ಬುಧವಾರ, ಫೆಬ್ರವರಿ 21, 2024
ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!-ಮಕ್ಕಳಿಗೆ ಮೊಟ್ಟೆ ಮತ್ತು ಹಾಲಿನ ಜೊತೆ ವಾರದಲ್ಲಿ 3 ದಿನ ರಾಗಿಮಾಲ್ಟ್: ಮಧು ಬಂಗಾರಪ್ಪ..!-ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್ ನಿಧನ..!-ದೆಹಲಿ ಗಡಿಯಲ್ಲಿ 14 ಸಾವಿರ ರೈತರು ಮತ್ತೆ ಪ್ರತಿಭಟನೆ..!-ಆಟೋಗೆ ಟ್ರಕ್‌ ಡಿಕ್ಕಿಯಾಗಿ ಅಪ್ಪಚ್ಚಿ; ಸ್ಥಳದಲ್ಲೇ 9 ಮಂದಿ ದುರ್ಮರಣ...!-ಪುತ್ತೂರು : ನಿಂತಿದ್ದ ಕಾರಿನಲ್ಲಿ ತಲವಾರು ಪತ್ತೆ: ನಾಲ್ವರ ಸೆರೆ-Sonia Gandhi: ರಾಜ್ಯಸಭೆಗೆ ಸೋನಿಯಾ ಗಾಂಧಿ ಅವಿರೋಧವಾಗಿ ಆಯ್ಕೆ!-Gold Rate Today : ಇಳಿಕೆಯತ್ತ ಬಂಗಾರದ ಬೆಲೆ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ಅಪ್ಡೇಟ್ಸ್-ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾಗೆ ಎರಡನೇ ಗಂಡು ಮಗು ; ಹೆಸರೇನು ಗೊತ್ತೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಾತಿನಲ್ಲೇ ಮತ್ತೆ ಕೌಂಟರ್ ಕೊಟ್ಟ ಶಮಿ ಪತ್ನಿ ; ಶಮಿಯ ನಿಜ ಜೀವನ ಮತ್ತು ಕ್ರಿಕೆಟ್ ಜೀವನ ರೋಚಕ..!

Twitter
Facebook
LinkedIn
WhatsApp
ಮಾತಿನಲ್ಲೇ ಮತ್ತೆ ಕೌಂಟರ್ ಕೊಟ್ಟ ಶಮಿ ಪತ್ನಿ ; ಶಮಿಯ ನಿಜ ಜೀವನ ಮತ್ತು ಕ್ರಿಕೆಟ್ ಜೀವನ ರೋಚಕ..!
ಮುಂಬೈ: ಜೀವನದ ಏಳು-ಬೀಳುಗಳನ್ನ ದಾಟಿ ದೇಶವೇ ಕೊಂಡಾಡುತ್ತಿರುವ ಟೀಂ ಇಂಡಿಯಾದ ಸ್ಟಾರ್‌ ವೇಗಿ ಮೊಹಮ್ಮದ್‌ ಶಮಿ ಅವರ ಬದುಕು ತೆರೆಯ ಹಿಂದೆ ಘೋರವೆನಿಸುತ್ತದೆ. ಮೊಹಮ್ಮದ್‌ ಶಮಿ ಇತ್ತೀಚಿನ ಬೌಲಿಂಗ್‌ ಪ್ರದರ್ಶನ ಕುರಿತು ವಿಚ್ಛೇದಿತ ಪತ್ನಿ ಹಸೀನ್‌ ಜಹಾನ್‌ ಮೊದಲಬಾರಿಗೆ ಮಾತನಾಡಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಅತ್ಯದ್ಭುತ ಜಯ ಸಾಧಿಸಿತು. ಇತರ ಬೌಲರ್‌ಗಳನ್ನು ಬಗ್ಗು ಬಡಿಯುತ್ತಿದ್ದ ಕಿವೀಸ್‌ ಪಡೆಯ ಆಟಕ್ಕೆ ಬ್ರೇಕ್‌ ಹಾಕುವ ಮೂಲಕ ಶಮಿ ಟೀಂ ಇಂಡಿಯಾಕ್ಕೆ ಜಯ ತಂದುಕೊಟ್ಟಿದ್ದರು. ಒಂದೇ ಪಂದ್ಯದಲ್ಲಿ 7 ವಿಕೆಟ್‌ಗಳನ್ನು ಪಡೆಯುವ ಮೂಲಕ ಅನೇಕ ದಾಖಲೆಗಳನ್ನ ನುಚ್ಚುನೂರು ಮಾಡಿದರು. ಆದ್ರೆ ಶಮಿ ಅವರ ಅದ್ಭುತ ಬೌಲಿಂಗ್‌ ಪ್ರದರ್ಶನದ ಬಗ್ಗೆ ವಿಚ್ಛೇದಿತ ಪತ್ನಿ ಹಸೀನ್‌ ಜಹಾನ್‌ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಮಾತಿನಲ್ಲೇ ತಿವಿದಿದ್ದಾರೆ.

ಶಮಿ ಆಟಗಾರನಾಗಿ ಒಳ್ಳೆಯ ವ್ಯಕ್ತಿ ಅಷ್ಟೇ. ಆಟಗಾರನಾಗಿ ಇರುವಷ್ಟೇ ಜೀವನದಲ್ಲೂ ಒಳ್ಳೆಯ ವ್ಯಕ್ತಿಯಾಗಿದ್ದರೆ, ಉತ್ತಮ ಜೀವನ ನಡೆಸಬಹುದಿತ್ತು. ಅವರು ನಿಜಕ್ಕೂ ಒಳ್ಳೆಯವರಾಗಿದ್ದರೆ ನನ್ನ ಮಕ್ಕಳೊಂದಿಗೆ ನಾನೂ ಸಂತೋಷವಾಗಿರುತ್ತಿದ್ದೆ. ಸಂತೋಷದಾಯಕ ಜೀವನ ನಡೆಸಬಹುದಿತ್ತು. ಅವರು ಆಟಗಾರನಾಗಿರುವಷ್ಟೇ ಮಕ್ಕಳಿಗೆ ಒಳ್ಳೆಯ ತಂದೆ, ಹೆಂಡತಿಗೆ ಒಳ್ಳೆಯ ಗಂಡನಾಗಿದ್ದಿದ್ದರೆ ಅದು ಇನ್ನೂ ಗೌರವ ತರುತ್ತಿತ್ತು ಎಂದು ಬೇಸರ ಹೊರಹಾಕಿದ್ದಾರೆ. ಇದಕ್ಕೆ ಶಮಿ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

ಮದುವೆ ಆಫರ್‌ ಕೊಟ್ಟ ನಟಿಗೆ ಹೇಳಿದ್ದೇನು?
ಪಾಯಲ್​ ಘೋಷ್​ ಹೇಳಿಕೆಗೆ ಇದೀಗ ಮಾಧ್ಯಮ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿರುವ ಹಸಿನಾ, ಸೆಲೆಬ್ರಿಟಿಗಳಿಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ರೀತಿಯ ಆಫರ್​ ನೀಡುವುದು ಹೊಸತೇನಲ್ಲ. ಇದೆಲ್ಲವು ತುಂಬಾನೇ ಸಾಮಾನ್ಯ. ಇಂತಹ ವಿಚಾರಗಳ ಬಗ್ಗೆ ಕಾಮೆಂಟ್​ ಮಾಡಲು ನನಗೆ ಆಸಕ್ತಿ ಇಲ್ಲ ಎಂದಿದ್ದಾರೆ

ಶಮಿ ಬದುಕಿಗೆ ಮದುವೆಯೇ ಮುಳುವಾಯ್ತಾ?
ಕ್ರಿಕೆಟ್ ಪಿಚ್ ನಲ್ಲಿ ಶಮಿ ಇದ್ದರೆ ಅಲ್ಲಿ ಗೆಲುವು ಗ್ಯಾರಂಟಿ. ಸಾಕಷ್ಟು ಬಾರಿ ಸೋಲಿನ ದವಡೆಯಿಂದ ಟೀಮ್ ಇಂಡಿಯಾವನ್ನು ಪಾರು ಮಾಡಿದ್ದಾರೆ ಮೊಹಮ್ಮದ್ ಶಮಿ. ಕ್ರಿಕೆಟ್ ಪ್ರೇಮಿಗಳ ಸಂಭ್ರಮಕ್ಕೆ ಕಾರಣವಾಗುತ್ತಿರುವ ಶಮಿ ಖಾಸಗಿ ಬದುಕಿನಲ್ಲಿ ನಿಜಕ್ಕೂ ಸಂಭ್ರಮವಿಲ್ಲ. ಇಂಥದ್ದೊಂದು ಸಂಭ್ರಮವನ್ನು ಒಅವರಿಂದ ಕಿತ್ತುಕೊಂಡಿದ್ದು ಅವರ ಮದುವೆ ಎನ್ನುವುದು ಸುಳ್ಳಲ್ಲ.

ಅಷ್ಟಕ್ಕೂ ಶಮಿ ಮದುವೆಯಾದ ಹುಡುಗಿ ಬೇರೆ ಯಾರೂ ಅಲ್ಲ, ಇದೇ ಕ್ರಿಕೆಟ್ ಪಂದ್ಯ ಆಡುವಾಗ ಚೀರ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದವರು. ಶಮಿ ಮದುವೆಯಾದ ಹುಡುಗಿಯ ಹೆಸರು ಹಸೀನ್ ಜಹಾನ್. ಮೂಲತಃ ಕೋಲ್ಕತ್ತಾ ನಿವಾಸಿ. 10ನೇ ತರಗತಿಯಲ್ಲಿರುವಾಗ ಕಿರಾಣಿ ಅಂಗಡಿಯ ಮಾಲೀಕರೊಬ್ಬರ ಜೊತೆ ಇವರ ಮದುವೆಯಾಗಿತ್ತು. ಈ ಜೋಡಿಗೆ ಎರಡು ಹೆಣ್ಣು ಮಕ್ಕಳು ಕೂಡ ಇದ್ದರು. ಗಂಡನೊಂದಿಗಿನ ಮನಸ್ತಾಪದಿಂದಾಗಿ ಡಿವೋರ್ಸ್ ಪಡೆದರು. 2012ರಲ್ಲಿ ಶಮಿ ಟೀಂ ಇಂಡಿಯಾ ಸೇರಲು ಕಸರತ್ತು ನಡೆಸಿದ್ದರು. ಇದೇ ವೇಳೆ ವೃತ್ತಿಯಲ್ಲಿ ಮಾಡೆಲ್ ಆಗಿದ್ದ ಹಸೀನ್, ಕೋಲ್ಕತಾ ನೈಟ್ ರೈಡರ್ಸ್ ಚೀರ್ ಲೀಡರು. ಐಪಿಎಲ್ ಲೀಗ್ ವೇಳೆ ಇಬ್ಬರ ಭೇಟಿ ಆಯಿತು. ಶಮಿ ಮತ್ತು ಹಸೀನ್ ಫ್ರೆಂಡ್ಸ್ ಆದರು. ಈ ಗೆಳೆತನ ಹಲವು ದಿನಗಳ ನಂತರ ಪ್ರೇಮಕ್ಕೆ ತಿರುಗಿತು. ಇಬ್ಬರ ನಡುವೆ 13 ವರ್ಷಗಳ ಅಂತರವಿದ್ದರೂ. ಕೆಲ ವರ್ಷಗಳ ಕಾಲ ಒಟ್ಟಿಗೆ ಬದುಕಿದರು. ಇಬ್ಬರೂ ಕುಟುಂಬದಲ್ಲಿ ಒಪ್ಪಿಸಿ ಮದುವೆಯಾದರು. ಈ ಜೋಡಿಗೂ ಒಂದು ಪುಟಾಣಿ ಹೆಣ್ಣು ಮಗುವಾಯಿತು. ಮದುವೆಯಾದ ನಾಲ್ಕೇ ನಾಲ್ಕು ವರ್ಷಕ್ಕೆ ಶಮಿ ಮತ್ತು ಹಸೀನ್ ಬದುಕಿನಲ್ಲಿ ಬಿರುಕಿನ ಬಿರುಗಾಳಿ ಎದ್ದಿತು.

ಹೌದು, ಶಮಿ ಮತ್ತು ಹಸೀನ್ ಒಟ್ಟಿಗೆ ಇದ್ದದ್ದು ಕೇವಲ ನಾಲ್ಕು ವರ್ಷ. ಅತೀ ಕಡಿಮೆ ಸಮಯವದು. ಇಷ್ಟು ಕಡಿಮೆ ಸಮಯದಲ್ಲಿ ಒಬ್ಬರಿಗೊಬ್ಬರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ. ಶಮಿ ಅವರದ್ದು ಅದೇನು ತೊಂದರೆ ಆಯಿತೋ ಗೊತ್ತಿಲ್ಲ. ಏಕಾಏಕಿ ಶಮಿ ಮೇಲೆ ಹಲವಾರು ಆರೋಪಗಳನ್ನು ಮಾಡಿಬಿಟ್ಟರು ಹಸೀನ್. ಅದು ಅಂತಿಂಥ ಆರೋಪವಲ್ಲ, ಇಷ್ಟಪಟ್ಟು ಮದುವೆಯಾದ ಪತಿಯ ವಿರುದ್ಧವೇ ಕೌಟುಂಬಿಕ ದೌರ್ಜುನ್ಯದ ಆರೋಪ ಹೊರಸಿದರು. ಪತಿಗೆ ವಿವಾಹೇತರ ಸಂಬಂಧಗಳಿವೆ ಎಂದು ಕೋರ್ಟ್ ಮೆಟ್ಟಿಲು ಏರಿದರು. ಕೌಟುಂಬಿಕ ಜಗಳ ಬೀದಿ ರಂಪಾಟವಾಯಿತು. ತಮ್ಮ ಮೇಲೆ ಶಮಿ ಕುಟುಂಬವು ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೂಡ ಮಾಡಿದರು. ಶಮಿ ಮೇಲೆ ಕೊಲೆ ಬೆದರಿಕೆ ದೂರು ಕೂಡ ದಾಖಲಾಯಿತು. ಪತ್ನಿಯೇ ಶಮಿ ಬದುಕಿಗೆ ವಿಲನ್ ಆದರು. ಅಷ್ಟೊಂದು ದೂರುಗಳು ದಾಖಲಾಗುತ್ತಿದ್ದಂತೆಯೇ ಅಕ್ಷರಶಃ ನಲುಗಿ ಹೋದರು ಶಮಿ. ತನ್ನದೇನೂ ತಪ್ಪಿಲ್ಲವೆಂದು ಹೇಳಿಕೊಂಡರೂ, ಯಾರೂ ಒಪ್ಪಿಕೊಳ್ಳಲು ತಯಾರು ಇರಲಿಲ್ಲ. ಗಾಯದ ಮೇಲೆ ಬರೆ ಎನ್ನುವಂತೆ ಬಿಸಿಸಿಐ ಕೂಡ ಶಮಿಯನ್ನು ಕೆಲ ಕಾಲ ನಿಷೇಧ ಹೇರಿತ್ತು. ಪಾತಾಳಕ್ಕೆ ಕುಸಿದು ಬಿಟ್ಟರು ವೇಗಿ ಈ ಬೌಲರ್. ಈ ಎಲ್ಲ ಸಂಕೋಲೆಗಳಿಂದ ಶಮಿ ಬಿಡಿಸಿಕೊಂಡು ಮತ್ತೆ ಪಿಚ್‌ನಲ್ಲಿ ಕಾಣಿಸಿಕೊಂಡ್ಡದ್ದು ಮಾತ್ರ ರೋಚಕ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ Twitter Facebook LinkedIn WhatsApp Drago Fruit; ಡ್ರಾಗನ್ ಫ್ರೂಟ್ ಒಂದು ಆರೋಗ್ಯದಾಯಕ ಹಣ್ಣು. ‘ಸಿ’ ಮತ್ತು ‘ಬಿ’