ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಬಳಿ ಮತ್ತೆ ನೈತಿಕ ಪೊಲೀಸ್ಗಿರಿ ; ಅನ್ಯಕೋಮಿನ ಜೋಡಿ ಮೇಲೆ ದಾಳಿ!
ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ಗಿರಿ ನಡೆದಿದೆ. ಅನ್ಯಕೋಮಿನ ಜೋಡಿ ಮೇಲೆ ಹಿಂದೂ ಕಾರ್ಯಕರ್ತರಿಂದ ದಾಳಿ ಮಾಡಿರುವಂತಹ ಘಟನೆ ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಬಳಿ ನಡೆದಿದೆ. ಅನ್ಯಕೋಮಿನ ಯುವಕನ ಜತೆ ಮಿಲಾಗ್ರಿಸ್ ಬಳಿ ಯುವತಿ ನಿಂತಿದ್ದಾಳೆ. ಈ ವೇಳೆ ಹಿಂದೂ ಕಾರ್ಯಕರ್ತರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದು, ಹಲ್ಲೆಗೆ ಯತ್ನಿಸಿದ್ದಾರೆ.
ಸ್ಥಳಕ್ಕೆ ಬಂದರು ಠಾಣೆ ಪೊಲೀಸರು ಆಗಮಿಸುತ್ತಿದ್ದಂತೆ ಜೋಡಿ ಮೇಲೆ ಹಲ್ಲೆಗೆ ಯತ್ನಿಸಿದ ಕಾರ್ಯಕರ್ತರು ಸ್ಥಳದಿಂದ ಪರಾರಿ ಆಗಿದ್ದಾರೆ. ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅನ್ಯಕೋಮಿನ ಜೋಡಿ ಮೇಲೆ ದಾಳಿ
ದಕ್ಷಿಣ ಕನ್ನಡ ಜಿಲ್ಲೆ ಹೇಳಿ ಕೇಳಿ ಕೋಮ ಸೂಕ್ಷ್ಮ ಪ್ರದೇಶ. ಯಾವುದೇ ಘಟನೆ ನಡೆದರೂ ಅದಕ್ಕೆ ಕೋಮು ಅನ್ನೋದು ತಳುಕು ಹಾಕಿಕೊಂಡಿರುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಲ್ಲೂ ಕೂಡ ಇದು ಒಂದು ಭಾಗವಾಗಿತ್ತು. ಸರ್ಕಾರ ಬಂದ ಕೂಡಲೇ ಗೃಹ ಸಚಿವ ಡಾ. ಜಿ ಪರಮೇಶ್ವರ್, ಮಂಗಳೂರಿಗೆ ಭೇಟಿ ಕೊಟ್ಟು ನೈತಿಕ ಪೊಲೀಸ್ ಗಿರಿಯನ್ನು ಹತ್ತಿಕ್ಕಲು ಪೊಲೀಸರಿಗೆ ಸೂಚಿಸಿದ್ದರು. ಆದರೆ ನೈತಿಕ ಪೊಲೀಸ್ ಗಿರಿ ಮತ್ತೆ ಮತ್ತೆ ಹೆಚ್ಚಾಗುತ್ತಲೇ ಇದೆ.
ಬಳಿಕ ಬಸ್ ಅನ್ನು ಪೊಲೀಸ್ ಠಾಣೆಯ ಬಳಿಗೆ ಬಂದು ನಿಲ್ಲಿಸಲಾಯಿತು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ. ಘಟನೆಯ ಸುದ್ದಿ ಹರಡುತ್ತಿದ್ದಂತೆ ಕೆಲವು ಯುವಕರು ಮಹಿಳಾ ಪೊಲೀಸ್ ಠಾಣೆಯ ಮುಂದೆ ಜಯಾಯಿಸಿ, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇತ್ತೀಚೆಗೆ ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆದಿತ್ತು. ಮಂಗಳೂರಿನ ಮೋರ್ಗನ್ಸ್ ಗೇಟ್ ಬಳಿ ಬಜರಂಗದಳ ಕಾರ್ಯಕರ್ತರು ಅನ್ಯಕೋಮಿನ ಜೋಡಿ ಮೇಲೆ ದಾಳಿ ಮಾಡಿದ್ದರು. ಮಂಗಳೂರಿನ ಮುಳುಹಿತ್ಲು ಬಳಿಯ ಸ್ಟೋರ್ ಒಂದರಲ್ಲಿ ಚಿಕ್ಕಮಗಳೂರು ಮೂಲದ ಸೌಜನ್ಯ ಮತ್ತು ಮಂಗಳೂರಿನ ಮಂಕಿ ಸ್ಟ್ಯಾಂಡ್ ನಿವಾಸಿ ನೂರುಲ್ಲಾ ಅಮೀನ್ ಕೆಲಸ ಮಾಡುತ್ತಿದ್ದರು. ಮಾರ್ಗನ್ಸ್ ಗೇಟ್ ಬಳಿ ಇಬ್ಬರು ಬೈಕ್ನಲ್ಲಿ ಹೋಗುತ್ತಿದ್ದಾಗ ಬಜರಂಗದಳದ ಕಾರ್ಯಕರ್ತರು ಅವರನ್ನು ಹಿಂಬಾಲಿಸಿದ್ದರು. ಅರ್ಧ ದಾರಿಯಲ್ಲಿ ಅವರನ್ನು ತಡೆದು, ಅವರ ಮೇಲೆ ದಾಳಿ ನಡೆಸಿದ್ದರು.
ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು ಯುವಕ ಮತ್ತು ಯುವತಿಯ ಐಡಿ ಕಾರ್ಡ್ ಪಡೆದುಕೊಂಡಿದ್ದರು. ಬಳಿಕ ಅವರಿಗೆ ಚೆನ್ನಾಗಿ ತರಾಟೆಗೆ ತೆಗೆದುಕೊಂಡು ಬೆದರಿಕೆ ಹಾಕಿದ್ದರು. ವಿಚಾರ ತಿಳಿಸಿದಂತೆ ಸ್ಥಳದಲ್ಲಿ ಸಾಕಷ್ಟು ಜನರು ಜಮಾಯಿಸಿದ್ದರು. ಎರಡು ಕೋಮುವಿನ ಜನರು ಸ್ಥಳಕ್ಕೆ ಜಮಯಿಸುವ ಹಂತಕ್ಕೆ ಘಟನೆ ತಲುಪಿತ್ತು. ತಕ್ಷಣ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಹೋಗಿ ಪರಿಸ್ಥಿತಿ ಹತೋಟಿಗೆ ತಂದಿದ್ದರು.