ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸೂಪರ್ ಸ್ಟಾರ್ ಪ್ರಭಾಸ್..!

ಮಂಗಳೂರು : ತೆಲುಗು ಚಿತ್ರರಂಗದ ಖ್ಯಾತ ಸಲಾರ್ ಖ್ಯಾತಿಯ ಸೂಪರ್ ಸ್ಟಾರ್ ಪ್ರಭಾಸ್ ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದಿದ್ದಾರೆ.
ಸಲಾರ್ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಟ ಪ್ರಭಾಸ್ ಮತ್ತು ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಜೊತೆಯಾಗಿ ಕಟೀಲಿಗೆ ಆಗಮಿಸಿದ್ದರು. ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣ ಅಸ್ರಣ್ಣ ದೇವಳ ವತಿಯಿಂದ ಶ್ರೀ ದುರ್ಗೆಯ ಫೋಟೊ ನೀಡಿ ಗೌರವಿಸಿದರು. ಸಲಾರ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಕಟೀಲು ದುರ್ಗೆಯ ಪರಮಭಕ್ತರಾಗಿದ್ದಾರೆ. ಆಗಿಂದಾಗ್ಗೆ ಕಟೀಲು ದೇವಸ್ಥಾನಕ್ಕೆ ಬರುತ್ತಿರುತ್ತಾರೆ ಆದ್ರೆ.ಪ್ರಭಾಸ್ ಇದೇ ಮೊದಲ ಬಾರಿಗೆ ಕಟೀಲಿಗೆ ಬಂದಿದ್ದಾರೆ.
ಅಂದ ಹಾಗೇ ಸಲಾರ್ ಸಿನಿಮಾ ಯಶಸ್ಸಿನ ಬಳಿಕ ನಟ ಪ್ರಭಾಸ್, ಹೊಸ ಸಿನಿಮಾ ಕಲ್ಕಿ 2898 ಎಡಿ ಚಿತ್ರದಿಂದಲೂ ಹೊಸ ಅಪ್‌ಡೇಟ್ ಸಿಕ್ಕಿದೆ. ಮೇ 9ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದ್ದು, ಅದರ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಚಿತ್ರತಂಡ ಘೋಷಿಸಿದೆ. ಇದೀಗ ಇದೆಲ್ಲದರ ಮಧ್ಯೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪ್ರಭಾಸ್ ಭೇಟಿ ಅಚ್ಚರಿ ತಂದಿದೆ.
ಅರವಿಂದ್ ಅಯ್ಯರ್, ಸಿರಿ ಜೋಡಿಯ ‘ಬಿಸಿ ಬಿಸಿ ಐಸ್ ಕ್ರೀಮ್’ ಟ್ರೈಲರ್ ರಿಲೀಸ್
ಕಹಿ’ ಮತ್ತು ‘ಅಳಿದು ಉಳಿದವರು’ ಸಿನಿಮಾ ನಿರ್ದೇಶಿಸಿದ್ದ ಅರವಿಂದ್ ಶಾಸ್ತ್ರಿ ‘ಬಿಸಿ ಬಿಸಿ ಐಸ್ ಕ್ರೀಮ್’ (Bisi Bisi Ice Cream) ತಿನಿಸೋದಿಕ್ಕೆ ಬರ್ತಿದ್ದಾರೆ. ಈ ವಿಭಿನ್ನ ಟೈಟಲ್ ನ ಚಿತ್ರದ ಟ್ರೈಲರ್ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಿನ್ನೆ ಬಿಡುಗಡೆ ಮಾಡಲಾಗಿತು. ಈ ಸಂದರ್ಭದಲ್ಲಿ ಚಿತ್ರತಂಡ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಅರವಿಂದ್ ಶಾಸ್ತ್ರಿ ಮಾತನಾಡಿ, ಕ್ಯಾಬ್ ಡ್ರೈವರ್ ವೃತ್ತಿ ಬಗ್ಗೆ ನಾವು ಹೇಳಲು ಹೊರಟಿಲ್ಲ. ಆ ವ್ಯಕ್ತಿಯ ಕಥೆಯನ್ನು ನಾವು ಸಿನಿಮಾದಲ್ಲಿ ಹೇಳಲು ಹೊರಟಿದ್ದೇವೆ. ಶೂಟಿಂಗ್ ಕಳೆದು ವರ್ಷ ಮುಗಿಸಿದ್ದೇವೆ. ಒಬ್ಬ ಒಂಟಿ ಕ್ಯಾಬ್ ಡ್ರೈವರ್ ಲೈಫ್‌ನಲ್ಲಿ ಹುಡುಗಿ ಬಂದಾಗ ಅಡ್ವೆಂಚರ್ಸ್, ಮಿಸ್ ಅಡ್ವೆಂಚರ್ಸ್ ಆಗುತ್ತದೆ ಅನ್ನೋದು ಸಿನಿಮಾ ಕಥೆಯಾಗಿದ್ದು, ಇದೀಗ ಸಿನಿಮಾದ ಶೂಟಿಂಗ್ ಮುಗಿದಿದೆ.
ನಟ ಅರವಿಂದ್ ಅಯ್ಯರ್ (Aravind Iyer) ಮಾತನಾಡಿ, ನನ್ನದು ವಿಭಿನ್ನ ಪಾತ್ರ. ಈ ಪಾತ್ರಕ್ಕಾಗಿ ವರ್ಕೌಟ್ ಬಿಟ್ಟಿದ್ದೇನೆ. ನಟನೆ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ. ಬಹಳ ಮಜಾ ಮಾಡಿಕೊಂಡು ಕೆಲಸ ಮಾಡಿದ್ದೇನೆ ಎಂದರು.
ನಾಯಕಿ ಸಿರಿ ರವಿಕುಮಾರ್ ಮಾತನಾಡಿ, ನಾನು ಅರವಿಂದ್ ಶಾಸ್ತ್ರಿ ಅವರ ಕಹಿ ಸಿನಿಮಾ ಸಮಯದಲ್ಲಿ ಮಾತನಾಡಿದ್ವಿ. ಮತ್ತೆ ಬಹಳ ವರ್ಷಗಳ ನಂತರ ಕಾಲ್ ಮಾಡಿದಾಗ ಖುಷಿಪಟ್ಟೆ. ಇವರ ‘ಕಹಿ ಮತ್ತು ಅಳಿದುಳಿದವರು’ ಸಿನಿಮಾ ನನಗೆ ಇಷ್ಟ. ಕಾಮಿಡಿ, ಥ್ರಿಲ್ಲರ್, ಅಡ್ವೆಂಚರ್ ಎಲ್ಲವೂ ಕಥೆಯಲ್ಲಿ ಇದೆ. ಇದನ್ನು ನಾನು ಮಾಡಲು ರೆಡಿಯಾದೆ. ಶೂಟಿಂಗ್ ಮಾಡಲು ಮಜವಾಗಿತ್ತು. ಸಿನಿಮಾ ನೋಡಿದಾಗ ಖುಷಿ ಎನಿಸಿತು ಎಂದರು.
ಕ್ಯಾಬ್ ಡ್ರೈವರ್ ಕಥೆ ಹೇಳುವ ಸಿನಿಮಾಗಳು ಈಗಾಗಲೇ ಬಂದಿವೆ. ಆದರೆ ಬಿಸಿ ಬಿಸಿ ಐಸ್ ಕ್ರೀಮ್, ಅನಾರೋಗ್ಯದಲ್ಲಿರುವ ಕ್ಯಾಬ್ ಡ್ರೈವರ್ ಜೀವನದಲ್ಲಿ ನಿಗೂಢ ಮಹಿಳೆಯೊಬ್ಬಳು ಬಂದಾಗ, ಅವಳು ಅವನ ದುಃಖಗಳಿಗೆ ಔಷಧ ಮತ್ತು ಅನೇಕ ಸಾಹಸಗಳಿಗೆ ನಾಂದಿಯಾಗುತ್ತಾಳೆ ಎಂಬ ಕಥೆ ಎಳೆಯನ್ನು ಇಟ್ಟುಕೊಂಡು ಅರವಿಂದ್ ಶಾಸ್ತ್ರಿ ಸಿನಿಮಾ ಮಾಡಿದ್ದಾರೆ. ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.