ವಿವಾದಾತ್ಮಕ ಮತದಾನದ ನಂತರ ಪಾಕಿಸ್ತಾನದ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆ!
Twitter
Facebook
LinkedIn
WhatsApp
ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿಯಾಗಿ ಶೆಹಬಾಜ್ ಶರೀಫ್ ಆಯ್ಕೆಯಾಗಿದ್ದಾರೆ. ಈ ಮೂಲಕ ಎರಡನೇ ಬಾರಿ ಪ್ರಧಾನಿಯಾದ ದಾಖಲೆಗೆ ಶೆಹಬಾಜ್ ಶರಿಫ್ ಪಾತ್ರರಾಗಿದ್ದಾರೆ. ಪಾಕಿಸ್ತಾನದ 25ನೇ ಪ್ರಧಾನ ಮಂತ್ರಿಯಾಗಿ ಶೆಹಬಾಜ್ ಶರೀಫ್ ಆಯ್ಕೆಯಾಗುವ ಮೂಲಕ ಪಾಕಿಸ್ತಾನ ರಾಜಕಾರಣದ ಅತಂತ್ರ ಸ್ಥಿತಿ ತಕ್ಕ ಮಟ್ಟಿಗೆ ಸುಧಾರಿಸುವ ಲಕ್ಷಣಗಳು ಗೋಚರವಾಗ್ತಿವೆ.
ಚುನಾವಣೆ ನಡೆದು ಹಲವು ವಾರಗಳ ಬಳಿಕ ಪ್ರಧಾನಿ ಆಯ್ಕೆ
ಪಾಕಿಸ್ತಾನದಲ್ಲಿ ಫೆಬ್ರವರಿ 8 ರಂದು ಚುನಾವಣೆ ನಡೆದಿತ್ತು. ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಈ ಚುನಾವಣೆಯಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾರಥ್ಯದ ಪಿಟಿಐ ಪಕ್ಷಕ್ಕೆ ಭಾಗಿಯಾಗಲು ಕಾನೂನು ಪ್ರಕಾರ ಅವಕಾಶ ಇರಲಿಲ್ಲ. ಆದಾಗ್ಯೂ ಪಿಟಿಐ ಪಕ್ಷದ ಅಭ್ಯರ್ಥಿಗಳು ಸ್ವತಂತ್ರ್ಯ ಅಭ್ಯರ್ಥಿಗಳ ರೂಪದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.