ಗುರುವಾರ, ಮೇ 2, 2024
ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?-ಪ್ರಜ್ವಲ್ ರೇವಣ್ಣಗೆ ಕಠೋರ ಶಿಕ್ಷೆ ನೀಡಿ: ನಾವು ಬೆಂಬಲಿಸುತ್ತೇವೆ; ಅಮಿತ್ ಶಾ-ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಕಟ ಮಾಡದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ .ಕಾಂತೇಶ್‌!-ದಾರಿ ತಪ್ಪಿದ್ದು ಮಹಿಳೆಯರಲ್ಲ, ನಿಮ್ಮ ಮಗ - ಪ್ರಕಾಶ್ ರೈ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Shocking News: ಊಟ ಕೊಡಲು ಬಂದ ಮಾವುತನ ಕೈ ಬೆರಳು ಕಚ್ಚಿ, ತುಂಡರಿಸಿದ ಆನೆ ಮರಿ!

Twitter
Facebook
LinkedIn
WhatsApp
Shocking News: ಊಟ ಕೊಡಲು ಬಂದ ಮಾವುತನ ಕೈ ಬೆರಳು ಕಚ್ಚಿ, ತುಂಡರಿಸಿದ ಆನೆ ಮರಿ!

ತಿರುವನಂತಪುರಂ: ಕೇರಳದ ತಿರುವನಂತಪುರಂ (Tiruvanantapuram) ಜಿಲ್ಲೆಯ ಕೊಟ್ಟೂರು ಆನೆಧಾಮ ಮತ್ತು ಪುನರ್ವಸತಿ ಕೇಂದ್ರದಲ್ಲಿ ಆನೆ ಮರಿಯೊಂದು (Elephant) ಮಾವುತನ ಬೆರಳನ್ನು ಕಚ್ಚಿ ತುಂಡು ಮಾಡಿದೆ. ಮಂಗಳವಾರ ಸಂಜೆ ಮಾವುತ ಆನೆ ಮರಿಗೆ ಊಟ ಕೊಡಲು ಹೋದಾಗ ಪಕ್ಕದಲ್ಲೇ ಜೆಸಿಬಿ ಕೆಲಸ ನಡೆಯುತ್ತಿತ್ತು. ಇದರಿಂದ ಹೆದರಿದ ಆನೆ ಮರಿ ಊಟ ತಿನ್ನಿಸಲು ಬಂದ ಮಾವುತನ ಕೈ ಬೆರಳನ್ನು ಕಚ್ಚಿದೆ.

ಪುಷ್ಕರನ್ ಪಿಳ್ಳೈ ಎಂಬ ವ್ಯಕ್ತಿ ಅರಣ್ಯ ಎಂಬ ಕರುವಿಗೆ ಆಹಾರ ಮತ್ತು ಔಷಧಿಗಳನ್ನು ನೀಡುತ್ತಿದ್ದಾಗ ಆ ಆನೆಮರಿ ಆತನ ಬೆರಳುಗಳಿಗೆ ಕಚ್ಚಿ, ಗಂಭೀರವಾದ ಗಾಯಗಳಾಗಿವೆ. 2 ತಿಂಗಳ ಹಿಂದೆ ತಾಯಿ ಆನೆ ಸತ್ತ ನಂತರ ಅರಣ್ಯ ಎಂಬ ಮರಿಯಾನೆಯನ್ನು ಕೊಟ್ಟೂರು ಅರಣ್ಯದಿಂದ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು ಎಂದು ಮಲಯಾಳಂ ಮಾಧ್ಯಮಗಳು ವರದಿ ಮಾಡಿವೆ.

ಪುಷ್ಕರನ್ ಪಿಳ್ಳೆ ಆ ಕರುವಿಗೆ ಊಟವನ್ನು ನೀಡುತ್ತಿರುವಾಗ ಆಸುಪಾಸಿನಲ್ಲಿ ಜೆಸಿಬಿ ಯಂತ್ರಗಳು ಕೆಲಸ ಮಾಡುತ್ತಿತ್ತು. ಆ ಯಂತ್ರದ ದೊಡ್ಡ ಶಬ್ದದಿಂದ ಮರಿ ಆನೆ ಹೆದರಿ, ಪುಷ್ಕರನ್ ಪಿಳ್ಳೈ ಅವರ ಬೆರಳನ್ನು ಕಚ್ಚಿದೆ ಎಂದು ರಿಪೋರ್ಟರ್ ಲೈವ್ ವರದಿಯಲ್ಲಿ ತಿಳಿಸಿದೆ.

ಮಾವುತನ ಎರಡು ಬೆರಳುಗಳು ಆನೆ ಮರಿಯ ಬಾಯಿಯೊಳಗೆ ಸಿಕ್ಕಿಹಾಕಿಕೊಂಡವು. ಕೂಡಲೇ ಆತನನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತಾದರೂ, ಬೇರ್ಪಡಿಸಿದ ಬೆರಳನ್ನು ಮತ್ತೆ ಹೊಲಿಯಲು ವೈದ್ಯಕೀಯ ತಂಡವು ಪ್ರಯತ್ನಿಸುತ್ತಿದೆ.

ಕೊಟ್ಟೂರು ಆನೆಧಾಮ ಮತ್ತು ಪುನರ್ವಸತಿ ಕೇಂದ್ರದ ಪಶುವೈದ್ಯರು ಮತ್ತು ಸಹಾಯಕರ ಅಸಮರ್ಥ ವರ್ತನೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಕೊಟ್ಟೂರಿನಲ್ಲಿರುವ ಆನೆ ಪುನರ್ವಸತಿ ಕೇಂದ್ರವು 56 ಹೆಕ್ಟೇರ್‌ಗಳಲ್ಲಿ ಹರಡಿಕೊಂಡಿದೆ. ಅಲ್ಲಿ ದೈತ್ಯ ಸಸ್ತನಿಗಳು ಯಾವುದೇ ನಿರ್ಬಂಧವಿಲ್ಲದೆ ಮುಕ್ತವಾಗಿ ತಿರುಗಾಡಲು ಅವಕಾಶವಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ