳ ಹಿಂದೆ ಹಿಮಾಚಲ ಪ್ರದೇಶದಲ್ಲಿ ಅಪಘಾತವೊಂದು ಸಂಭವಿಸಿತ್ತು. ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಿನ್ನೌರ್ ಜಿಲ್ಲೆಯಲ್ಲಿ ನದಿಗೆ ಉರುಳಿತ್ತು. ವೆಟ್ರಿ ದುರೈಸಾಮಿ ಅವರು ಶಿಮ್ಲಾದಿಂದ ವಾಪಸಾಗುತ್ತಿದ್ದಾಗ ಫೆಬ್ರವರಿ 4 ರಂದು ಅಪಘಾತ ಸಂಭವಿಸಿತ್ತು.
ಸಹ-ಪ್ರಯಾಣಿಕ ಗೋಪಿನಾಥ್ ಅವರನ್ನು ರಕ್ಷಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದು, ಕಾರು ಚಾಲಕ ತೇಂಜಿನ್ ಶವವಾಗಿ ಪತ್ತೆಯಾಗಿದ್ದಾರೆ. ಆದರೆ, 45 ವರ್ಷದ ವೆಟ್ರಿ ಎಲ್ಲಿದ್ದಾರೆ ಎಂಬುದು ತಿಳಿದುಬಂದಿರಲಿಲ್ಲ. ಭಾನುವಾರ (ಫೆಬ್ರವರಿ 4) ಈ ಘಟನೆ ನಡೆದಿದ್ದು, ವೆಟ್ರಿ ದುರೈಸಾಮಿ (45) ಅವರು ತಮ್ಮ ಸಹ ಪ್ರಯಾಣಿಕ ಗೋಪಿನಾಥ್ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಘಟನೆಯ ವೇಳೆ ಹಿಮಾಚಲ ಪ್ರದೇಶದ ಟಬೋ ನಿವಾಸಿ ತೆಂಜಿನ್ ಎಂಬಾತ ವಾಹನ ಚಲಾಯಿಸುತ್ತಿದ್ದರು. ದುರೈಸ್ವಾಮಿ ಮತ್ತು ಗೋಪಿನಾಥ್ ಸ್ಪಿತಿ ಕಣಿವೆಯಿಂದ ಹಿಂತಿರುಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ನದಿಗೆ ಬಿದ್ದಿದೆ. ಹಿಮಾಚಲ ಪೊಲೀಸರಿಂದ ಪಡೆದ ಮಾಹಿತಿಯ ಪ್ರಕಾರ, ಇನ್ನೋವಾ ಕಾರು HP01AA-1111 NH-05 ನಲ್ಲಿ ಕಶಾಂಗ್ ಡ್ರೈನ್ ಬಳಿ ಸಟ್ಲೆಜ್ ನದಿಗೆ ಪಲ್ಟಿಯಾಗಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಿರುಪುರ ಮೂಲದ ಗೋಪಿನಾಥ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚೆನ್ನೈ ಮೇಯರ್ ದುರೈಸಾಮಿ ಅವರ ಪುತ್ರ ವೆಟ್ರಿ ನಾಪತ್ತೆಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸೈದೈ ದುರೈಸಾಮಿ ಅವರು ತಮ್ಮ ಕುಟುಂಬದೊಂದಿಗೆ ಹಿಮಾಚಲಕ್ಕೆ ತೆರಳಿದ್ದಾರೆ.
ವೆಟ್ರಿ ದುರೈಸಾಮಿ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ದೇಶಕ. ಕಾರಿನ ಚಾಲಕನನ್ನು ಹಿಮಾಚಲ ಪ್ರದೇಶದ ಥಾಬೋ ಜಿಲ್ಲೆಯ ಲಾಹೌಲ್-ಸ್ಪಿಟಿ ಪ್ರದೇಶದ ನಿವಾಸಿ ಎಂದು ಗುರುತಿಸಲಾಗಿದೆ.