ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರೋಹಿತ್​ ಶರ್ಮರನ್ನು ಭೇಟಿಯಾದ ದಿ ಗ್ರೇಟ್​ ಖಲಿ!

Twitter
Facebook
LinkedIn
WhatsApp
ರೋಹಿತ್​ ಶರ್ಮರನ್ನು ಭೇಟಿಯಾದ ದಿ ಗ್ರೇಟ್​ ಖಲಿ!

ನವದೆಹಲಿ: ವಿಶ್ವಕಪ್​ ಟೂರ್ನಿ ಆರಂಭವಾಗಿ ಎರಡು ದಿನಗಳು ಕಳೆದಿವೆ. ಅ.8ರ ಭಾನುವಾರದಂದು ಆತಿಥೇಯ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ಚೆನ್ನೈನಲ್ಲಿ ಆಡಲಿದೆ. ಹೀಗಾಗಿ ರೋಹಿತ್​ ಶರ್ಮ ಪಡೆಗೆ ಸಾಕಷ್ಟು ಶುಭಾಶಯಗಳು ಹರಿದುಬರುತ್ತಿವೆ. ಇದರ ನಡುವೆ ಮಾಜಿ ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ದಿ ಗ್ರೇಟ್​ ಖಲಿ ಅವರು ಅಹಮದಾಬಾದ್​ನಲ್ಲಿ ರೋಹಿತ್​ರನ್ನು ಭೇಟಿಯಾಗಿ ಶುಭ ಕೋರಿದ್ದಾರೆ.

ತಂಡದ ಆಟಗಾರರು ಸದ್ಯ ಚೆನ್ನೈನಲ್ಲಿ ಬೀಡು ಬಿಟ್ಟಿದ್ದು, ಅಭ್ಯಾಸದಲ್ಲಿ ನಿರತರಾಗಿದ್ದಾರೆ. ವಿಶ್ವಕಪ್​ ಪೂರ್ವ ನಾಯಕರ ಸಭೆಗಾಗಿ ರೋಹಿತ್,​ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇರುವಾಗ ಖಲಿ ಅವರು ಭೇಟಿಯಾಗಿದ್ದಾರೆ. ಇದೇ ಕ್ರೀಡಾಂಗಣದಲ್ಲಿ ಅ.5ರಂದು ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್​ ವಿರುದ್ಧ ಉದ್ಘಾಟನಾ ಪಂದ್ಯ ನಡೆಯಿತು.

ಭೇಟಿ ಮಾಡಿದ್ದಲ್ಲದೆ, ಇದೇ ಸಂದರ್ಭದಲ್ಲಿ ಖಲಿ ಪಾಕಿಸ್ತಾನ ಕ್ರಿಕೆಟ್​ ತಂಡಕ್ಕೆ ಸಂದೇಶವೊಂದನ್ನು ರವಾನಿಸಿದ್ದಾರೆ. ಇನ್​ಸ್ಟಾಗ್ರಾಂ ಸ್ಟೋರಿ ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಅವರು ಕ್ರಿಕೆಟ್​ನ ಬಹುದೊಡ್ಡ ಅಭಿಮಾನಿ ಎಂಬ ಟ್ಯಾಗ್​ ಧರಿಸಿದರು. ನಾನು ಪಾಕಿಸ್ತಾನ ತಂಡವನ್ನು ಮಣಿಸಲು ರೆಡಿಯಾಗಿದ್ದೇನೆ. ಆ ಬಳಿಕ ನಾನಿಲ್ಲಿ ವಿಶ್ವಕಪ್​ ಗೆಲ್ಲುತ್ತೇನೆ. ಭಾರತ ಜಿಂದಾಬಾದ್​ ಎಂದು ಬ್ಯಾಟ್​ ಹಿಡಿದು ಕ್ಯಾಮೆರಾ ಮುಂದೆ ಹೇಳುವ ಮೂಲಕ ಪಾಕ್​ ತಂಡಕ್ಕೆ ಸಂದೇಶ ರವಾನಿಸಿ, ಭಾರತ ತಂಡಕ್ಕೆ ಶುಭಕೋರಿದ್ದಾರೆ.

ಆಸ್ಟ್ರೇಲಿಯಾ ಎದುರ ಭಾನುವಾರ ಆರಂಭವಾಗುವ ಪಂದ್ಯಕ್ಕೂ ಮುನ್ನವೇ ಭಾರತ ತಂಡಕ್ಕೆ ಚಿಂತೆಯೊಂದು ಕಾಡುತ್ತಿದೆ. ಒಳ್ಳೆಯ ಬ್ಯಾಟಿಂಗ್​ ಲಯದಲ್ಲಿರುವ ಶುಭಮನ್​ ಗಿಲ್​ಗೆ ಡೆಂಘೆ ಜ್ವರ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಆಸಿಸ್​ ವಿರುದ್ಧದ ಪಂದ್ಯಕ್ಕೆ ಲಭ್ಯವಾಗುವುದು ಅನುಮಾನವಾಗಿದೆ. ಹೀಗಾಗಿ ಯಾರು ರೋಹಿತ್​ ಜತೆ ಆರಂಭಿಕರಾಗಿ ಕಣಕ್ಕಿಳಿಸೋದು ಎಂಬ ಚಿಂತೆ ಇದೆ. ಒಂದು ವೇಳೆ ಗಿಲ್​ ಆಡಲು ಸಾಧ್ಯವಾಗದೇ ಇದ್ದರೆ ಇಶಾನ್​ ಕಿಶಾನ್​ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಗಿಲ್​ ಆರೋಗ್ಯ ಸ್ಥಿತಿಯ ಬಗ್ಗೆ ಬಿಸಿಸಿಐ ಇನ್ನು ಖಚಿತಪಡಿಸಬೇಕಿದೆ.

ಗಿಲ್​ ಅವರನ್ನು ವೈದ್ಯಕೀಯ ತಂಡವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅವರು ಶೀಘ್ರದಲ್ಲೇ ಗುಣಮುಖರಾಗುತ್ತಾರೆಂದು ನಾವು ಭಾವಿಸುತ್ತೇವೆ. ವೈದ್ಯಕೀಯ ತಂಡದಿಂದ ಹೆಚ್ಚಿನ ಮಾಹಿತಿಗಾಗಿ ನಾವು ಕಾಯಬೇಕಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಗಿಲ್​ 2023ರಲ್ಲಿ ಒಳ್ಳೆಯ ಬ್ಯಾಟಿಂಗ್​ ಪ್ರದರ್ಶನವನ್ನು ನೀಡಿದ್ದಾರೆ. ಕೇವಲ 20 ಏಕದಿನ ಪಂದ್ಯಗಳನ್ನು ಆಡಿರುವ ಗಿಲ್​, 1230 ರನ್​ಗಳೊಂದಿಗೆ ಈ ವರ್ಷ ಮುಂಚೂಣಿಯಲ್ಲಿ ಇರುವ ರನ್​ ಸ್ಕೋರರ್​ ಎನಿಸಿಕೊಂಡಿದ್ದಾರೆ. 72.35 ರನ್​ ಸರಾಸರಿಯೊಂದಿಗೆ 105.03 ಸ್ಟ್ರೈಕ್​ ರೇಟ್​ ಅನ್ನು ಹೊಂದಿದ್ದಾರೆ. ಐದು ಶತಕ ಮತ್ತು ಐದು ಅರ್ಧ ಶತಕಗಳೊಂದಿಗೆ ಒಂದೇ ವರ್ಷದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿರುವ ಭಾರತೀಯ ಅಗ್ರಗಣ್ಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಗಿಲ್​ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ ಮತ್ತು ಸಚಿನ್​ ತೆಂಡೂಲ್ಕರ್​ ಇದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾ ಕಪ್​ನಲ್ಲೂ ಗಿಲ್​ ಒಳ್ಳೆಯ ರನ್​ ಕಲೆಹಾಕಿದರು. ತಮ್ಮ ಹೆಸರಿನಲ್ಲಿ 302 ರನ್​ ದಾಖಲಿಸಿದ ಗಿಲ್​, ಐಸಿಸಿ ಏಕದಿನ ಬ್ಯಾಟ್ಸ್​ಮೆನ್​ಗಳ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರು ಒಂದೇ ವರ್ಷದಲ್ಲಿ ಗಳಿಸಿದ 1894 ರನ್​ಗಳ ವಿಶ್ವದಾಖಲೆಯನ್ನು ಮುರಿಯಲು ಈ ಕ್ಯಾಲೆಂಡರ್​ ವರ್ಷದಲ್ಲಿ ಗಿಲ್​ ಅವರಿಗೆ 665 ರನ್​ ಮಾತ್ರ ಬಾಕಿ ಇದೆ.

ಡೆಂಘೆಯಿಂದ ಚೇತರಿಸಿಕೊಂಡು ಮತ್ತೊಮ್ಮೆ ಆಟದಲ್ಲಿ ಹೊಂದಿಕೊಳ್ಳಲು 7 ರಿಂದ 10 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದಾಗ್ಯೂ, ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದರೆ, ಅದು ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. ನಾಳೆ ಪಂದ್ಯ ನಡೆಯಲಿದ್ದು, ಗಿಲ್​ ಆಡ್ತಾರಾ ಅಥವಾ ಇಲ್ಲವಾ ಎಂಬುದು ಇಂದು ಸಂಜೆ ಒಳಗೆ ಖಚಿತವಾಗುವ ಸಾಧ್ಯತೆ ಇದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ