ಸೋಮವಾರ, ಮೇ 20, 2024
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!-ಸಿಎಂ ಸಿದ್ದರಾಮಯ್ಯಗೆ ಸೋಮಾರಿ ಸಿದ್ದು ಎಂದು ನಟ ಚೇತನ್ ಅಹಿಂಸಾ ವ್ಯಂಗ್ಯ..!-Gold Rate: ಇಂದಿನ ಚಿನ್ನಾಭರಣದ ಬೆಲೆ ಹೇಗಿದೆ; ಖರೀದಿಗೆ ಸೂಕ್ತವೇ.?-ಆರ್ಸಿಬಿ ಗೆ ಕಪ್ ಗೆಲ್ಲಲು ಮುಂದಿನ ಪಂದ್ಯ ಯಾವಾಗ; ಎದುರಾಳಿ ತಂಡ ಯಾವುದು.?-ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವರು ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ; ಇರಾನ್ ಮಾದ್ಯಮ ವರದಿ-ಬಿಜೆಪಿ ಅಭ್ಯರ್ಥಿಗೆ ಒಬ್ಬನಿಂದಲೇ 8 ಬಾರಿ ಮತ; ವೈರಲ್ ವಿಡಿಯೋ ಇಲ್ಲಿದೆ-ಅಭಿಷೇಕ್ ಶರ್ಮರಿಂದ ಕೊಹ್ಲಿ ದಾಖಲೆ ಉಡಿಸ್; ಹೈದರಾಬಾದಿಗೆ ಭರ್ಜರಿ ಗೆಲುವು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Realme GT5 Pro : ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾದ ರಿಯಲ್ ಮಿ GT5ಪ್ರೊ ; 100W ಚಾರ್ಜಿಂಗ್ ಮತ್ತು ಆಕರ್ಷಣೀಯ ಫೀಚರ್ಸ್!

Twitter
Facebook
LinkedIn
WhatsApp
realme gt neo 5 se antutu 00

ರಿಯಲ್‌ಮಿ (Realme) ಫೋನ್‌ಗಳು ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಅನ್ನು ನೀಡುವ ಫೋನ್‌ಗಳಾಗಿವೆ. ಈ ಮೂಲಕ ಭಾರತದಲ್ಲಿ ಹೆಚ್ಚು ಸೇಲ್‌ ಆಗುತ್ತಿರುವ ಹಾಗೂ ಬೇಡಿಕೆ ಇರುವ ಸ್ಮಾರ್ಟ್‌ಫೋನ್‌ ಆಗಿ ಗುರುತಿಸಿಕೊಂಡಿದೆ. ಈ ನಡುವೆ ಬಹು ನಿರೀಕ್ಷಿತ ರಿಯಲ್‌ಮಿಯ ಈ ಫೋನ್‌ನ ಫೋಟೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

ಹೌದು, ರಿಯಲ್‌ಮಿ GT5 ಪ್ರೊ ಸ್ಮಾರ್ಟ್‌ಫೋನ್ (Realme GT5 Pro Smartphone) ಅನ್ನು ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆ ನಡೆದಿದೆ. ಅಂದರೆ ಈ ಫೋನ್ ಈ ವರ್ಷದ ಕೊನೆಯಲ್ಲಿ ಲಾಂಚ್‌ ಆಗುವ ನಿರೀಕ್ಷೆಯಿದೆ. ಹಾಗೆಯೇ RMX3888 ಮಾದರಿ ಸಂಖ್ಯೆ ಹೊಂದಿರುವ ಫೋನ್ ಅನ್ನು ಚೀನಾದಲ್ಲಿ MIIT / TENNA ಪ್ರಮಾಣೀಕರಿಸಿದೆ. ಈ ಮೂಲಕ ಫೋನ್‌ನ ವಿನ್ಯಾಸ ಮತ್ತು ಸಂಪೂರ್ಣ ಫೀಚರ್ಸ್‌ ಬಹಿರಂಗವಾಗಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಅನ್ನು ತಿಳಿಯೋಣ ಬನ್ನಿ.

gsmarena 001
ರಿಯಲ್‌ಮಿ GT5 ಪ್ರೊ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ:

ಈ ಫೋನ್ 1.5K OLED ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಈ ಮೂಲಕ ಬಳಕೆದಾರರು ಉತ್ತಮ ಸ್ಕ್ರೀನ್ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ 144 Hz ರಿಫ್ರೆಶ್ ರೇಟ್, 1200 ನಿಟ್ಸ್‌ ಬ್ರೈಟ್‌ನೆಸ್ ಆಯ್ಕೆ ಹಾಗೂ 240 Hz ಟಚ್ ಸ್ಯಾಂಪ್ಲಿಂಗ್ ರೇಟ್ ಆಯ್ಕೆ ಪಡೆಯಲಿದ್ದು, ಸ್ಮಾರ್ಟ್‌ಫೋನ್‌ ವಿಭಾಗದಲ್ಲೇ ವಿಶೇಷ ಎನಿಸಲಿದೆ.

ರಿಯಲ್‌ಮಿ GT5 ಪ್ರೊ ಸ್ಮಾರ್ಟ್‌ಫೋನ್ ಪ್ರೊಸೆಸೆರ್‌:

ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ (Qualcomm Snapdragon 8 Gen 3 processor) ಬಲ ಪಡೆದುಕೊಂಡಿದ್ದು, ಈ ಮೂಲಕ ಗೇಮಿಂಗ್, ವಿಡಿಯೋ ಎಡಿಟಿಂಗ್ ಆಪ್ ಗಳನ್ನು ಈ ಫೋನ್ ನಲ್ಲಿ ಮನಬಂದಂತೆ ಬಳಕೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ (Android 14 OS) ಅನ್ನು ಈ ಫೋನ್‌ ರನ್‌ ಮಾಡಲಿದ್ದು, ಇದನ್ನು ಪಡೆದ ಮೊದಲ ಫೋನ್ ಆಗಿ ಇದು ಗುರುತಿಸಿಕೊಳ್ಳಲಿದೆ.

Realme GT5 Pro : ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾದ ರಿಯಲ್ ಮಿ GT5ಪ್ರೊ ; 100W ಚಾರ್ಜಿಂಗ್ ಮತ್ತು ಆಕರ್ಷಣೀಯ ಫೀಚರ್ಸ್!

ಇದರೊಂದಿಗೆ ಈ ಸ್ಮಾರ್ಟ್‌ಫೋನ್ ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದ್ದು, 12GB/16GB RAM ಮತ್ತು 256GB/512GB ಸ್ಟೋರೇಜ್ ವೇರಿಯಂಟ್‌ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಅದಾಗ್ಯೂ 24GB RAM ಅನ್ನೂ ಹೊಂದಿರಬಹುದು ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ಆದರೆ ಈ ಬಗ್ಗೆ ಯಾವುದೇ ನಿಖರ ಮಾಹಿತಿ ತಿಳಿದುಬಂದಿಲ್ಲ.

ರಿಯಲ್‌ಮಿ GT5 ಪ್ರೊ ಕ್ಯಾಮೆರಾ ರಚನೆ:

ಇನ್ನು ಈ ಸ್ಮಾರ್ಟ್‌ಫೋನ್ ಎಲ್ಇಡಿ ಫ್ಲ್ಯಾಶ್ ಲೈಟ್‌ ಬೆಂಬಲದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿರಲಿದೆ ಎನ್ನಲಾಗಿದೆ. ಅಂದರೆ 50 ಮೆಗಾಪಿಕ್ಸೆಲ್‌ಮುಖ್ಯ ಕ್ಯಾಮರಾ, 8 ಮೆಗಾಪಿಕ್ಸೆಲ್ 120° ಅಲ್ಟ್ರಾ-ವೈಡ್ ಕ್ಯಾಮರಾ, 50 ಮೆಗಾಪಿಕ್ಸೆಲ್‌ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮರಾ ಹಾಗೂ 32 ಮೆಗಾಪಿಕ್ಸೆಲ್‌ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ ಎಂದು ತಿಳಿದುಬಂದಿದೆ.

000 01 realme GT Neo 5 SE
ರಿಯಲ್‌ಮಿ GT5 ಪ್ರೊ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ:

ಈ ಸ್ಮಾರ್ಟ್‌ಫೋನ್‌ 5400mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ ಎನ್ನಲಾಗಿದ್ದು, 100W ಸೂಪರ್‌ವೂಕ್‌ ಚಾರ್ಜಿಂಗ್ ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ವಿಶೇಷವಾದ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ಸ್ ಹೊಂದಿದ್ದು, ವೈ-ಫೈ 6, ಎನ್‌ಎಫ್‌ಸಿ, ಜಿಪಿಎಸ್‌ ಮತ್ತು ಬ್ಲೂಟೂತ್ 5.2 ಸಂಪರ್ಕ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂದು ಲೀಕ್‌ ಮಾಹಿತಿಯಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗೆಯೇ ನವೆಂಬರ್‌ನಲ್ಲಿ ಚೀನಾದಲ್ಲಿ ಈ ಫೋನ್‌ ಕಾಣಿಸಿಕೊಳ್ಳಲಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ