Rain Alert: ಈ ಭಾರಿ ನಿಗದಿತ ಸಮಯಕ್ಕಿಂತ ಮೊದಲೇ ಸುರಿಯಲಿದೆ ನೈರುತ್ಯ ಮಾನ್ಸೂನ್..!
ಭಾರತೀಯರಿಗೆ ಅದರಲ್ಲೂ ರೈತರಿಗೆ ಹವಾಮಾನ ಇಲಾಖೆ ಖುಷಿ ಸುದ್ದಿ ನೀಡಿದೆ. ಈ ಭಾರಿ ಮುಂಗಾರು ಮಳೆ ಸುರಿಸುವ ನೈಋತ್ಯ ಮಾನ್ಸೂನ್ ಮಾರುತಗಳು ನಿಗದಿತ ಸಮಯಕ್ಕಿಂತ ಮೊದಲೇ ಸಕ್ರಿಯಗೊಳ್ಳಲಿವೆ. ಹೌದು, ಪ್ರತಿ ವರ್ಷ ಜೂನ್-ಸೆಪ್ಟಂಬರ್ ವರೆಗೆ ಮುಂಗಾರು ಮಳೆ ಸುರಿಸುವ ಅವಧಿ ಆಗಿದೆ. ಕಳೆದ ವರ್ಷ ತಡವಾಗಿ ಅಂದರೆ ಜೂನ್ ತಿಂಗಳ ಆರಂಭದಲ್ಲೇ ಮುಂಗಾರು ಬರದ ವಿಳಂಬವಾಗಿತ್ತು. ಆದರೆ 2024ರ ಜೂನ್ 01 ಕ್ಕಿಂತ ಮೊದಲೇ ಮುಂಗಾರು ಮಳೆ ಆಗಮಿಸುವ ಸಾಧ್ಯೆತೆಗಳು ಇವೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (IMD) ಯು ಮಾನ್ಸೂನ್ ಋತುವಿನ ಆರಂಭ, ಈ ವರ್ಷ ಮುಂಗಾರು ಹೇಗಿರಲಿದೆ ಎಂಬೆಲ್ಲ ವಿಷಯಗಳ ದೀರ್ಘಾವಧಿ ಮುನ್ಸೂಚನೆ ನೀಡಲಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಉತ್ತಮ ಮುಂಗಾರು ಮಳೆ ನಿರೀಕ್ಷೆ ಇದೆ.
ಎಲ್‌ನಿನೊ- ಲಾ ನಿನಾ ವಿದ್ಯಮಾನ ಪ್ರಭಾವ ಹಿಂದೂ ಮಹಾಸಾಗರದ ಎಲ್‌ನಿನೊ- ಲಾ ನಿನಾ ಪರಿಸ್ಥಿತಿಗಳ ಏಕಕಾಲಿಕ ಸಕ್ರಿಯಗೊಳ್ಳುವಿಕೆ ಕಾರಣದಿಂದ ಈ ವರ್ಷದ ಮಾನ್ಸೂನ್ (Monsoon Rain) ಸಾಮಾನ್ಯಕ್ಕಿಂತ ಮುಂಚಿತವಾಗಿ ಆಗಮಿಸಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಲಾ ನಿನಾ ಎಂದರೆ, ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಪ್ರದೇಶದಲ್ಲಿ ಸರಾಸರಿಗಿಂತ ತೇವಾಂಶವು ಸಮುದ್ರದ ಮೇಲ್ಮೈ ತಾಪಮಾನ ಮತ್ತು ಹಿಂದೂ ಮಹಾಸಾಗರದಲ್ಲಿನ ಸಮುದ್ರ-ಮೇಲ್ಮೈ ಉಷ್ಣಾಂಶ ಏರಿಳಿತದ ವಾತಾವರಣ ಆಗಿದೆ. ಈ ಲಾ ನಿನಾ ವಾತಾವರಣ ಈ ಬಾರಿ ನೈಋತ್ಯ ಮಾನ್ಸೂನ್ ಮೇಲೆ ಪ್ರಭಾವ ಉಂಟು ಮಾಡುವುದರಿಂದ ಉತ್ತಮ ಮಳೆ ನಿರೀಕ್ಷಿಸಲಾಗಿದೆ.
ಜುಲೈನಿಂದ ಹೆಚ್ಚಿನ ಮಳೆ ಸಂಭವ
ಹೆಚ್ಚಿನ ಹವಾಮಾನ ಮುನ್ಸೂಚನೆಗಳು ಹಿಂದೂ ಮಹಾಸಾಗರದ ಮೇಲೈನಲ್ಲಿ ನಡೆಯುವ ಬದಲಾವಣೆಗಳು ಆಧರಿಸಿವೆ. ಈ ವೈಪರಿತ್ಯಗಳ ಪ್ರಭಾದಿಂದ ಜುಲೈನಿಂದ ಸೆಪ್ಟೆಂಬರ್ ವರೆಗೆ ಗರಿಷ್ಠ ಮಾನ್ಸೂನ್ ಮಳೆ ಸುರಿಯುವ ಸಾಧ್ಯತೆ ಇದೆ.
ಮುಂದಿನ ತಿಂಗಳುಗಳಲ್ಲಿ ಮಾನ್ಸೂನ್ ಮಾರುಗಳು ಪಶ್ಚಿಮ-ವಾಯುವ್ಯ ಭಾರತ ಮತ್ತು ಉತ್ತರ ಅರೇಬಿಯನ್ ಸಮುದ್ರದ ಕಡೆಗೆ ವಿಸ್ತೃತ ಮತ್ತು ಸ್ಥಿರವಾಗಿ ಸಾಗುವ ನಿರೀಕ್ಷೆ ಇದೆ. ಮಾನ್ಸುನ್ ಮಾರುತಗಳ ಸ್ಥಿರತೆಯಿಂದ ನಿರಂತರ ಮಳೆ ಸುರಿಯಲು ಸಾಧ್ಯವಾಗುತ್ತದೆ.
ಅಧಿಕ ಮುಂಗಾರು ಮಳೆ ನಿರೀಕ್ಷೆ
ಸದ್ಯ ಪೂರ್ವ ಮುಂಗಾರು ಮಳೆ ಚಾಲ್ತಿಯಲ್ಲಿದೆ. ಲಾ ನಿನಾ ಪರಿಸ್ಥಿತಿಗಳ ವಿದ್ಯಮಾನವು ದೇಶದ ಪಶ್ಚಿಮ ಭಾಗದ ಕೆಲವೆಡೆ ಬದಲಾವಣೆ ಸೂಚಿಸುತ್ತದೆ. ಇದು ಮಾನ್ಸುನ್ ಉದ್ದಕ್ಕೂ ಹೆಚ್ಚಿನ ಮಳೆ ಬರಲು ಕಾರಣವಾಗಲಿದೆ ಎಂದು ಐಎಂಡಿ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ದೇಶದ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂದಿನ ಮುಂಗಾರು ಅವಧಿಯಲ್ಲಿ ವಾಡಿಕೆಯಷ್ಟು, ಕೆಲವು ರಾಜ್ಯಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ ಬರುವ ಮುನ್ಸೂಚನೆಗಳು ಇವೆ. ಸದ್ಯ ಭಾರತದ ಅರ್ಧ ರಾಜ್ಯಗಳಲ್ಲಿ ಶಾಖದ ಅಲೆ ಮುಂದುವರಿದಿದೆ.