ಖ್ಯಾತ ನೀಲಿ ಚಿತ್ರತಾರೆ 36ನೇ ವಯಸ್ಸಿಗೆ ಆತ್ಮಹತ್ಯೆ..!
ಪಾರ್ಮಾ: ಪ್ರಖ್ಯಾತ ನೀಲಿ ಚಿತ್ರತಾರೆ ಕೆನಿ ಲಿನ್ ಕಾರ್ಟರ್ ಕೇವಲ 36ನೇ ವಯಸ್ಸಿಗೆ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ವಿಚಾರವನ್ನು ಆಕೆಯ ಸ್ನೇಹಿತರು ಹಾಗೂ ಆಪ್ತವಲಯ ಖಚಿತಪಡಿಸಿದೆ. ಯುನೈಟೆಡ್ ಸ್ಟೇಟ್ಸ್‌ನ ಪಾರ್ಮಾದಲ್ಲಿರುವ ತಮ್ಮ ನಿವಾಸದಲ್ಲೇ ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಒಳ್ಳೆಯ ಕಾರ್ಯಕ್ಕಾಗಿ ಆಕೆಯ ಸ್ನೇಹಿತರ ಬಳಗ GoFundMe ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದೆ.
ಅಪಾರ ಪ್ರತಿಭೆ ಹಾಗೂ ಸ್ವಸಾಮರ್ಥ್ಯದ ಮೂಲಕ ಗಮನ ಸೆಳೆದಿದ್ದ ಕೆನಿ ಲಿನ್ ಕಾರ್ಟರ್ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದೊಂದು ವರ್ಷದಿಂದ ಈ ಸಮಸ್ಯೆಯ ವಿರುದ್ದ ಹೋರಾಡುತ್ತಿದ್ದ ಅವರು ಕೊನೆಗೂ ಆತ್ಮಹತ್ಯೆ ಮಾಡಿಕೊಂಡಿದ್ದು ದುರಾದೃಷ್ಟಕರ ಎಂದು ಆಕೆಯ ಆಪ್ತವಲಯ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ.
ಕೆನಿ ಲಿನ್ ಕಾರ್ಟರ್ ಅವರು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಆಕೆಯ ತಾಯಿ ಟಿನಾ ಅವರು ಅನಾಥರಾಗಿದ್ದಾರೆ. ಟಿನಾ ಅವರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಮಾನಸಿಕ ಆರೋಗ್ಯದ ಕುರಿತಂತೆ ಜಾಗೃತಿ ಮೂಡಿಸಲು ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇನ್ನು ಒಂದು ವೇಳೆ ನಿರೀಕ್ಷೆಗೂ ಮೀರಿದ ಮೊತ್ತದ ದೇಣಿಗೆ ಸಂಗ್ರಹವಾದರೆ ಹೆಚ್ಚುವರಿ ಹಣವನ್ನು ಪ್ರಾಣಿಗಳ ರಕ್ಷಣೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ
Adult film star Kagney linn Karter passed away to suicide at age 36 🕊..rip pic.twitter.com/kp98zacvHH
— Oneofakind (@0ne0f2kind) February 20, 2024
ಯಾರು ಈ ಕೆನಿ ಲಿನ್ ಕಾರ್ಟರ್?
ಕೆನಿ ಲಿನ್ ಕಾರ್ಟರ್ ಲಾಸ್ ಏಂಜಲೀಸ್ ಮೂಲದ ಓರ್ವ ನೃತ್ಯಗಾರ್ತಿಯಾಗಿದ್ದರು. ಇದರ ಜತೆಗೆ ಆಕೆ ಒಳ್ಳೆಯ ಹಾಡುಗಾರ್ತಿ ಹಾಗೂ ಪರ್ಫಾಮರ್ ಕೂಡಾ ಆಗಿದ್ದಳು. 2019ರ ನವೆಂಬರ್‌ನಲ್ಲಿ ಆಕೆ ಮೊದಲ ಬಾರಿಗೆ ಕ್ಲೇವ್‌ಲ್ಯಾಂಡ್ ಸ್ಟುಡಿಯೋಗೆ ಎಂಟ್ರಿ ಕೊಟ್ಟಳು. ಇದಾದ ಬಳಿಕ ಆಕೆ ಹೊಸ ಸಾಹಸಕ್ಕೆ ಸಿದ್ದಳಾದಳು. ಅವರು ಹೊಸ ನೀಲಿ ಜಗತ್ತಿಗೆ ಬರುವಾಗ ಆಕೆ ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಅದೇ ರೀತಿ ಕೆನಿ ಲಿನ್ ಕಾರ್ಟರ್‌ಗೂ ಆ ಜಗತ್ತಿನ ಪರಿಚಯ ಇರಲಿಲ್ಲ.
ಇನ್ನು ಕೆನಿ ಲಿನ್ ಕಾರ್ಟರ್ 2000ರಿಂದ 2020ರ ಮಧ್ಯಭಾಗದಲ್ಲಿ ಅಡಲ್ಟ್ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಕೆನಿ ಲಿನ್ ಕಾರ್ಟರ್ ತಮ್ಮ ಅಮೋಘ ಪ್ರತಿಭೆ ಮೂಲಕ ಹಲವಾರು AVN (ಅಡಲ್ಟ್ ವಿಡಿಯೋ ನ್ಯೂಸ್)ಅವಾರ್ಡ್ಸ್‌ಗಳು ಆಕೆಯನ್ನು ಹುಡುಕಿಕೊಂಡು ಬಂದವು. ಇನ್ನು ಇದಾದ ಬಳಿಕ 2019ರಲ್ಲಿ ಆಕೆ ಲಾಸ್ ಏಂಜಲೀಸ್‌ನಿಂದ ಜಾಗ ಬದಲಿಸಿ ತನ್ನ ನೆಚ್ಚಿನ ಪೋಲ್ ಡ್ಯಾನ್ಸಿಂಗ್ ಕಡೆ ಗಮನ ಹರಿಸಿದರು. ನಂತರ ಒಹಿಯೋ ಸ್ಟುಡಿಯೋದಲ್ಲಿ ಪೋಲ್ ಡ್ಯಾನ್ಸಿಂಗ್ ಮಾಡಲಾರಂಭಿಸಿದರು. ಇದಾದ ನಂತರ ಸ್ವಂತ ಸ್ಟುಡಿಯೋ ಆರಂಭಿಸಲು ತೀರ್ಮಾನಿಸಿದರು. ಅಡಲ್ಟ್ ಸಿನಿಮಾಗಳಿಗಿಂತ ಪೋಲ್ ಡ್ಯಾನ್ಸಿಂಗ್ ಆಕೆಗೆ ತೃಪ್ತಿಕೊಡಲಾರಂಭಿಸಿತು.