ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಆಸ್ತಿ ವಿಚಾರಕ್ಕೆ ಗಲಾಟೆ ; ನಡುರಸ್ತೆಯಲ್ಲೇ ಮಹಿಳೆಯ ಕತ್ತು ಕೊಯ್ದು ಕೊಲೆಯಲ್ಲಿ ಅಂತ್ಯ!

Twitter
Facebook
LinkedIn
WhatsApp
ಆಸ್ತಿ ವಿಚಾರಕ್ಕೆ ಗಲಾಟೆ ; ನಡುರಸ್ತೆಯಲ್ಲೇ ಮಹಿಳೆಯ ಕತ್ತು ಕೊಯ್ದು ಕೊಲೆಯಲ್ಲಿ ಅಂತ್ಯ!

ತುಮಕೂರು: ಆಸ್ತಿ ವಿಚಾರಕ್ಕೆ ಮಹಿಳೆಯೊಬ್ಬರ ಪ್ರಾಣಪಕ್ಷಿಯೇ ಹಾರಿಹೋಗಿದೆ. ಶಿವಮ್ಮ (65) ಹತ್ಯೆಯಾದವರು. ನಂದೀಶ್‌ ಎಂಬಾತನೊಂದಿಗೆ ಆಸ್ತಿ ವಿಚಾರಕ್ಕೆ ಶಿವಮ್ಮ ಕಿತ್ತಾಡಿಕೊಂಡಿದ್ದು, ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ತುಮಕೂರು ಜಿಲ್ಲೆ ತುರುವೆಕೆರೆ ತಾಲೂಕಿ‌ನ ದಂಡಿನಶಿವರ ಬಳಿಯಿರುವ ಡಿ.ಪಾಳ್ಯದಲ್ಲಿ ಘಟನೆ ನಡೆದಿದೆ.

ಆರೋಪಿ ನಂದೀಶ್ ಹಾಗೂ ಶಿವಮ್ಮ ನಡುವೆ ಹಲವು ವರ್ಷಗಳಿಂದ ಆಸ್ತಿ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಶನಿವಾರ (ಅ.7) ಇದೇ ವಿಚಾರ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದಿದ್ದು, ಕೋಪದ ಕೈಗೆ ಬುದ್ದಿ ಕೊಟ್ಟ ನಂದೀಶ್‌ ಶಿವಮ್ಮನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ರಕ್ತದ ಮಡುವಿನಲ್ಲೇ ಬಿದ್ದು ಒದ್ದಾಡಿದ ಶಿವಮ್ಮ ಸ್ಥಳದಲ್ಲೇ ಅಸುನೀಗಿದ್ದಾಳೆ. ಹತ್ಯೆ ಬಳಿಕ ಆರೋಪಿ ನಂದೀಶ್‌ ತಾನೇ ದಂಡಿನಶಿವರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಹತ್ಯೆ ನಡೆದ ಸ್ಥಳಕ್ಕೆ ದಂಡಿನ ಶಿವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಟೀಯಲ್ಲಿ ನಿದ್ರೆ ಮಾತ್ರೆ ಹಾಕಿ ಚಿನ್ನಾಭರಣ ಲೂಟಿ

ಬೆಂಗಳೂರು: ನೀವೇನಾದರೂ ಟೀ-ಕಾಫಿ ಪ್ರಿಯರಾಗಿದ್ದರೆ ಎಚ್ಚರವಾಗಿರಿ. ಯಾಕೆಂದರೆ ಖತರ್ನಾಕ್‌ ಜೋಡಿಯೊಂದು ಟೀ ಕುಡಿಸಿ ಬಳಿಕ ನಿಮ್ಮಲ್ಲಿರುವ ಚಿನ್ನಾಭರಣವನ್ನು ಎಗರಿಸಿ (theft Case) ಪರಾರಿ ಆಗುತ್ತಾರೆ. ಹೀಗೆ ವೃದ್ಧರನ್ನೇ ಟಾರ್ಗೆಟ್‌ ಮಾಡಿ ಕಳವು ಮಾಡುತ್ತಿದ್ದ ಲಿವಿಂಗ್‌ ಟುಗೆದರ್‌ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ತಿಕ್ ಹಾಗೂ ಮಂಜುಶ್ರೀ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರು ವೃದ್ದರನ್ನೇ ಟಾರ್ಗೆಟ್ ಮಾಡುತ್ತಿದ್ದರು. ನಯವಾಗಿ ಮಾತಾಡಿ ವೃದ್ಧೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಟೀ ಕುಡಿಯುವ ನೆಪದಲ್ಲಿ ಕರೆದು ಬಳಿಕ ಮಾತಿಗಿಳಿಯುತ್ತಿದ್ದರು. ಮಾತನಾಡುತ್ತಲೆ ಟೀ ಅಥವಾ ಕಾಫಿಗೆ ನಿದ್ರೆ ಮಾತ್ರೆಯನ್ನು ಹಾಕಿ ಪ್ರಜ್ಞೆ ತಪ್ಪಿಸುತ್ತಿದ್ದರು. ಟೀ ಕುಡಿದು ಪ್ರಜ್ಞೆ ತಪ್ಪುತ್ತಿದ್ದಂತೆ ಅವರ ಬಳಿ ಇದ್ದ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದರು.

ಇದೇ ಮಾದರಿಯಲ್ಲಿ ಮಲ್ಲೇಶ್ವರಂನ ಅಂಗಡಿ ಮಾಲೀಕರ ಚಿನ್ನ ಎಗರಿಸಿದ್ದರು. ಈ ಸಂಬಂಧ ಪ್ರಕರಣ‌ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಯನ್ನು ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಕಾರ್ತಿಕ್‌ ಈ ಹಿಂದೆ ಕೊಲೆ ಹಾಗೂ ಕಿಡ್ನ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ. ಇತ್ತೀಚೆಗೆ ಜಾಮೀನಿನ ಮೇಲೆ ಹೊರ ಬಂದು ಹೊಸ ಮಾದರಿ ಕೃತ್ಯಕ್ಕೆ ಕೈ ಹಾಕಿದ್ದ.

ಲಿವಿಂಗ್ ಟುಗೆದರ್‌ನಲ್ಲಿದ್ದಾಗ ಜತೆಯಾಗಿ ತಂತ್ರವನ್ನು ರೂಪಿಸುತ್ತಿದ್ದರು. ಕಾರ್ತಿಕ್‌ ವೃದ್ಧರೊಂದಿಗೆ ಮಾತಾಡಿ ಪುಸಲಾಯಿಸಿ ಚಿನ್ನ ಕಳವು ಮಾಡಿ ಮಂಜುಶ್ರೀಗೆ ನೀಡುತ್ತಿದ್ದ. ಮಂಜುಶ್ರೀ ಕದ್ದ ಚಿನ್ನವನ್ನು ಮಾರಾಟ ಮಾಡುತ್ತಿದ್ದಳು.

ಸದ್ಯ ಮಲ್ಲೇಶ್ವರಂ ಪೊಲೀಸರು ಈ ಖತರ್ನಾಕ್‌ ಜೋಡಿಯನ್ನು ಬಂಧಿಸಿದ್ದು, ಸುಮಾರು 6.5 ಲಕ್ಷ ಮೌಲ್ಯದ 115 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಟೀ-ಕಾಫಿಗೆ ಬೆರೆಸುತ್ತಿದ್ದ ನಿದ್ದೆ ಮಾತ್ರೆಯನ್ನು ಕಸಿದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮಲ್ಲೇಶ್ವರಂ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ