ಬುಧವಾರ, ಮೇ 15, 2024
8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಖಾಸಗಿ ಶಾಲೆಯ ಮಾಲೀಕನ ಬಂಧನ!-Breaking NEWS: ಲಾರಿಗೆ ಡಿಕ್ಕಿ ಹೊಡೆದು ಬಸ್‌ಗೆ ಬೆಂಕಿ; 6 ಮಂದಿ ಸಾವು-Rakhi Sawant: ಹೃದಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ರಾಖಿ ಸಾವಂತ್; ಫೋಟೋ ವೈರಲ್!-Gold Rate: ನಿಮ್ಮ ನಗರದಲ್ಲಿ ಆಭರಣದ ಬೆಲೆ ಹೇಗಿದೆ.!-ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರೂಪದರ್ಶಿ ದಿವ್ಯಾ ಅಹುಜಾ ಹತ್ಯೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ

Twitter
Facebook
LinkedIn
WhatsApp
ರೂಪದರ್ಶಿ ದಿವ್ಯಾ ಅಹುಜಾ ಹತ್ಯೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ

ಮಾಜಿ ರೂಪದರ್ಶಿ ದಿವ್ಯಾ ಪಹುಜಾ(Divya Pahuja) ಕೊಲೆ ಆರೋಪಿಯನ್ನು ಪಶ್ಚಿಮ ಬಂಗಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಾಜಿ ಮಾಡೆಲ್​ನ ಶವವನ್ನು ಮತ್ತೊಬ್ಬ ಆರೋಪಿ ರವಿ ಬಾಂದ್ರಾ ಜತೆ ವಿಲೇವಾರಿ ಮಾಡಿದ್ದ ಬಾಲ್​ರಾಜ್ ಗಿಲ್ ಗುರುವಾರ ಸಂಜೆ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ.

ರವಿ ಬಾಂದ್ರಾ ಪರಾರಿಯಾಗಿದ್ದು, ಆತನ ಪತ್ತೆಗೆ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 2 ರಂದು ದಿವ್ಯಾ ಅವರನ್ನು ಐದು ಜನರು ಹೋಟೆಲ್ ಸಿಟಿ ಪಾಯಿಂಟ್‌ಗೆ ಕರೆದೊಯ್ದು ಕೊಠಡಿ ಸಂಖ್ಯೆ 111 ರೊಳಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಮಾಜಿ ಮಾಡೆಲ್‌ನ ದೇಹ ಇನ್ನೂ ಪತ್ತೆಯಾಗಿಲ್ಲ.

ಬಿಎಂಡಬ್ಲ್ಯು ಕಾರಿನಲ್ಲಿ ಶವವನ್ನು ಕೊಂಡೊಯ್ದಿದ್ದ ಬಾಲರಾಜ್ ಸಿಂಗ್ ಮತ್ತು ರವಿ ಬಂಗಾ ಅದನ್ನು ಘಗ್ಗರ್ ನದಿಯಲ್ಲಿ ಎಸೆದಿರಬಹುದು ಎಂಬ ಅನುಮಾನ ಪೊಲೀಸರಿಗೆ ಇದೆ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ತಂಡವು ಡೈವರ್‌ಗಳ ಸಹಾಯದಿಂದ ಮೃತದೇಹವನ್ನು ನದಿಯಿಂದ ಹೊರತೆಗೆಯಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

ಪ್ರಕರಣದ ಪ್ರಮುಖ ಆರೋಪಿಗಳಾದ ಅಭಿಜಿತ್ ಸಿಂಗ್, ಹೇಮರಾಜ್ ಮತ್ತು ಓಂಪ್ರಕಾಶ್ ಅವರನ್ನು ಪೊಲೀಸರು ಈಗಾಗಲೇ ಬಂಧಿಸಲಾಗಿದೆ.

ಮೂಲಗಳ ಪ್ರಕಾರ ಪಹುಜಾ ತನ್ನ ಫೋನ್‌ನಲ್ಲಿ ಅಭಿಜಿತ್ ಸಿಂಗ್ ಅವರ ಕೆಲವು ಅಶ್ಲೀಲ ವೀಡಿಯೊಗಳನ್ನು ಹೊಂದಿದ್ದರು, ಅದನ್ನು ಅಳಿಸಲು ಅವರು ಕೇಳಿದರು, ಆದರೆ ಆಕೆ ನಿರಾಕರಿಸಿದ್ದಳು.

ಅಭಿಜೀತ್ ಸಿಂಗ್ ಶವದೊಂದಿಗೆ ಕಾರನ್ನು ಹೋಟೆಲ್‌ನಿಂದ ಒಂದು ಕಿಲೋಮೀಟರ್ ದೂರದಲ್ಲಿ ಬಲರಾಜ್ ಗಿಲ್‌ಗೆ ನೀಡಿದ್ದ, ಪಂಜಾಬ್‌ನ ಪಟಿಯಾಲಾದ ಬಸ್ ನಿಲ್ದಾಣದಲ್ಲಿ ಗುರ್ಗಾಂವ್ ಪೊಲೀಸರು ಜನವರಿ 5 ರಂದು ಬಿಎಂಡಬ್ಲ್ಯು ಕಾರನ್ನು ಪತ್ತೆ ಮಾಡಿದ್ದರು.

ಗುರುಗ್ರಾಮದ ಭೂಗತ ಪಾತಕಿ ಸಂದೀಪ್ ಗಡೋಲಿ ನಕಲಿ ಎನ್​ಕೌಂಟರ್​ ಪ್ರಕರಣಕ್ಕೆ ಸಂಬಂಧಿಸಿ ದಿವ್ಯಾ ಪಹುಜಾಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಸ್ವಲ್ಪ ದಿನಗಳ ಹಿಂದಷ್ಟೇ ಜಾಮೀನಿನ ಮೂಲಕ ಹೊರಬಂದಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಹೋಟೆಲ್ ಮಾಲೀಕ ಅಭಿಜಿತ್, ಕೆಲಸಗಾರರಾದ ಹೇಮರಾಜ್, ಓಂ ಪ್ರಕಾಶ್​ನನ್ನು ಬಂಧಿಸಲಾಗಿದೆ.

ಗುರುಗ್ರಾಮದ ಭೂಗತ ಪಾತಕಿ ಗಡೋಲಿಯನ್ನು 2016 ಫೆಬ್ರವರಿ 6 ರಂದು ಗುರುಗ್ರಾಮದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಹತ್ಯೆಗೈಯಲಾಗಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ