ಮಂಗಳವಾರ, ಮೇ 21, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶಾಲಾ ಕಟ್ಟಡದಿಂದ ಬಿದ್ದು ಯುಕೆಜಿ ಬಾಲಕ ದಾರುಣ ಸಾವು..!

Twitter
Facebook
LinkedIn
WhatsApp
ಶಾಲಾ ಕಟ್ಟಡದಿಂದ ಬಿದ್ದು ಯುಕೆಜಿ ಬಾಲಕ ದಾರುಣ ಸಾವು..!

ವಿಜಯಪುರ: ಶಾಲೆಯ ಮೊದಲ ಮಹಡಿಯಿಂದ ಆಯತಪ್ಪಿ ಬಿದ್ದು ಬಾಲಕನೊರ್ವ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಆರ್‌. ಎಂ ಶಾಹಾ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ. ಇಂಡಿ ತಾಲೂಕಿನ ಮಾವಿನಳ್ಳಿ ಗ್ರಾಮದ ಶಿವರಾಜ್ ರೋಡಗಿ (5) ಮೃತ ದುರ್ದೈವಿ.

ಶಿವರಾಜ್‌ ರೋಡಗಿ ಯು.ಕೆ.ಜಿ ಓದುತ್ತಿದ್ದು, ಬುಧವಾರ ಬೆಳಗ್ಗೆ ಎಂದಿನಂತೆ ಶಾಲೆಗೆ ಬಂದಿದ್ದ. ಮೊದಲ ಮಹಡಿಯಿಂದ ಬರುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ಕೆಳಗಿದ್ದ ನೀರಿನ ಫೀಲ್ಟರ್‌ ಮೇಲೆ ರಭಸವಾಗಿ ಬಿದ್ದ ಪರಿಣಾಮ ಬಾಲಕನ ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬಾಲಕ ಬಿದ್ದ ವಿಷಯವನ್ನು ಶಾಲೆಯವರು ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆಸ್ಪತ್ರೆಗೆ ತರುವ ಮೊದಲೇ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಮೃತದೇಹವನ್ನು ಆಸ್ಪತ್ರೆಗೆ ತಂದು ಶಾಲಾ ಆಡಳಿತ ಮಂಡಳಿಯವರು ಪರಾರಿಯಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಬಾಲಕ ಬಿದ್ದ ವಿಷಯವನ್ನು ಶಾಲೆಯವರು ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆಸ್ಪತ್ರೆಗೆ ತರುವ ಮೊದಲೇ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಮೃತದೇಹವನ್ನು ಆಸ್ಪತ್ರೆಗೆ ತಂದು ಶಾಲಾ ಆಡಳಿತ ಮಂಡಳಿಯವರು ಪರಾರಿಯಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಬಿಎಸ್‌ಎನ್‌ಎಲ್‌ ಕಚೇರಿ ಗೇಟ್‌ ಬಿದ್ದು ಬಾಲಕ ಮೃತ್ಯು

ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ BSNL ಕಚೇರಿ ಗೇಟ್ ಬಿದ್ದು ಬಾಲಕನೊಬ್ಬ ದಾರುಣವಾಗಿ ಸಾವು ಕಂಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಬಾಗಳಿ ಗ್ರಾಮದ ಎಂಟು ವರ್ಷದ ಗೌತಮ್ ಮೃತ ಬಾಲಕ.

ಪೋಷಕರೊಂದಿಗೆ ಆಧಾರ್ ಕಾರ್ಡ್ ಮಾಡಿಸಲು ಬಂದಿದ್ದ ಬಾಲಕ ಗೌತಮ್ ಆಟವಾಡುತ್ತ BSNL ಕಚೇರಿಯ ಬಳಿ ನಿಂತಿದ್ದ. ಈ ವೇಳೆ ಶಿಥಿಲವಾಗಿದ್ದ ಗೇಟ್ ಕಳಚಿ ತಲೆಯ ಮೇಲೆ ಬಿದ್ದಿದೆ. ತಲೆಗೆ ತೀವ್ರ ಪೆಟ್ಟಾದುದರಿಂದ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ. ಕಣ್ಣೆದುರಲ್ಲೇ ಆಟ ಆಡುತ್ತಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಸಂಬಂಧಿಕರು ಬಿಎಸ್‌ಎನ್‌ಎಲ್‌ ಕಚೇರಿ ಮುಂದೆ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಹರಪನಹಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ