ಮಂಗಳವಾರ, ಮೇ 21, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬ್ಯಾಂಕ್ ಉದ್ಯೋಗಿಗಳಿಗೆ ಇನ್ನು ಮುಂದೆ ವಾರದಲ್ಲಿ 5 ದಿನ ಕೆಲಸದ ಪ್ರಸ್ತಾಪಕ್ಕೆ ಒಪ್ಪಿಗೆ ಸಾಧ್ಯತೆ...!

Twitter
Facebook
LinkedIn
WhatsApp
ಬ್ಯಾಂಕ್ ಉದ್ಯೋಗಿಗಳಿಗೆ ಇನ್ನು ಮುಂದೆ ವಾರದಲ್ಲಿ 5 ದಿನ ಕೆಲಸದ ಪ್ರಸ್ತಾಪಕ್ಕೆ ಒಪ್ಪಿಗೆ ಸಾಧ್ಯತೆ...!

ವಾರದಲ್ಲಿ ಐದು ದಿನ ಕೆಲಸ ನಿಗದಿ ಮಾಡಬೇಕೆಂದು ಬ್ಯಾಂಕ್  ಉದ್ಯೋಗಿಗಳು (bank employees) ಮಾಡುತ್ತಾ ಬಂದಿರುವ ಒತ್ತಾಯಕ್ಕೆ ಸರ್ಕಾರ ಮಣಿಯುವ ಸಾಧ್ಯತೆ ಇದೆ. ಐದು ಕಾರ್ಯದಿನಗಳ ವಾರಕ್ಕೆ ಸರ್ಕಾರ ಈ ವರ್ಷವೇ ಅನುಮೋದನೆ ಕೊಡಬಹುದು ಎನ್ನಲಾಗಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ (United Forum of Bank Unions) ಬ್ಯಾಂಕಿಂಗ್ ವಲಯದಲ್ಲಿ ಐದು ದಿನಗಳ ವರ್ಕ್ ವೀಕ್​ಗೆ (5-day work week) ಅನುಮತಿಸುವಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಮನವಿ ಮಾಡಿತ್ತು. ಅದಕ್ಕೆ ಒಪ್ಪಿಗೆ ಬೀಳುವ ಸಾಧ್ಯತೆ ಬಹುತೇಕ

ಸರ್ಕಾರಿ ವಲಯದ ಬ್ಯಾಂಕುಗಳಲ್ಲಿ ಉದ್ಯೋಗಿಗಳಿಗೆ ಶೇ. 17ರಷ್ಟು ಸಂಬಳಹೆಚ್ಚಳ ಸಿಗಬಹುದು ಎಂದೂ ವರದಿಯಲ್ಲಿ ಹೇಳಲಾಗಿದೆ. ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ಮತ್ತು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು 2023ರಲ್ಲಿ ಶೇ. 17ರ ಸಂಬಳಹೆಚ್ಚಳ ಪ್ರಸ್ತಾವಕ್ಕೆ ಸಹಮತ ವ್ಯಕ್ತಪಡಿಸಿದ್ದವು.

ಇನ್ನು 2006ರಲ್ಲಿ ಮುಂಬೈಯಲ್ಲಿ ನಡೆದ ರೈಲು ಬಾಂಬ್‌ ಸ್ಫೋಟ ಪ್ರಕರಣಕ್ಕೂ ಈತನೇ ಮುಖ್ಯ ಸೂತ್ರಧಾರ ಎನ್ನಲಾಗಿದೆ. ಈ ಘಟನೆಯಲ್ಲಿ ಸುಮಾರು 188 ಮಂದಿ ಮೃತಪಟ್ಟು, 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈತನನ್ನು ಭೂಪಟ ತಜ್ಞ ಎಂದೇ ಕರೆಯಲಾಗುತ್ತಿತ್ತು. ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿದ್ದ ಈತ ಸದಾ 6 ಮಂದಿ ಅಂಗರಕ್ಷಕರೊಂದಿಗೆ ಓಡಾಡುತ್ತಿದ್ದ. ಭಯೋತ್ಪಾದಕರಿಗೆ ನಕ್ಷೆಯಲ್ಲಿ ಭಾರತದ ಪ್ರಮುಖ ಸ್ಥಳಗಳನ್ನು ನೋಡಲು ಕಲಿಸಿದ್ದ ಈತ ಸ್ಯಾಟ್‌ಲೈಟ್‌ ಫೋನ್‌ ಮೂಲಕ ಪಾಕಿಸ್ತಾನದಲ್ಲಿಯೇ ಕುಳಿತು ಉಗ್ರರಿಗೆ ಸೂಚನೆ ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಸಂಬಳ ಹೆಚ್ಚಾದರೆ 9 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗುತ್ತದೆ. ಬ್ಯಾಂಕುಗಳಿಗೆ 12,449 ಕೋಟಿ ರೂನಷ್ಟು ಹೊರೆಯಾಗುತ್ತದೆ.

ಸದ್ಯ ಬ್ಯಾಂಕುಗಳು ಪ್ರತೀ ಭಾನುವಾರದ ರಜೆಯ ಜೊತೆಗೆ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ರಜೆ ಹೊಂದಿವೆ. ಈಗ ಭಾನುವಾರದಂತೆ ಪ್ರತೀ ಶನಿವಾರವೂ ರಜೆ ಎಂದು ಘೋಷಿತವಾಗಬಹುದು.

ಆದರೆ, ಹೆಚ್ಚುವರಿ ರಜೆಯ ಅವಧಿಯ ಕೆಲಸವನ್ನು ಬೇರೆ ದಿನಗಳಲ್ಲಿ ಪೂರೈಸಬೇಕಾಗುತ್ತದೆ. ಅಂದರೆ ಕೆಲಸ ಮಾಡುವ ಐದು ದಿನಗಳಲ್ಲಿ ಪ್ರತೀ ದಿನವೂ 50 ನಿಮಿಷ ಹೆಚ್ಚು ಅವಧಿ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹಣಕಾಸು ಸಚಿವಾಲಯದಿಂದ ಅಧಿಕೃತ ಹೇಳಿಕೆ ಬಂದಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ