ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಈರುಳ್ಳಿ ದರ ಏರಿಕೆ ಬಿಸಿ; ಮತ್ತಷ್ಟು ಏರಿಕೆ ಸಾಧ್ಯತೆ!

Twitter
Facebook
LinkedIn
WhatsApp
ಈರುಳ್ಳಿ ದರ ಏರಿಕೆ ಬಿಸಿ; ಮತ್ತಷ್ಟು ಏರಿಕೆ ಸಾಧ್ಯತೆ!

ನವದೆಹಲಿ, ಅಕ್ಟೋಬರ್ 27: ಜುಲೈನಿಂದ ಸೆಪ್ಟೆಂಬರ್​ವರೆಗೂ ಟೊಮೆಟೋ ಬೆಲೆ ಸತತವಾಗಿ ಏರಿಕೆಯಾಗಿ 200 ರೂಗೂ ಹೆಚ್ಚು ಬೆಲೆಗೆ ಹೋಗಿದ್ದನ್ನು ನೋಡಿದ್ದೇವೆ. ಇದೀಗ ಈರುಳ್ಳಿಯೂ (Onion Price) ಅದೇ ಹಾದಿ ಹಿಡಿಯುವಂತಿದೆ. ಕಳೆದ ಎರಡು ವಾರದಲ್ಲಿ ಈರುಳ್ಳಿ ಬೆಲೆ ಶೇ. 50ರಷ್ಟು ಏರಿಕೆ ಆಗಿದೆ. ಭಾರತದಾದ್ಯಂತ ಟೊಮೆಟೋ ರೀತಿಯಲ್ಲಿ ಅಡುಗೆಗೆ ಸರ್ವೇ ಸಾಮಾನ್ಯವಾಗಿ ಬಳಕೆಯಾಗುವ ಈರುಳ್ಳಿ ಬೆಲೆ ಏರಿದರೆ ಜನಸಾಮಾನ್ಯರಿಗೆ ಕಷ್ಟಕರ ಎನಿಸುವುದು ಸಹಜ. ದೆಹಲಿ ಎನ್​ಸಿಆರ್ ಪ್ರದೇಶದ ರೀಟೇಲ್ ಮಳಿಗೆಗಳಲ್ಲಿ ಈರುಳ್ಳಿ ಬೆಲೆ ಕಿಲೋಗೆ 70 ರೂವರೆಗೂ ಮಾರಾಟವಾಗುತ್ತಿದೆ.

ನ್ಯೂಸ್9 ವರದಿ ಪ್ರಕಾರ, ಕಳಪೆ ಗುಣಮಟ್ಟದ ಈರುಳ್ಳಿಯೇ ಕಿಲೋಗೆ 50 ರೂ ಬೆಲೆ ಪಡೆದಿದೆ. ಉತ್ತಮ ಗುಣಮಟ್ಟದ ಈರುಳ್ಳಿ 70 ರೂವರೆಗೆ ಸೇಲ್ ಆಗುತ್ತಿದೆ. ಆದರೆ, ಈರುಳ್ಳಿ ಬೆಲೆ ಟೊಮೆಟೋ ರೀತಿ ಗಗನಕ್ಕೇರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಡಿಸೆಂಬರ್​ನಲ್ಲಿ ಹೊಸ ಈರುಳ್ಳಿ ಆವಕ ಬರಲಿದ್ದು, ಬೆಲೆ ಕಡಿಮೆ ಆಗುವ ನಿರೀಕ್ಷೆ ಇದೆ.

ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಈರುಳ್ಳಿ ರಫ್ತಿನ ಮೇಲೆ ಶೇ. 40ರಷ್ಟು ಸುಂಕ ವಿಧಿಸಿತ್ತು. ದೇಶೀಯವಾಗಿ ಈರುಳ್ಳಿ ಸಂಗ್ರಹ ಹೆಚ್ಚು ಇರಲಿ ಎಂಬ ಕಾರಣಕ್ಕೆ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಆದರೆ, ಇಷ್ಟರಲ್ಲಾಗಲೇ ಹೊಸ ಈರುಳ್ಳಿ ಆವಕ ಬರಬೇಕಿತ್ತು. ಅದರ ಆಗಮನ ವಿಳಂಬವಾಗಿರುವುದರಿಂದ ಈರುಳ್ಳಿ ಅಭಾವ ಸೃಷ್ಟಿಯಾಗಿ ಬೆಲೆ ಏರಿಕೆಗೆ ಕಾರಣವಾಗಿದೆ. ಡಿಸೆಂಬರ್​ನಲ್ಲಿ ಹೊಸ ಈರುಳ್ಳಿ ಆಗಮನದಿಂದ ಬೆಲೆ ಕಡಿಮೆ ಆಗಬಹುದು.

ಭಾರತದಲ್ಲಿ ಒಂದು ವರ್ಷದಲ್ಲಿ 30 ಮಿಲಿಯನ್ ಮೆಟ್ರಿಕ್ ಟನ್​ಗಳಿಗೂ ಹೆಚ್ಚು ಈರುಳ್ಳಿ ಉತ್ಪಾದನೆ ಆಗುತ್ತದೆ. ಇದರಲ್ಲಿ ಮಹಾರಾಷ್ಟ್ರವೊಂದರಲ್ಲೇ ಶೇ. 30ರಷ್ಟು ಉತ್ಪಾದನೆ ಆಗುತ್ತದೆ. ನಂತರದ ಸ್ಥಾನದಲ್ಲಿ ಕರ್ನಾಟಕ ಮತ್ತು ಗುಜರಾತ್ ಇವೆ. ಈ ಮೂರು ರಾಜ್ಯಗಳಲ್ಲೇ ಶೇ. 60ಕ್ಕಿಂತಲೂ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತಿದೆ.

ಗೋಧಿ, ಅಕ್ಕಿ ಬೆಲೆಗಳೂ ಮೇಲ್ಮುಖ

ಈಗ ಈರುಳ್ಳಿ ಮಾತ್ರವಲ್ಲ, ಅಗತ್ಯ ಆಹಾರ ಪದಾರ್ಥಗಳೆನಿಸಿದ ಗೋಧಿ, ಅಕ್ಕಿ ಇತ್ಯಾದಿಗಳ ಬೆಲೆಯೂ ಹೆಚ್ಚಿದೆ. ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯ ಬೆಲೆ ಹೆಚ್ಚಳ ಮಿತಿಮೀರದಂತೆ ನಿಯಂತ್ರಿಸಲು ಸರ್ಕಾರ ರಫ್ತು ನಿರ್ಬಂಧ ಹಾಕಿದೆ. ಇನ್ನು ಗೋಧಿ ಬೆಲೆ ಎಂಟು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ. ಸರ್ಕಾರ ತನ್ನ ಬಳಿ ಇರುವ ಗೋಧಿ ದಾಸ್ತಾನನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ವಾರಕ್ಕೊಮ್ಮೆ ಗೋಧಿ ಹರಾಜು ನಡೆಯುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ