ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್​ನಿಂದಾಗಿ ಅಜ್ಜಿ ಮತ್ತು ಮೊಮ್ಮಕ್ಕಳು ಸೇರಿ ನಾಲ್ವರು ದಾರುಣ ಸಾವು!

Twitter
Facebook
LinkedIn
WhatsApp
ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್​ನಿಂದಾಗಿ ಅಜ್ಜಿ ಮತ್ತು ಮೊಮ್ಮಕ್ಕಳು ಸೇರಿ ನಾಲ್ವರು ದಾರುಣ ಸಾವು!

ಚೆನ್ನೈ: ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್​ನಿಂದಾಗಿ ಒಂದೇ ಕುಟುಂಬದ ನಾಲ್ವರು ದುರಂತ ಸಾವಿಗೀಡಾಗಿರುವ ಘಟನೆ ಚೆನ್ನೈನ ಮನಾಲಿಯಲ್ಲಿರುವ ಮಥುರ್​ ಎಂಎಂಡಿಯ ಏರಿಯಾದಲ್ಲಿ ಇಂದು (ಆ. 19) ಮುಂಜಾನೆ ನಡೆದಿದೆ.

ಮೃತರನ್ನು ಸಂತಾನಲಕ್ಷ್ಮೀ ಮತ್ತು ಆಕೆಯ ಮೂವರು ಮಕ್ಕಳಾದ ಸಂಧ್ಯಾ (10), ಪ್ರಿಯಾ ರಕ್ಷಿತಾ (8) ಮತ್ತು ಪವಿತ್ರಾ (8) ಎಂದು ಗುರುತಿಸಲಾಗಿದೆ.

ಒಡೆಯಾ ಎಂಬಾತ ಆನ್​ಲೈನ್​ ಫುಡ್​ ಡೆಲಿವರಿಬಾಯ್​ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಅವರ ಕಾಲಿಗೆ ಏಟು ಬಿದ್ದು ಗಾಯಗೊಂಡರು. ಬಳಿಕ ಅವರನ್ನು ಚೆನ್ನೈನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆತನನ್ನು ನೋಡಿಕೊಳ್ಳಲೆಂದು ಪತ್ನಿ ಆಸ್ಪತ್ರೆಗೆ ಬಂದಿದ್ದರು. ಆಕೆಯ ತಾಯಿ, ಮನೆಯಲ್ಲಿದ್ದ ಮೂವರು ಮೊಮಕ್ಕಳನ್ನು ನೋಡಿಕೊಳ್ಳಲೆಂದು ವಾಪಸ್ಸಾಗಿದ್ದರು.

ಮೂವರು ಮಕ್ಕಳು ಸಹ ರಾತ್ರಿ ಅಜ್ಜಿಯ ಜತೆ ಮಲಗಿದ್ದರು. ಅವರು ವಾಸಿಸುತ್ತಿದ್ದ ಪ್ರದೇಶದಲ್ಲಿ ಸೊಳ್ಳೆಗಳು ಹೆಚ್ಚಾಗಿದ್ದರಿಂದ ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್​ ಅನ್ನು ಆನ್​ ಮಾಡಿ ಮಲಗಿದ್ದರು. ಗಾಢ ನಿದ್ರೆಯಲ್ಲಿ ಇರುವಾಗ ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್​ ಓವರ್​ಹೀಟ್​ನಿಂದ ಮೆಲ್ಟ್​ ಆಗಿ ಹತ್ತಿರದಲ್ಲಿ ಇದ್ದ ಕಾರ್ಡ್​ಬೋರ್ಡ್​ ಬಾಕ್ಸ್​ ಮೇಲೆ ಬಿದ್ದಿದೆ. ಇದರಿಂದ ಉಂಟಾದ ಹೊಗೆಯಿಂದ ಉಸಿರಾಡಲು ಆಗದೇ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಳಗ್ಗೆ ಎದ್ದು ನೋಡಿದಾಗ ಮನೆಯ ಕಿಟಕಿಗಳಿಂದ ಹೊಗೆ ಆಚೆ ಬರುತ್ತಿರುವುದನ್ನು ನೆರೆಯವರು ಗಮನಿಸಿದರು. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ನಾಲ್ವರು ಮೃತಪಟ್ಟಿರುವು ಬೆಳಕಿಗೆ ಬಂದಿದೆ. ಈ ಘಟನೆ ಆ ಏರಿಯಾ ಜನರನ್ನು ಆತಂಕಕ್ಕೆ ದೂಡಿದೆ.

ಇತ್ತ ಆಸ್ಪತ್ರೆಯಲ್ಲಿರುವ ಒಡೆಯ ಮತ್ತು ಆತನ ಪತ್ನಿಗೆ ಈ ಸುದ್ದಿ ಬರ ಸಿಡಿಲು ಬಡಿದಂತಾಗಿದೆ. ಇನ್ನು ಈ ಘಟನೆಗೆ ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್​ ಕಾರಣ ಎಂದು ಹೇಳಲಾಗಿದ್ದರೂ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇದು ಕೂಡ ಸಂಭಾವ್ಯ ಕಾರಣ ಆಗಿರಬಹುದೆಂದು ತಿಳಿಸಿದ್ದಾರೆ. ಅಲ್ಲದೆ, ಮನೆಯಲ್ಲಿ ಬಳಸದ ಸಿಲಿಂಡರ್​ ಸಹ ಇತ್ತೆಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

‘ಅವರು’ ನಿಮ್ಮ ಹೆಂಡತಿಯ ಹತ್ಯೆಗೈದು ಅಂತ್ಯಕ್ರಿಯೆ ಮಾಡಿದ್ದಾರೆ: ಸ್ನೇಹಿತನ ಕರೆಗೆ ಪತಿ ತತ್ತರ

ಗುರುಗ್ರಾಮ್: ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣದಲ್ಲಿ, ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಅನ್ಯ ಜಾತಿಯ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕಾಗಿ 22 ವರ್ಷದ ಯುವತಿಯನ್ನು ಆಕೆಯ ಪೋಷಕರು ಮತ್ತು ಸಹೋದರ ಕತ್ತು ಹಿಸುಕಿ ಕೊಂದಿರುವ ಘಟನೆ ದೆಹಲಿ ಬಳಿಯ ಗುರುಗ್ರಾಮ್‌ನಲ್ಲಿ ನಡೆದಿದೆ.

ಮೃತ ಯುವತಿಯನ್ನು ಅಂಜಲಿ ಎಂದು ಗುರುತಿಸಲಾಗಿದ್ದು, ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಂಜಲಿಯು ಪಬ್‌ನಲ್ಲಿ ಕೆಲಸ ಮಾಡುತ್ತಿರುವ ಸಂದೀಪ್ ಎಂಬಾತನ್ ಜತೆಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದಳು. ಕುಟುಂಬದ ವಿರೋಧದಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದು ಅರಿತು ಗ್ರಾಮವನ್ನು ತೊರೆದು ಗುರುಗ್ರಾಮದ ಫ್ಲ್ಯಾಟ್​ವೊಂದರಲ್ಲಿ ವಾಸಿಸುತ್ತಿದ್ದರು.

ಅಂಜಲಿಯ ನಿರ್ಧಾರದಿಂದ ಮನೆಯವರು ಬೇಸರಗೊಂಡಿದ್ದರು. ಹೀಗಾಗಿ ಆಕೆಯ ಮನೆಯವರು ಆಕೆಯನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಅಂಜಲಿಯ ಸಹೋದರನಿಗೂ ಪ್ರೇಮ ವಿವಾಹವಾಗಿತ್ತು. ನಂತರ ಆತ ಅಂಜಲಿ ಮತ್ತು ಸಂದೀಪ್​ನ ವಿಶ್ವಾಸ ಗಳಿಸಿ ಆಗಾಗ್ಗೆ ಇಬ್ಬರ ಬಳಿ ಹೋಗಿ ಬರುತ್ತಿದ್ದ. ಗುರುವಾರದಂದು ಆಕೆಯ ಸಹೋದರ ಕುನಾಲ್, ತಂದೆ ಕುಲದೀಪ್ ಮತ್ತು ತಾಯಿ ರಿಂಕಿ ಫ್ಲ್ಯಾಟ್​​​ಗೆ ತಲುಪಿದ್ದು, ಅಂಜಲಿ ಮೇಲೆ ಹಲ್ಲೆ ನಡೆಸಿ ಮೂವರು ಸೇರಿಕೊಂಡು ಕತ್ತು ಹಿಸುಕಿ ಹತ್ಯೆಗೈದಿದ್ದಾರೆ.

ಬಳಿಕ ಮೂವರು ಅಂಜಲಿಯ ಶವವನ್ನು ಕಾರಿನಲ್ಲಿ ಹಾಕಿಕೊಂಡು, ಗುರುಗ್ರಾಮದಿಂದ ತಮ್ಮ ಹಳ್ಳಿ ಸುರೇಟಿಗೆ ತೆರಳಿ ನಿರ್ಜನ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಗ್ರಾಮದಲ್ಲಿ ಯಾರೂ ಅದನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಆದರೆ ನಿಧಾನವಾಗಿ ಈ ಕುರಿತು ಸುದ್ದಿ ಹರಡಿದ್ದು, ಗ್ರಾಮಸ್ಥರೊಬ್ಬರು ಅಂಜಲಿಯ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದ ಸಂದೀಪನಿಗೆ ಆಘಾತವಾಗಿದ್ದು, ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಪೊಲೀಸರು ಅಂಜಲಿಯ ಕುಟುಂಬವನ್ನು ವಶಕ್ಕೆ ಪಡೆದಿದ್ದು ವಿಚಾರಣೆ ವೇಳೆ ಮೂವರು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist