ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿಗ್ ಬಾಸ್ ಮನೆಗೆ ಮತ್ತೆ ರಿಟರ್ನ್ ಆಗಲಿದ್ದಾರೆ ಸಂತೋಷ್ ವರ್ತೂರು! ಯಾವಾಗ?

Twitter
Facebook
LinkedIn
WhatsApp
ಬಿಗ್ ಬಾಸ್ ಮನೆಗೆ ಮತ್ತೆ ರಿಟರ್ನ್ ಆಗಲಿದ್ದಾರೆ ಸಂತೋಷ್ ವರ್ತೂರು! ಯಾವಾಗ?

‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂರನೇ ವಾರ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಮಧ್ಯೆ ಹಲವು ಬೆಳವಣಿಗೆಗಳು ಮನೆಯಲ್ಲಿ ನಡೆದಿವೆ. ಹುಲಿ ಉಗುರು ಹೊಂದಿರುವ ಪ್ರಕಣದಲ್ಲಿ ಬಿಗ್ ಬಾಸ್ (Bigg Boss) ಮನೆಯಿಂದ ವರ್ತೂರು ಸಂತೋಷ್ ಅವರು ಔಟ್ ಆಗಿದ್ದರು. ಅವರು ಮತ್ತೆ ಬರುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಅವರು ದೊಡ್ಮನೆಗೆ ಇಂದು (ಅಕ್ಟೋಬರ್ 28) ಎಂಟ್ರಿ ಕೊಡಲಿದ್ದಾರೆ ಎನ್ನುತ್ತಿವೆ ಮೂಲಗಳು. ಈ ಮೂಲಕ ವೀಕೆಂಡ್ ಎಪಿಸೋಡ್​ಗೆ ಅವರು ಲಭ್ಯವಾಗಲಿದ್ದಾರೆ.

ಬಿಗ್ ಬಾಸ್’ ಮನೆ ಒಳಗೆ ಹೋಗುವಾಗ ವರ್ತೂರು ಸಂತೋಷ್ ಅವರು ಹುಲಿ ಉಗುರು ಹೊಂದಿರುವ ಚೈನ್ ಧರಿಸಿದ್ದರು. ಅವರ ಲಾಕೆಟ್ ಎಲ್ಲರ ಕಣ್ಣು ಕುಕ್ಕಿತ್ತು. ವನ್ಯಜೀವಿಗಳ ಅಂಗಾಂಗವನ್ನು ಇಟ್ಟುಕೊಳ್ಳುವಂತಿಲ್ಲ. ಹಾಗೊಮ್ಮೆ ಇಟ್ಟುಕೊಂಡರೆ ಅದು ಕಾನೂನಿಗೆ ವಿರುದ್ಧವಾದುದು. ಈ ಕಾರಣದಿಂದಲೇ ಸಂತೋಷ್ ಅವರನ್ನು ಬಂಧಿಸಲಾಗಿತ್ತು. ಅಕ್ಟೋಬರ್ 27ರಂದು ಅವರಿಗೆ ಜಾಮೀನು ಸಿಕ್ಕಿದೆ.

ಕೋರ್ಟ್ ಜಾಮೀನು ನೀಡುವಾಗ ಹೆಚ್ಚಿನ ಷರತ್ತನ್ನು ಹಾಕಿಲ್ಲ. ಹೀಗಾಗಿ ಅವರು ಬಿಗ್ ಬಾಸ್​ಗೆ ಮರಳಲು ಅವಕಾಶ ಇತ್ತು. ಈ ಕಾರಣದಿಂದಲೇ ಸಂತೋಷ್ ಅವರು ಬಿಗ್ ಬಾಸ್​ಗೆ ರೀ ಎಂಟ್ರಿ ಪಡೆಯಲಿದ್ದಾರೆ. ಈಗಾಗಲೇ ಅವರ ಹೆಸರು, ಫೋಟೋ ವಾಹಿನಿಗಳಲ್ಲಿ ಬಂದು ಸಾಕಷ್ಟು ಸುದ್ದಿ ಆಗಿದ್ದಾರೆ. ಒಂದೊಮ್ಮೆ ಬಿಗ್ ಬಾಸ್​ ಮನೆಗೆ ರೀ ಎಂಟ್ರಿ ಕೊಟ್ಟರೆ ವೀಕ್ಷಕರ ವರ್ಗ ಹೆಚ್ಚಲಿದೆ.

ಕೆಲವು ಮೂಲಗಳ ಪ್ರಕಾರ ವೈಲ್ಡ್ ಕಾರ್ಡ್ ಮೂಲಕ ಸಂತೋಷ್​ ಅವರಿಗೆ ಎಂಟ್ರಿ ಕೊಡುವ ಸಾಧ್ಯತೆ ಇದೆಯಂತೆ. ಈಗ ಸಂತೋಷ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟರೆ ಲೆಕ್ಕಾಚಾರ ಬದಲಾಗಲಿದೆ. ಕಳೆದ ಸೀಸನ್​ನಲ್ಲಿ ದೀಪಿಕಾ ದಾಸ್ ಅವರು ದೊಡ್ಮನೆಯಿಂದ ಎಲಿಮಿನೇಟ್ ಆದರು. ಆ ಬಳಿಕ ಅವರಿಗೆ ವೈಲ್ಡ್ ಕಾರ್ಡ್ ಮೂಲಕ ಮತ್ತೆ ಬಿಗ್ ಬಾಸ್​ಗೆ ಬರೋಕೆ ಅವಕಾಶ ನೀಡಲಾಯಿತು. ಸಂತೋಷ್ ವಿಚಾರದಲ್ಲೂ ಹಾಗೆಯೇ ಮಾಡಲಾಗುತ್ತಿದೆ ಎನ್ನಲಾಗಿದೆ.

ಬಿಗ್​ಬಾಸ್ ಮನೆಯಲ್ಲಿ ಗಲ್ಲಿ ಕ್ರಿಕೆಟ್ ಗೆದ್ದವರ್ಯಾರು? ಸೋತವರ್ಯಾರು? ಪಂದ್ಯಶ್ರೇಷ್ಠ ಯಾರಿಗೆ?

ಹಲವು ಟಾಸ್ಕ್, ಸ್ಪರ್ಧೆ, ಜಗಳ, ಕಾಲೆಳೆತ, ಪ್ರೀತಿ, ಸಮಾಧಾನ ಎಲ್ಲವೂ ತುಂಬಿದ್ದ ಬ್ಯುಸಿ ವಾರ ಶುಕ್ರವಾರಕ್ಕೆ ಮುಗಿದಿದೆ. ಬಿಗ್​ಬಾಸ್ (Bigg Boss) ಮನೆಗೆ ಹೊಸ ಕ್ಯಾಪ್ಟನ್ ಸಹ ಆಯ್ಕೆ ಆಗಿದೆ. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಉಳಿದಿದ್ದ ಮೈಖಲ್, ನೀತು, ತುಕಾಲಿ ಸಂತು ಹಾಗೂ ತನಿಷಾ ಅವರಲ್ಲಿ ಮೊದಲ ಸುತ್ತನ್ನು ತನಿಷಾ ಹಾಗೂ ನೀತು ಗೆದ್ದು ಅಂತಿಮ ಸುತ್ತಿಗೆ ಬಂದರು. ಅಂತಿಮ ಸುತ್ತಿನಲ್ಲಿ ತನಿಷಾರನ್ನು ಸುಲಭವಾಗಿ ಮಣಿಸಿದ ನೀತು ಬಿಗ್​ಬಾಸ್ ಮನೆಯ ಮೂರನೇ ಕ್ಯಾಪ್ಟನ್ ಆಗಿ ಆಯ್ಕೆಯಾದರು. ನೀತು ಕ್ಯಾಪ್ಟನ್ ಆಗಿದ್ದನ್ನು ಮನೆಯ ಎಲ್ಲ ಸದಸ್ಯರು ಸಂಭ್ರಮಿಸಿದರು.

ಆ ಬಳಿಕ ವಾರದ ಕಳಪೆ ಹಾಗೂ ಅತ್ಯುತ್ತಮ ನೀಡುವ ಸಮಯ ಎದುರಾಯ್ತು. ವಾರವಿಡಿ ಚೆನ್ನಾಗಿ ಆಟ ಆಡಿದ ಮೈಖಲ್, ಕಾರ್ತಿಕ್ ಹಾಗೂ ನೀತು ಹೆಸರನ್ನು ಹೆಚ್ಚು ಜನ ತೆಗೆದುಕೊಂಡರು. ಅಂತಿಮವಾಗಿ ನೀತು ಹಾಗೂ ಮೈಖಲ್ ಈ ವಾರದ ಅತ್ಯುತ್ತಮ ಎನಿಸಿಕೊಂಡರು. ಇನ್ನು ಕಳಪೆ ಪಟ್ಟವನ್ನು ಹೆಚ್ಚು ಜನ ಕೊಟ್ಟಿದ್ದು ಸ್ನೇಹಿತ್​ಗೆ. ತನಿಷಾಗೆ ಸಹ ಕೆಲವರು ಕಳಪೆ ಕೊಟ್ಟರು, ಅದರಲ್ಲಿಯೂ ವಿನಯ್, ತನಿಷಾಗೆ ಕಳಪೆ ಕೊಟ್ಟಾಗ ತನಿಷಾ ಹಾಗೂ ವಿನಯ್ ನಡುವೆ ವಾದ-ವಿವಾದ ನಡೆದವು.

ಅದಾದ ಬಳಿಕ ಬಿಗ್​ಬಾಸ್ ಆದೇಶದಂತೆ ಉಗ್ರಂ ಹಾಗೂ ಭಜರಂಗಿ ತಂಡಗಳ ನಡುವೆ ಗಲ್ಲಿ ಕ್ರಿಕೆಟ್ ಆಡಿಸಲಾಯ್ತು. ಸಂಗೀತಾ ಸ್ಕೋರರ್, ಎರಡೂ ತಂಡಗಳ ನಾಯಕಿಯರಾದ ನಮ್ರತಾ ಹಾಗೂ ತನಿಷಾ ಅವರನ್ನು ಕ್ಯಾಪ್ಟನ್​ಗಳನ್ನಾಗಿ ಮಾಡಲಾಯ್ತು. ಮೊದಲು ಬ್ಯಾಟಿಂಗ್ ಮಾಡಿದ ಭಜರಂಗಿ ತಂಡ ಉತ್ತಮ ಮೊತ್ತವನ್ನು ಕಲೆ ಹಾಕಿತು. ಅದರಲ್ಲಿಯೂ ತುಕಾಲಿ ಸಂತು ಅವರು ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಅವರ ಇನ್ನಿಂಗ್ಸ್​ನಲ್ಲಿ ಫೋರ್, ಸಿಕ್ಸ್​ಗಳು ಇದ್ದವು.

ಅದಾದ ಬಳಿಕ ಉಗ್ರಂ ತಂಡದ ಬ್ಯಾಟಿಂಗ್ ಶುರು ವಾಯಿತು, ದೊಡ್ಡ ಹೊಡೆತ ಹೊಡೆಯಲು ಹೋಗಿ ಕಾರ್ತಿಕ್ ಖಾತೆ ತೆರೆಯುವ ಮುನ್ನವೇ ಔಟಾಗಿ ಹೊರ ನಡೆದರು. ಅದಾದ ಬಳಿಕ ಬಂದ ವಿನಯ್ ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅದಾದ ಬಳಿಕ ಬಂದ ಇತರೆ ಆಟಗಾರರು ಸಹ ಮೈಖಲ್​ರ ಅಂಡರ್​ಆರ್ಮ್ ಬೌಲಿಂಗ್​ ಅನ್ನು ಎದುರಿಸಲಾಗದೆ ಔಟಾದರು. ದೊಡ್ಡ ಮೊತ್ತದ ಅಂತರದಿಂದಲೇ ತನಿಷಾರ ತಂಡ ಪಂದ್ಯ ಗೆದ್ದಿತು. ಮೊದಲೇ ಹೇಳಿದಂತೆ ಗೆದ್ದ ತಂಡಕ್ಕೆ ಟ್ರೋಫಿಯ ಜೊತೆಗೆ ಉತ್ತಮವಾಗಿ ಆಡಿದ ತುಕಾಲಿ ಸಂತುಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಸಹಿ ಮಾಡಿದ ಬ್ಯಾಟು ಉಡುಗೊರೆಯಾಗಿ ಸಿಕ್ಕಿತು. ಚೆನ್ನಾಗಿ ಬೌಲಿಂಗ್ ಮಾಡಿದ ಮೈಖಲ್​ಗೆ ಸೂರ್ಯಕುಮಾರ್ ಯಾದವ್ ಸಹಿ ಮಾಡಿದ ಬಾಲು ಉಡುಗೊರೆಯಾಗಿ ದೊರಕಿತು.

ಅಂದಹಾಗೆ ಪಂದ್ಯಾಟದ ನಡುವೆ ಎರಡೂ ತಂಡದ ನಾಯಕಿಯರ ನಡುವೆ ತೀವ್ರ ಮಾತಿನ ಚಕಮಕಿಯೂ ನಡೆಯಿತು. ನಮ್ರತಾ ನಿನ್ನೆಯಿಂದಲೂ ತನಿಷಾ ನ್ಯಾಯಯುತವಾಗಿ ತೀರ್ಪುಗಳನ್ನು ನೀಡುತ್ತಿಲ್ಲ ಎಂಬ ಆರೋಪ ಮಾಡುತ್ತಲೇ ಇದ್ದರು. ಇಂದು ಕ್ರಿಕೆಟ್ ಆಟದ ವೇಳೆ ತನಿಷಾ ಅಂಫೈರಿಂಗ್​ಗೆ ಬಂದ ಕೂಡಲೇ ತನಿಷಾ ನ್ಯಾಯಯುತವಾಗಿ ತೀರ್ಪು ನೀಡು ಎಂದರು. ಇದು ತನಿಷಾರನ್ನು ಬಹುವಾಗಿ ಕೆರಳಿಸಿತು. ನಮ್ರತಾ ಸಹ ತನಿಷಾರ ಸಿಟ್ಟು ಹೆಚ್ಚಾಗುವಂತೆಯೇ ಮಾತಿಗೆ ಮಾತಿಗೆ ಜೋಡಿಸುತ್ತಾ, ಹಾವ ಭಾವಗಳನ್ನು ಮಾಡುತ್ತಾ ತನಿಷಾರನ್ನು ಇನ್ನಷ್ಟು ಉದ್ರೇಕಿಸಿದರು. ಇತರೆ ಸದಸ್ಯರು ಬಂದು ತನಿಷಾ ಹಾಗೂ ನಮ್ರತಾರ ಜಗಳವನ್ನು ಕೊನೆ ಮಾಡಿದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ