ಮೋದಿ ಭದ್ರತೆಗಾಗಿ ತೆರಳುತ್ತಿದ್ದ ಪೊಲೀಸ್ ಕಾರು ಅಪಘಾತ ; 6 ಮಂದಿ ಪೊಲೀಸರು ದಾರುಣ ಸಾವು..!
ಜೈಪುರ: ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರ‍್ಯಾಲಿಗಾಗಿ ನಿಯೋಜನೆಗೊಂಡಿದ್ದ ಆರು ಪೊಲೀಸರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಚುರು ಜಿಲ್ಲೆಯ (Churu Accident) ಕನೋಟ ಪೊಲೀಸ್ ಪೋಸ್ಟ್ ಪ್ರದೇಶದಲ್ಲಿ ಟ್ರಕ್‌ಗೆ ಪೊಲೀಸರು ಇದ್ದ ಎಸ್‌ಯುವಿ ವಾಹನವು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ (Rajasthan Accident) ಆರು ಪೊಲೀಸರು ಮೃತಪಟ್ಟರೆ, ಒಬ್ಬ ಪೊಲೀಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಾಗೌರ್ ಜಿಲ್ಲೆಯ ಝುಂಝುನುದಲ್ಲಿ ಭಾನುವಾರ (ನವೆಂಬರ್ 19) ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿ ಆಯೋಜನೆಗೊಂಡಿತ್ತು. ಇದಕ್ಕಾಗಿ ಪೊಲೀಸರನ್ನು ವಿಐಪಿ ಡ್ಯೂಟಿಗೆ ನಿಯೋಜಿಸಲಾಗಿತ್ತು. ಪೊಲೀಸರು ಭಾನುವಾರ ಬೆಳಗಿನ ಜಾವ ಮಹೀಂದ್ರಾ ಜೈಲೋ (Xylo) ಕಾರಿನಲ್ಲಿ ನಾಗೌರ್‌ನಿಂದ ಝುಂಝುನುಗೆ ತೆರಳುತ್ತಿದ್ದರು. ಇನ್ನೂ ಮಂಜು ಮುಸುಕಿದ ವಾತಾವರಣ ಇದ್ದ ಕಾರಣ ಪೊಲೀಸರು ಇದ್ದ ಕಾರು ಟ್ರಕ್‌ಗೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.
Flash:
— Yuvraj Singh Mann (@yuvnique) November 19, 2023
6 policemen killed and one sustained severe injuries in road #accident while they were on their way for VIP duty assigned to them for #PMModi's rally in the Nagaur district of #Rajasthan.
The accident took place after vehicle full of police personnel rammed into truck in… pic.twitter.com/qurPva9wcD
ಗಾಯಗೊಂಡಿರುವ ಮತ್ತೊಬ್ಬ ಪೊಲೀಸ್ ಅಧಿಕಾರಿ ಸ್ಥಿತಿಯೂ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಅಪಘಾತ ಸಂಭವಿಸುತ್ತಲೇ ಐವರು ಪೊಲೀಸರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮೃತ ಪೊಲೀಸರನ್ನು ರಾಮಚಂದ್ರ (56), ಸುಖರಾಮ್ (38), ಕುಂಭಾರಮ್ (35), ಧನರಾಮ್ (33), ಸುರೇಶ್ (35) ಹಾಗೂ ಮಹೇಂದ್ರ (51) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಪೊಲೀಸ್ ಅಧಿಕಾರಿಯನ್ನು ಸುಖರಾಮ್ ಖೋಜಾ ಎಂಬುವರು ಗಾಯಗೊಂಡಿದ್ದಾರೆ. ಇವರು ನಾಗೌರ್ ಜಿಲ್ಲೆಯ ಖಿನ್ವಸಾರ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಕೆಲ ತಿಂಗಳ ಹಿಂದೆ ಹರಿಯಾಣದಲ್ಲಿ ಧಾರ್ಮಿಕ ಮೆರವಣಿಗೆ ಮೇಲೆ ಕಲ್ಲು ತೂರಾಟ ಮತ್ತು ಕಾರುಗಳಿಗೆ ಬೆಂಕಿ ಹಚ್ಚಿದ ಗುಂಪೊಂದು ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರು ಗೃಹರಕ್ಷಕರು ಮೃತಪಟ್ಟು, ಏಳು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಹಿಂಸಾಚಾರ ನಡೆಸುತ್ತಿದ್ದ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.