ನವೆಂಬರ್ 24 ಮತ್ತು 25 ರಂದು ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಸಂಪರ್ಕಿಸುವ ರೈಲುಗಳು ಸ್ಥಗಿತ , ಸಮಯ ಬದಲಾವಣೆ: ಇಲ್ಲಿದೆ ಮಾಹಿತಿ
Twitter
Facebook
LinkedIn
WhatsApp
ಮಂಗಳೂರು ನ.21: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ (Mangalore Central Railway Station) ಹೆಚ್ಚುವರಿ ಪ್ಲಾಟ್‌ಫಾರ್ಮ್ ನಿರ್ಮಾಣ ಕಾಮಗಾರಿ ಆರಂಭವಾದ ಹಿನ್ನೆಲ್ಲೆಯಲ್ಲಿ ನವೆಂಬರ್ 24 ಮತ್ತು 25 ರಂದು ಎರಡು ದಿನಗಳ ಕಾಲ ರೈಲು (Train) ಸೇವೆ ಸ್ಥಗಿತಗೊಳ್ಳಲಿದೆ. ನವೆಂಬರ್ 24ರ ರೈಲು ಸಂಖ್ಯೆ 06487 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 06486 ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ರದ್ದಾಗುವ ರೈಲುಗಳು
- ರೈಲು ಸಂಖ್ಯೆ 06485 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 06484 ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಅನ್ನು ನವೆಂಬರ್ 25ರಂದು ಸಂಪೂರ್ಣ ರದ್ದುಗೊಳಿಸಲಾಗಿದೆ. ನವೆಂಬರ್ 24 ರಂದು ಮಡಗಾಂವ್ ಜಂಕ್ಷನ್‌ನಿಂದ ಹೊರಡುವ ರೈಲು ಸಂಖ್ಯೆ 10107 ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ಮೆಮು ಎಕ್ಸ್‌ಪ್ರೆಸ್ ಠೋಕೂರಿನಲ್ಲೇ ಕೊನೆಗೊಳ್ಳುತ್ತದೆ. ತೋಕೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ ರೈಲು ಭಾಗಶಃ ರದ್ದಾಗಲಿದೆ.
- ನವೆಂಬರ್ 24 ರಂದು ಮಡಗಾಂವ್ ಜಂಕ್ಷನ್‌ನಿಂದ ಹೊರಡುವ ರೈಲು ಸಂಖ್ಯೆ 06601 ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು, ಮಂಗಳೂರು ಜಂಕ್ಷನ್‌ನಲ್ಲೇ ಕೊನೆಗೊಳ್ಳುತ್ತದೆ. ರೈಲು ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ನಡುವಿನ ರೈಲುಗಳು ಭಾಗಶಃ ರದ್ದುಗಲಿವೆ.
ರೈಲು ಕಾರ್ಯಾಚರಣೆಯಲ್ಲಿ ಬದಲಾವಣೆ
- ರೈಲು ಸಂಖ್ಯೆ 10108 ಮಂಗಳೂರು ಸೆಂಟ್ರಲ್-ಮಡ್ಗಾಂವ್ ಜಂಕ್ಷನ್ ಮೆಮು ಎಕ್ಸ್‌ಪ್ರೆಸ್ ನವೆಂಬರ್ 24 ರಂದು ಮಂಗಳೂರು ಸೆಂಟ್ರಲ್ ಬದಲಿಗೆ ತೋಕೂರು ನಿಲ್ದಾಣದಿಂದ ಹೊರಡಲಿದೆ. ಮಂಗಳೂರು ಸೆಂಟ್ರಲ್ ಮತ್ತು ತೋಕೂರ್ ನಡುವೆ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗುವುದು (ತೋಕೂರಿನಲ್ಲಿ ನಿರ್ಗಮನ ಸಮಯ ಸಂಜೆ 4.25)
- ರೈಲು ಸಂಖ್ಯೆ 22638 ಮಂಗಳೂರು ಸೆಂಟ್ರಲ್-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ನವೆಂಬರ್ 24 ರಂದು ಮಂಗಳೂರು ಸೆಂಟ್ರಲ್ ಬದಲಿಗೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ. (ಮಂಗಳೂರು ಜಂಕ್ಷನ್‌ನಲ್ಲಿ ನಿಗದಿತ ನಿರ್ಗಮನ ಸಮಯ ರಾತ್ರಿ 11.45)
- ರೈಲು ಸಂಖ್ಯೆ 16610 ಮಂಗಳೂರು ಸೆಂಟ್ರಲ್-ಕೋಜಿಕೋಡ್ ಎಕ್ಸ್‌ಪ್ರೆಸ್ ನವೆಂಬರ್ 25 ರಂದು ಮಂಗಳೂರು ಸೆಂಟ್ರಲ್ ಬದಲಿಗೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ. (ಮಂಗಳೂರು ಜಂಕ್ಷನ್‌ನಲ್ಲಿ ನಿಗದಿತ ನಿರ್ಗಮನ ಸಮಯ ಬೆಳಗ್ಗೆ 5.15)
ಸಮಯ ಬದಲಾವಣೆ
- ರೈಲು ಸಂಖ್ಯೆ 06602 ಮಂಗಳೂರು ಸೆಂಟ್ರಲ್-ಮಡ್ಗಾಂವ್ ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ನವೆಂಬರ್ 21, 22, 24 ಮತ್ತು 25 ರಂದು ಮಂಗಳೂರು ಸೆಂಟ್ರಲ್‌ನಿಂದ ಬೆಳಿಗ್ಗೆ 5.30ರ ಬದಲು (30 ನಿಮಿಷ ತಡವಾಗಿ) ಬೆಳಿಗ್ಗೆ 6 ಗಂಟೆಗೆ ಹೊರಡಲಿದೆ.
- ರೈಲು ಸಂಖ್ಯೆ 16649 ಮಂಗಳೂರು ಸೆಂಟ್ರಲ್ – ನಾಗರ್‌ಕೋಯಿಲ್ ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ನವೆಂಬರ್ 25 ರಂದು ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 5.05ರ ಬದಲಾಗಿ (30 ನಿಮಿಷಗಳ ತಡವಾಗಿ) 5.35 ಕ್ಕೆ ಹೊರಡಲುತ್ತದೆ.
- ರೈಲು ಸಂಖ್ಯೆ 22637 ನವೆಂಬರ್ 24 ರಂದು ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಹೊರಡಲಿರುವ ಮಂಗಳೂರು ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ಮಾರ್ಗದಲ್ಲಿ 30 ನಿಮಿಷಗಳ ಕಾಲ ನಿಲ್ಲಿಸಲಾಗುತ್ತದೆ.