ಕಿರುಕುಳ ತಾಳಲಾಗದೇ ಬ್ಲಾಕ್ಮೇಲ್ಗೆ ಮಹಿಳೆ ಆತ್ಮಹತ್ಯೆ ;ಪುಷ್ಪ’ ಚಿತ್ರದ ನಟ ಅರೆಸ್ಟ್...!
‘ಪುಷ್ಪ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡಿದ್ದರಿಂದ ಆ ಚಿತ್ರದಲ್ಲಿ ನಟಿಸಿದ ಹಲವು ಕಲಾವಿದರಿಗೆ ಒಳ್ಳೆಯ ಹೆಸರು ಬಂತು. ಅದರಲ್ಲೂ ಕೆಲವು ಪಾತ್ರಧಾರಿಗಳು ಹೆಚ್ಚು ಫೇಮಸ್ ಆದರು. ಅಲ್ಲು ಅರ್ಜುನ್ ಅವರ ಸ್ನೇಹಿತನ ಪಾತ್ರ ಮಾಡಿದ್ದ ನಟ ಜಗದೀಶ್ ಕೂಡ ಖ್ಯಾತಿ ಗಳಿಸಿದರು. ಆದರೆ ಈಗ ಅವರು ಅರೆಸ್ಟ್ ಆಗಿದ್ದಾರೆ. ಮಹಿಳೆಗೆ ಕಿರುಕುಳು ನೀಡಿದ ಆರೋಪ ಅವರ ಮೇಲೆ ಎದುರಾಗಿದೆ. ಈ ಘಟನೆಯಿಂದ ಟಾಲಿವುಡ್ ಮಂದಿಗೆ ಶಾಕ್ ಆಗಿದೆ. ಜಗದೀಶ್ ನೀಡಿದ ಕಿರುಕುಳ ತಾಳಲಾಗದೇ ಆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿರುಕುಳು ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ‘ಪುಷ್ಪ’ ಸಿನಿಮಾದ ನಟ ಜಗದೀಶ್ ಬಂಧನಕ್ಕೆ ಒಳಗಾಗಿದ್ದಾರೆ.
ಸಹ ನಟಿಯು ಬೇರೆ ಪುರುಷನ ಜೊತೆ ಖಾಸಗಿಯಾಗಿದ್ದ ಕ್ಷಣದ ಕೆಲವು ಫೋಟೋಗಳನ್ನು ಜಗದೀಶ್ ಕ್ಲಿಕ್ಕಿಸಿಕೊಂಡಿದ್ದರು. ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದ ಮಹಿಳೆಯು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರರಂಗದಲ್ಲಿ ಜಗದೀಶ್ ಈಗತಾನೆ ಗುರುತಿಸಿಕೊಳ್ಳುತ್ತಿದ್ದಾರೆ. ಪೋಷಕ ಪಾತ್ರಗಳಿಂದ ಅವರು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಇಂಥ ಸಮಯದಲ್ಲಿ ಗಂಭೀರ ಆರೋಪ ಎದುರಾಗಿರುವುದು ಅವರ ವೃತ್ತಿಜೀವನಕ್ಕೆ ಖಂಡಿತ ಪೆಟ್ಟು ನೀಡಲಿದೆ.
ಜಗದೀಶ್ ಅವರಿಂದ ಕಿರುಕುಳಕ್ಕೆ ಒಳಗಾದ ಮಹಿಳೆ ನವೆಂಬರ್ 29ರಂದು ಹೈದರಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆ ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಜಗದೀಶ್ ಕೈವಾಡ ಇರುವುದು ತಿಳಿಯಿತು. ಪೊಲೀಸರ ಕೈಗೆ ಸಿಗದಂತೆ ತಲೆ ಮರೆಸಿಕೊಂಡು ಜಗದೀಶ್ ಓಡಾಡುತ್ತಿದ್ದರು. ಆದರೆ ಬುಧವಾರ (ಡಿಸೆಂಬರ್ 6) ಅವರನ್ನು ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಲಾಗಿದೆ.