ಮಂಗಳವಾರ, ಮೇ 14, 2024
ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!-ಕೊನೆಗೂ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ; ಕೋರ್ಟ್ ಷರತ್ತುಗಳೇನು.?-ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್-ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Arecanut: ಕಳೆದ ವಾರ ಇಳಿಕೆಯಲ್ಲಿದ್ದ ಅಡಿಕೆ ಧಾರಣೆ ಮತ್ತೆ ಏರಿಕೆ ; 500 ರ ಗಡಿ ತಲುಪುವ ಸಾಧ್ಯತೆ!

Twitter
Facebook
LinkedIn
WhatsApp
Arecanut: ಕಳೆದ ವಾರ ಇಳಿಕೆಯಲ್ಲಿದ್ದ ಅಡಿಕೆ ಧಾರಣೆ ಮತ್ತೆ ಏರಿಕೆ ; 500 ರ ಗಡಿ ತಲುಪುವ ಸಾಧ್ಯತೆ!
ಕಳೆದ ತಿಂಗಳಲ್ಲಿ ಏರಿಕೆ ಹಾದಿಯಲ್ಲಿದ್ದ ಅಡಿಕೆದರ ಮತ್ತೆ ಕುಸಿತಗೊಂಡಿತ್ತು. ಆದರೆ ಇದೀಗ ಮತ್ತೆ ಏರಿಕೆಯಾಗಿದ್ದು 500 ರಗಡಿ ತಲುಪಲು ಇನ್ನು ಕೆಲವೇ ದಿನಗಳಿದ್ದು ಮುಂದಿನ ತಿಂಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದು ಅಡಿಕೆ ವರ್ತಕರು ಮತ್ತು ಬೆಳೆಗಾರರಲ್ಲಿ ಹಾಗೂ ಕೃಷಿ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.

ಬಂಟ್ವಾಳ

ಹಳೆದು -46,000 – 49,000 ರೂ.

ಹೊಸದು -44000 – 460000

ಪುತ್ತೂರು 

ಹಳೆದು – 46,000 – 49,000 ರೂ

ಹೊಸದು – 44000 – 46500

ಶಿವಮೊಗ್ಗ

ರಾಶಿ ಅಡಿಕೆ – 51,621 ರೂ.

ತುಮಕೂರು

ರಾಶಿ ಅಡಿಕೆ – 54,050 ರೂ.  

ಸಾಗರ    

ರಾಶಿ ಅಡಿಕೆ- 50,219 ರೂ

 

ಕರಾವಳಿ ಭಾಗಗಳಲ್ಲಿ ಅತಿ ಹೆಚ್ಚಾಗಿ ಅಡಿಕೆ ಬೆಳೆಯನ್ನೇ ಪ್ರಮುಖ ವಾಣಿಜ್ಯ ಬೆಳೆಯನ್ನಾಗಿಸಿ ರೈತರು ಜೀವನ ನಡೆಯುತ್ತಿದ್ದಾರೆ. ಎಲೆಚುಕ್ಕಿ ರೋಗ ದಿಂದ ಹಲವು ಪ್ರದೇಶಗಳಲ್ಲಿ ಅಡಿಕೆ ಬೆಳೆಗಾರರಿಗೆ ತೊಂದರೆ ಉಂಟಾಗಿತ್ತು ಆದರೆ ಈ ಬಾರಿ ಬೇಸಿಗೆಯಲ್ಲಿ ಹಲವು ಕಡೆ ನೀರಿನ ಅಭಾವದಿಂದ ಅಡಿಕೆ ಗಿಡಗಳು ಬತ್ತಿ ಹೋಗಿವೆ. ಕೆರೆ ಹಾಗೂ ನದಿಗಳನ್ನು ನಂಬಿಕೊಂಡಿದ್ದ ಹಲವು ಜನರಿಗೆ ಸಂಕಷ್ಟ ಉಂಟಾಗಿತ್ತು.

ಹೊಸ ಹಾಗೂ ಹಳೆ ಅಡಿಕೆಗೆ ಕೇವಲ 25 ರೂಪಾಯಿಯಷ್ಟು ವ್ಯತ್ಯಾಸವಿದ್ದು ಹೊಸ ಅಡಿಕೆಗೆ ಬಾರಿ ಬೇಡಿಕೆ ಇದೆ. ಗುಜರಾತ್ ಉತ್ತರ ಪ್ರದೇಶ ಅಂತಹ ರಾಜ್ಯಗಳಿಗೆ ರಫ್ತಾಗುತ್ತಿದ್ದು, ದೇಶ ವಿದೇಶಗಳಿಗೂ ಈ ಭಾಗದಿಂದ ರಫ್ತಾಗುತ್ತಿದೆ.

ಕಳೆದ ಮೂರು ವರ್ಷಗಳ ಹಿಂದೆ ಸುಳ್ಯ ಮಡಿಕೇರಿ ಭಾಗಕ್ಕೆ ಎಲಚುಕ್ಕಿ ರೋಗವು ಸಾಕಷ್ಟು ಹಾನಿ ಉಂಟು ಮಾಡಿತ್ತು. ಆದರೆ ಕರಾವಳಿ ಭಾಗಗಳಲ್ಲಿ ಕೀಟನಾಶಕ ಸಿಂಪಡಿಸಿ ಎಲೆ ಚುಕ್ಕಿ ರೋಗದಿಂದ ಪಾರಾಗಿದ್ದರು ಕಳೆದ ಬಾರಿಯೂ ಅಡಿಕೆಗೆ ಬಾರಿ ಬೇಡಿಕೆ ಇದ್ದು 500 ಗಡಿ ತಲುಪಿತ್ತು ಈ ಬಾರಿ ಅಡಿಕೆ ಬೆಳೆಗಾರರು ಉತ್ತಮ ದರದಲ್ಲಿ ನಿರೀಕ್ಷಿದ್ದು ಕ್ವಿಂಟಲ್ ಗೆ 50,000 ಗಡಿ ದಾಟುವುದು ಎಂದು ಅಡಿಕೆ ಬೆಳೆಗಾರರಲ್ಲಿ ಮಾತು ಕೇಳಿ ಬರುತ್ತಿದೆ. ಮುಂದಿನ ಗಣೇಶ ಚತುರ್ಥಿ ಮತ್ತು ಅಷ್ಟಮಿಯ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆಯು ಇದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇದ್ದು ಅಡಿಕೆ ವರ್ತಕರು ಕೂಡ ರೈತರಿಂದ ಉತ್ತಮ ದರಕ್ಕೆ ಅಡಿಕೆಯನ್ನು ಪಡೆದುಕೊಂಡಿರುತ್ತಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ