ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಇಂದು ಈ ವರ್ಷದ ಕೊನೆಯ ಚಂದ್ರಗ್ರಹಣ ; ರಾತ್ರಿ 11.31ಕ್ಕೆ ಆರಂಭ!

Twitter
Facebook
LinkedIn
WhatsApp
ಇಂದು ಈ ವರ್ಷದ ಕೊನೆಯ ಚಂದ್ರಗ್ರಹಣ ; ರಾತ್ರಿ 11.31ಕ್ಕೆ ಆರಂಭ!
– ಗ್ರಹಣದ ಸಮಯದಲ್ಲಿ, ನಂತರ ಏನು ಮಾಡಬೇಕು..?

ಬೆಂಗಳೂರು: ಇಂದು (ಶನಿವಾರ) ಈ ವರ್ಷದ ಕೊನೆಯ ಗ್ರಹಣವಾಗಿರುವ ಚಂದ್ರಗ್ರಹಣ (Lunar Eclipse) ಸಂಭವಿಸಲಿದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಉಂಟಾಗುತ್ತದೆ. ಚಂದ್ರ ಮಸುಕಾಗಿ ಕಾಣುತ್ತ ಬಳಿಕ ಕ್ರಮೇಣ ಕೆಂಪಾಗುವುದು ಚಂದ್ರಗ್ರಹಣದ ಸಂದರ್ಭದಲ್ಲಿ ನಡೆಯುತ್ತದೆ.

ಇಂದು ರಾತ್ರಿ 11.31ಕ್ಕೆ ಆರಂಭವಾಗಲಿರುವ ಈ ಭಾಗಶಃ ಚಂದ್ರಗ್ರಹಣ (Chandra Grahan 2023), ಬೆಳಗ್ಗಿನ ಜಾವ 3.36 ಹಾಗೆ ಕೊನೆಯಾಗಲಿದೆ. ರಾತ್ರಿ 11.31ರ ಹಾಗೆ ಗ್ರಹಣ ಆರಂಭವಾದರೂ ಅದರ ಸಂಪೂರ್ಣ ಛಾಯೆ ಮಧ್ಯರಾತ್ರಿ ಬಳಿಕವೇ ಅಂದರೆ ರಾತ್ರಿ 1.05ರ ಹಾಗೆ ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆ. ಭಾನುವಾರ ರಾತ್ರಿ 2.24ರವರೆಗೂ ಇರಲಿದೆ. ಹೀಗಾಗಿ ಗ್ರಹಣದ ಈ ಅವಧಿ ಸುಮಾರು 1.19 ನಿಮಿಷದ್ದಾಗಿರಲಿದೆ. ಇಂದಿನ ಭಾಗಶಃ ಚಂದ್ರಗ್ರಹಣ ದೇಶಾದ್ಯಂತ ಗೋಚರಿಸಲಿದೆ.

ಚಂದ್ರಗ್ರಹಣ ವಿಶೇಷತೆ ಏನು..?:

ಈ ಚಂದ್ರಗ್ರಹಣ ಅಶ್ವಿನಿ ನಕ್ಷತ್ರದಲ್ಲಿ ಸಂಭವಿಸಲಿದೆ. 30 ವರ್ಷಗಳಿಗೊಮ್ಮೆ ಸಂಭವಿಸಬಹುದಾದ ಅಪರೂಪ ವಿಸ್ಮಯ ಸಮಯದಲ್ಲಿ ಚಂದ್ರ ಮೇಷ ರಾಶಿಯಲ್ಲಿರಲಿದ್ದಾನೆ. ಗುರು-ಚಂದ್ರರು ಸೇರಿ ಮೇಷದಲ್ಲಿ ಗಜಕೇಸರಿ ಯೋಗ ರೂಪಿಸುವರು. ಗಜಕೇಸರಿ ಯೋಗದಲ್ಲಿ ಗ್ರಹಣ ಸಂಭವಿಸೋದ್ರಿಂದ ಕೆಲ ರಾಶಿಯವರಿಗೆ ಯೋಗ ಎಂದು ನಂಬಲಾಗಿದೆ.

ಪುರಾಣದ ನಂಬಿಕೆಯ ಪ್ರಕಾರ, ಹುಣ್ಣಿಮೆಯ ರಾತ್ರಿ ರಾಹು ಮತ್ತು ಕೇತು ಚಂದ್ರನನ್ನು ಆವರಿಸಲು ಪ್ರಯತ್ನಿಸಿದಾಗ ಚಂದ್ರನ ಮೇಲೆ ಗ್ರಹಣ ಸಂಭವಿಸುತ್ತದೆ. ಅದೇ ಸಮಯದಲ್ಲಿ ಸೂತಕ ಅವಧಿಯು ಚಂದ್ರಗ್ರಹಣಕ್ಕೆ ಕೆಲವು ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಇಂತಹ ಗ್ರಹಣದ ಸಂದರ್ಭ ಏನು ಮಾಡಿದ್ರೇ ಒಳಿತು..? ಚಂದ್ರಗ್ರಹಣದ ಎಫೆಕ್ಟ್ ನಿಂದ ಪಾರಾಗಲು ದಾರಿ ಇದ್ಯಾ..? ಮನಃಕಾರಕ ಚಂದ್ರನಿಗೆ ಗ್ರಹಣವಾದ್ರೇ ಪ್ರಭಾವ ಹೇಗಿರಲಿದೆ..? ಚಂದ್ರಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಡೀಟೈಲ್ ಇಲ್ಲಿದೆ.

ಗ್ರಹಣ ವೇಳೆ ಏನು ಮಾಡಬೇಕು..?: 

ಇಂದು ಮಧ್ಯಾಹ್ನ 2.55ರಿಂದ ಗ್ರಹಣದ ಸೂತಕ ಆವರಿಸಲಿದೆ. ಹೀಗಾಗಿ ಮಧ್ಯಾಹ್ನ 2.55 ಗಂಟೆಯೊಳಗೆ ಊಟ ಮುಗಿಸಬೇಕು. ಬಿಳಿ ಬಟ್ಟೆಯಲ್ಲಿ ಉದ್ದಿನ ಬೇಳೆ-ಅಕ್ಕಿ ಗಂಟು ಕಟ್ಟಿ ದೇವರ ಮನೆಯಲ್ಲಿಡಿ. ಅಶ್ವಿನಿ ನಕ್ಷತ್ರ… ಮೇಷ ರಾಶಿಯವರು ತಪ್ಪದೇ ಈ ಕ್ರಿಯೆ ಮಾಡಿ. ಮನೆ ಮೇಲೆ ಅಥವಾ ಕಾಂಪೌಂಡ್ ಮೇಲೆ ಮೊಸರು ಅನ್ನ ಇಟ್ಟರೆ ಶಾಂತಿ. ಗ್ರಹಣ ಮೋಕ್ಷ ಬಳಿಕ ಬೆಳಗ್ಗೆ 5 ಗಂಟೆಗೆ ಸ್ನಾನ ಮಾಡಿ. ಚಂದ್ರ ಹಾಗೂ ರಾಹುವಿನ ಪ್ರಾರ್ಥನೆ ಮಾಡಿದ್ರೆ ಒಳಿತು. ಮಕರ, ಕುಂಭ, ತುಲಾ ರಾಶಿಯವರು ಮಹಾಲಕ್ಷ್ಮಿ ಪ್ರಾರ್ಥನೆ ಮಾಡಿ. ಶಿವನ ಆರಾಧನೆ ಮಾಡಿದ್ರೆ ಗ್ರಹಣದ ದೋಷ ನಿವಾರಣೆಯಾಗುತ್ತದೆ.

ಗ್ರಹಣ ವೇಳೆ ಏನು ಮಾಡಬಾರದು..?:

 ಗ್ರಹಣದ ಸೂತಕ ಕಾಲದಿಂದ ಆಹಾರ ಸೇವನೆ ಬೇಡ. ಯಾರೂ ಗ್ರಹಣ ಸಂದರ್ಭ ಹೊರಗೆ ಬರಬಾರದು. ಗರ್ಭಿಣಿಯರಂತೂ ಮನೆಯೊಳಗೆ ವಿಶ್ರಾಂತಿಯಲ್ಲಿದ್ದರೆ ಒಳ್ಳೆಯದು. ಅನಾರೋಗ್ಯ, ಅಶಕ್ತರು, ಮಕ್ಕಳು ಆಹಾರ ಸೇವಿಸದೆ ಇರಬಾರದು. ಗ್ರಹಣದ ಸಮಯದಲ್ಲಿ ಅಡುಗೆ ಕೆಲಸಗಳನ್ನು ಮಾಡಬಾರದು.

ಗ್ರಹಣ ಮೋಕ್ಷ ನಂತರ ಏನು ಮಾಡಬೇಕು?: ಗ್ರಹಣ ಮೋಕ್ಷ ನಂತರ ಸ್ನಾನ ಮಾಡಿ ದೇವರಿಗೆ ದೀಪಹಚ್ಚಿ. ಬಳಿಕ ವಿಷ್ಣು ಅಥವಾ ಶಿವನ ದರ್ಶನ ಮಾಡಬೇಕು. ದೇವಾಯಗಳಲ್ಲಿ ಅಕ್ಕಿ, ಉದ್ದಿನಬೇಳೆ ದಾನ ಮಾಡಬೇಕು. ಅನುಕೂಲ ಇದ್ದವರು ಚಂದ್ರ ಬಿಂಬದಾನ ಮಾಡಬಹುದು. ಮೇಷ ರಾಶಿಯವರು ಕ್ಷೀರ, ಅಕ್ಕಿ, ಹಾಲಿನ ದಾನ ಮಾಡಬೇಕು. ದುರ್ಗಿ, ಕಾಳಿ ದರ್ಶನ ಮಾಡಿದ್ರೆ ಒಳ್ಳೆಯದು. ಚಂಡಿಕಾ ಹೋಮ, ಪಾರಯಣದಲ್ಲಿ ಭಾಗಿಯಾದ್ರೆ ಒಳ್ಳೆಯದು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist