ಆಯಿಲ್ ಟ್ಯಾಂಕರ್‌ಗೆ ರೋಲ್ಸ್ ರಾಯ್ಸ್ ಡಿಕ್ಕಿ, ಇಬ್ಬರು ಸಾವು

ಹರಿಯಾಣ: ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಓಡಿಸಬೇಕೆಂಬುದು ಎಷ್ಟೋ ಜನರ ಕನಸು. ದಿರ ಬೆಲೆಯೂ ಕೋಟಿಗಟ್ಟಲೆ. ಇದೇ ಕಾರು ಇದೀಗ ಅಪಘಾತಕ್ಕೊಳಗಾಗಿ ಸುಟ್ಟು ಭಸ್ಮವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಹರಿಯಾಣದ ನುಹ್‌ನ ದೆಹಲಿ- ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಆಯಿಲ್ ಟ್ಯಾಂಕರ್‌ಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಡಿಕ್ಕಿಹೊಡೆದಿದೆ. ಘಟನೆಯಲ್ಲಿ ಐಷಾರಾಮಿ ಕಾರು ಹಾಗೂ ಟ್ಯಾಂಕರ್ ಸಂಪೂರ್ಣ ಸುಟ್ಟು ಭಸ್ಮವಾಗಿದೆಯಾದರೂ ಮೃಪಟ್ಟಿದ್ದು ಮಾತ್ರ ಟ್ಯಾಂಕರ್‌ನಲ್ಲಿದ್ದವರು.
ಮೃತರನ್ನು ಟ್ಯಾಂಕರ್ ಚಾಲಕ ರಾಮಪ್ರೀತ್ ಮತ್ತು ಆತನ ಸಹಾಯಕ ಕುಲದೀಪ್ ಎಂದು ಗುರುತಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಟ್ಯಾಂಕರ್ನಲ್ಲಿದ್ದವರಿಗೆ ತಪ್ಪಿಸಿಕೊಳ್ಳಲು ಸಹಾಯವಾಗಿಲ್ಲ. ರೋಲ್ಸ್ ರಾಯ್ಸ್ ಕಾರಿನಲ್ಲಿದ್ದ ಎಲ್ಲಾ ಐವರನ್ನು ಹಿಂದೆ ಬರುತ್ತಿದ್ದ ಮತ್ತೊಂದು ಕಾರಿನಲ್ಲಿದ್ದ ಅವರ ಸಂಬಂಧಿಕರು ರಕ್ಷಿಸಿದ್ದಾರೆ. ರೋಲ್ಸ್ ರಾಯ್ಸ್ ಕಾರಿನಲ್ಲಿದ್ದ ಐವರ ಪೈಕಿ ಮೂವರು ಗಾಯಗೊಂಡಿದ್ದು, ಗುರುಗಾಂವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
230 ಕಿಮೀ ಸ್ಪೀಡ್ನಲ್ಲಿದ್ದ ಕಾರು
10 ಕೋಟಿ ರೂಪಾಯಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಅಪಘಾತದ ಸಮಯದಲ್ಲಿ ಗಂಟೆಗೆ 230 ಕಿಮೀ ಸ್ಪೀಡ್ನಲ್ಲಿತ್ತು. ಅಪಘಾತಕ್ಕೊಳಗಾದ ರೋಲ್ಸ್ ರಾಯ್ಸ್ ಕಾರು ಹಾಗೂ ಅದರ ಹಿಂದಿದ್ದ ಎಲ್ಲಾ ಐದಾರು ಕಾರುಗಳು ಐಷಾರಾಮಿ ಕಾರುಗಳು ಆಗಿದ್ದವು. ಕಾರು ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ, ಆದರೆ ಅಪಘಾತಕ್ಕೆ ಟ್ಯಾಂಕರ್ ಚಾಲಕನನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಪಾಪ ಅವರು ಬಡವರು ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದವರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
The Rolls Royce was driving at 230 kmph. I have zero sympathy for truck drivers - they are badly trained & a menace on Indian roads. But in this case the fault was almost entirely the Rolls Royce’s. The truck driver & his assistant were burnt alive. pic.twitter.com/YUIWByeRi1
— Abhijit Iyer-Mitra (@Iyervval) August 24, 2023
ಟ್ಯಾಂಕರ್‌ನಲ್ಲಿದ್ದವರು ಈ ಮಾರ್ಗದಲ್ಲಿ ಪ್ರತಿದಿನ ಸಂಚರಿಸುತ್ತಾರೆ. ಅಪಘಾತ ಸಂಭವಿಸಿದಾಗ ಎರಡೂ ವಾಹನಗಳು ದೆಹಲಿಯಿಂದ ಬರುತ್ತಿದ್ದವು. ಅಪಘಾತದ ಸ್ಥಳದಲ್ಲಿ ಯು-ಟರ್ನ್ ಮಾಡಲು ಜಾಗವಿತ್ತು. ಅಲ್ಲಿ ಟ್ಯಾಂಕರ್ ಯು-ಟರ್ನ್ ತೆಗೆದುಕೊಳ್ಳುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ನುಹ್ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ತಿಳಿಸಿದ್ದಾರೆ.