ಮಂಗಳವಾರ, ಏಪ್ರಿಲ್ 30, 2024
ನಮ್ಮದು ಮತ್ತು ರೇವಣ್ಣಕುಟುಂಬವೇ ಬೇರೆ ಬೇರೆ; ಕುಮಾರಸ್ವಾಮಿ-ಹೆತ್ತ ತಂದೆಯನ್ನೇ ಹಿಗ್ಗಾಮುಗ್ಗಾ ಮುಖಕ್ಕೆ ಜಾಡಿಸಿ ಮಗನಿಂದ ಕ್ರೂರ ಕೃತ್ಯ ; ಇಲ್ಲಿದೆ ವಿಡಿಯೋ-Gold Rate: ಏರಿಳಿತದಲ್ಲಿರುವ ಚಿನ್ನದ ದರ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ವಿವರ-ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!-ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹಾರ್ದಿಕ್ ಪಾಂಡ್ಯಗೆ 4.3 ಕೋಟಿ ರೂ. ವಂಚಿಸಿದ್ದ ಸಹೋದರನ ಬಂಧನ.! ಏನಿದು ಪ್ರಕರಣ?

Twitter
Facebook
LinkedIn
WhatsApp
ಹಾರ್ದಿಕ್ ಪಾಂಡ್ಯಗೆ 4.3 ಕೋಟಿ ರೂ. ವಂಚಿಸಿದ್ದ ಸಹೋದರನ ಬಂಧನ.! ಏನಿದು ಪ್ರಕರಣ?

ಕ್ರಿಕೆಟಿಗರಾದ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅವರಿಗೆ ವ್ಯವಹಾರದಲ್ಲಿ ಸುಮಾರು 4 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಅವರ ಸಹೋದರ ವೈಭವ್ ಪಾಂಡ್ಯ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರಸ್ತುತ ಇದೀಗ 2024ನೇ ಆಬೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಡುತ್ತಿದ್ದು, ಇನ್ನು ಇವರ ಅಣ್ಣ ಕೃನಾಲ್‌ ಪಾಂಡ್ಯ ಅವರು ಲಕ್ನೋ ಸೂಪರ್‌ ಜೈಂಟ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. ಇನ್ನು ಇದೀಗ ಇವರಿಬ್ಬರಿಗೆ 4 ಕೋಟಿ ರೂಪಾಯಿ ವಂಚಿಸಿ ಆರೋಪ ಹಿನ್ನೆಲೆ ಸಹೋದರ ವೈಭವ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವೈಭವ್ (37) ಪಾಲುದಾರಿಕೆ ಸಂಸ್ಥೆಯಿಂದ ಸುಮಾರು 4.3 ಕೋಟಿ ರೂಪಾಯಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್‌ಗೆ ವಂಚನೆ ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ ಅಂತಾ ನ್ಯೂಸ್‌ 18 ಇಂಗ್ಲೀಷ್‌ ತಿಳಿಸಿದೆ. ಇನ್ನು ವೈಭವ್ ವಿರುದ್ಧ ವಂಚನೆ ಮತ್ತು ನಕಲಿ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಮೂವರು ಸಹೋದರರು ಸೇರಿ 2021ರಲ್ಲಿ ವ್ಯವಹಾರವನ್ನು ಶುರು ಮಾಡಿದರು. ಈ ವ್ಯವಹಾರದ ನಿಯಮದಂತೆ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ತಲಾ ಶೇಕಡಾ 40ರಷ್ಟು ಬಂಡವಾಳವನ್ನು ಹೂಡಿದರೆ, ಇನ್ನು ವೈಭವ್ ಶೇಕಡಾ 20ರಷ್ಟು ವಾಪಾಸ್‌ ಪಡೆದಿದ್ದಾರೆ. ಅಷ್ಟೇ ಅಲ್ಲದೆ ನಂತರ ವೈಭವ್ ಅವರು, ಪಾಂಡ್ಯ ಸಹೋದರರಿಗೆ ತಿಳಿಸದೆ, ನಿಯಮಗಳನ್ನು ಉಲ್ಲಂಘಿಸಿ ಅದೇ ವ್ಯಾವಹಾರದಲ್ಲಿ ಮತ್ತೊಂದು ಸಂಸ್ಥೆಯನ್ನು ಸ್ಥಾಪಿಸಿರುವ ಆರೋಪವೊಂದು ಎದುರಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ