ಭಾನುವಾರ, ನವೆಂಬರ್ 24, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನಾಳೆ ಮಂಗಳೂರಿನಲ್ಲಿ ಮೋದಿ ರೋಡ್ ಶೋ ; ವಾಹನ ಸಂಚಾರದಲ್ಲಿ ಬದಲಾವಣೆ.!

Twitter
Facebook
LinkedIn
WhatsApp
ನಾಳೆ ಮಂಗಳೂರಿನಲ್ಲಿ ಮೋದಿ ರೋಡ್ ಶೋ ; ವಾಹನ ಸಂಚಾರದಲ್ಲಿ ಬದಲಾವಣೆ.!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಳೆ (ಏ.14)ಮಂಗಳೂರಿಗೆ  ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಈ ವೇಳೆ ಬೃಹತ್ ರೋಡ್‌ಶೋ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ನಡೆಸಲಿರುವ ಹಿನ್ನೆಲೆ ಮಂಗಳೂರು ನಗರಾದ್ಯಂತ ಹಲವು ಭಾಗಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ರೋಡ್ ಶೋ ನಡೆಯಲಿದ್ದು, ಮುಗಿಯುವವರೆಗೂ ವಾಹನ ಸಂಚಾರ ನಿಷೇಧಿಸಿ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ.

ಎಲ್ಲೆಲ್ಲಿ ವಾಹನ ಸಂಚಾರ ನಿಷೇಧ?

ರೋಡ್ ಶೋ ನಡೆಯುವ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತ – ಲಾಲ್‌ಬಾಗ್, ಬಲ್ಲಾಳ್‌ಬಾಗ್ – ಕೊಡಿಯಾಲ್ ಗುತ್ತು – ಬಿ.ಜಿ ಸ್ಕೂಲ್ ಜಂಕ್ಷನ್ – ಪಿ.ವಿ.ಎಸ್ – ನವಭಾರತ ವೃತ್ತ ಹಂಪನಕಟ್ಟೆವರೆಗೆ ವಾಹನಗಳ ಸಂಚಾರ ನಿಷೇಧವಿರುತ್ತದೆ. ಕಾರ್ ಸ್ಟ್ರೀಟ್ – ಕುದ್ರೋಳಿ – ಕೂಳೂರು ಫೆರ್ರಿ ರಸ್ತೆ ಕಡೆಯಿಂದ ಅಡ್ಡ ರಸ್ತೆ ಮೂಲಕ ಎಂ.ಜಿ ರಸ್ತೆ ಪ್ರವೇಶಿಸುವ ಎಲ್ಲಾ ವಾಹನಗಳಿಗೆ ಸಂಚಾರ ನಿಷೇಧಿಸಲಾಗಿದೆ.

ಕೆಎಸ್‌ಆರ್ಟಿಸಿ, ಶ್ರೀದೇವಿ ಕಾಲೇಜು ರಸ್ತೆ, ಕೊಡಿಯಾಲ್ ಗುತ್ತು ರಸ್ತೆ, ಜೈಲು ರಸ್ತೆ ಹಾಗೂ ಬಿಜೈ ಚರ್ಚ್ ರಸ್ತೆ ಮೂಲಕ ಎಂ.ಜಿ ರಸ್ತೆಗೆ ಬರುವ ಅಡ್ಡ ರಸ್ತೆ ಹಾಗೂ ಬಂಟ್ಸ್ ಹಾಸ್ಟೆಲ್ ಮೂಲಕ ಪಿ.ವಿ.ಎಸ್ ಕಡೆಗೆ ಸಾಗುವ ಮಾರ್ಗದಲ್ಲಿ ನಿಷೇಧ.

ಕೊಟ್ಟಾರ ಚೌಕಿ, ಉರ್ವಾ ಸ್ಟೋರ್, ಕೋಟೆಕಣಿ ಕ್ರಾಸ್‌ನಿಂದ (ಲೇಡಿಹಿಲ್) ನಾರಾಯಣಗುರು ವೃತ್ತದ ಕಡೆಗೆ ಹೋಗುವ ಮಾರ್ಗಗಳು ನಿಷೇಧ. ಜೊತೆಗೆ ಮಣ್ಣಗುಡ್ಡ ಜಂಕ್ಷನ್ ನಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರ ನಿಷೇಧಿಸಲಾಗಿದೆ.

ಉರ್ವಾ ಮಾರ್ಕೆಟ್ ಕಡೆಯಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ದ ಕಡೆಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧ.

ಕೆಎಸ್‌ಆರ್‌ಟಿಸಿಯಿಂದ ಲಾಲ್‌ಬಾಗ್ ಮುಖಾಂತರ ನಾರಾಯಣ ಗುರು ವೃತ್ತ (ಲೇಡಿಹಿಲ್)/ ಪಿವಿಎಸ್ ಕಡೆಗೆ ಮಾರ್ಗ, ಬಂಟ್ಸ್ ಹಾಸ್ಟೆಲ್, ಕರಂಗಲ್ಪಾಡಿ, ಕೋರ್ಟ್ ಕ್ರಾಸ್ ರಸ್ತೆಯಿಂದ ಪಿವಿಎಸ್, ಎಂ.ಜಿ. ರೋಡ್ ಗೆ ಬರುವ ಮಾರ್ಗ, ಕೆ.ಎಸ್.ರಾವ್ ರೋಡ್,  ಡೊಂಗರಕೇರಿ ರಸ್ತೆ,  ಗದ್ದೆಕೇರಿ ರೋಡ್, ವಿ.ಟಿ. ರೋಡ್, ಶಾರದಾ ವಿದ್ಯಾಲಯ ರಸ್ತೆ ಯಿಂದ ನವಭಾರತ್ ಸರ್ಕಲ್ ಕಡೆಗೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಪ್ರಧಾನಿ ಮೋದಿ ಸಂಚರಿಸುವ ಜಾಗಗಳಲ್ಲಿ ವಾಹನ ಸಂಚಾರ ನಿಷೇಧ ಜೊತೆಗೆ ಪಾರ್ಕಿಂಗ್ ಮಾಡುವುದನ್ನೂ ನಿಷೇಧಿಸಲಾಗಿದೆ. ಬಜಪೆ ವಿಮಾನ ನಿಲ್ದಾಣದಿಂದ ಕೆಂಜಾರು – ಮರವೂರು- ಕಾವೂರು- ಬೊಂದೇಲ್- ಮೇರಿಹಿಲ್ – ಕೆ.ಪಿ.ಟಿ – ಕೊಟ್ಟಾರ ಚೌಕಿ, ಉರ್ವ ಸ್ಟೋರ್ – ಶ್ರೀ ನಾರಾಯಣ ಗುರು ವೃತ್ತ (ಲೇಡಿಹಿಲ್) ವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ರೋಡ್ ಶೋ ನಡೆಯುವ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತದಿಂದ ಹಂಪನಕಟ್ಟೆವರೆಗೆ ವಾಹನ ಪಾರ್ಕಿಂಗ್ ನಿಷೇಧವಿರುತ್ತದೆ.

ವಾಹನ ಸಂಚರಿಸುವ ಮಾರ್ಗಗಳು:

ಉಡುಪಿ ಕಡೆಯಿಂದ ಮಂಗಳೂರಿಗೆ ಬರುವ ವಾಹನಗಳು ನಂತೂರು ಜಂಕ್ಷನ್, ಸೆಂಟ್ ಆಗ್ನೇಸ್, ಕಂಕನಾಡಿ ಮೂಲಕ ಸ್ಟೇಟ್‌ಬ್ಯಾಂಕ್ ನಿಂದ ಸಂಚರಿಸುವುದು.

ಸ್ಟೇಟ್‌ಬ್ಯಾಂಕ್ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಲೇಡಿ ಗೋಷನ್ – ಕ್ಲಾಕ್ ಟವರ್ – ರೈಲ್ವೇ ಸ್ಟೇಷನ್ ಜಂಕ್ಷನ್ – ನಂದಿಗುಡ್ಡ ರೋಡ್ – ಕೋಟಿಚೆನ್ನಯ್ಯ ಸರ್ಕಲ್ – ಕಂಕನಾಡಿ ಜಂಕ್ಷನ್ ಮೂಲಕ ಸಂಚರಿಸುವುದು.

ಪಂಪ್‌ವೆಲ್ ಕಡೆಯಿಂದ ಮಂಗಳೂರು ನಗರಕ್ಕೆ ಕಂಕನಾಡಿ ಜಂಕ್ಷನ್, ಮಿಲಾಗ್ರಿಸ್ ಜಂಕ್ಷನ್ ಮೂಲಕ ಸ್ಟೇಟ್‌ಬ್ಯಾಂಕ್ ಗೆ ಸಂಚಾರ.

ಕಾರ್‌ಸ್ಟ್ರೀಟ್ – ಕುದ್ರೋಳಿ ಕಡೆಯಿಂದ ಬರುವ ಎಲ್ಲಾ ವಾಹನಗಳನ್ನು ಮಣ್ಣಗುಡ್ಡೆ, ಉರ್ವಾ ಮಾರ್ಕೆಟ್ ಮುಖಾಂತರ ಅಶೋಕನಗರ ಕೋಡಿಕಲ್ ಕ್ರಾಸ್ ಮೂಲಕ ಸಂಚರಿಸುವುದು,

ಬಿಜೈ ಚರ್ಚ್ ಕಡೆಯಿಂದ ಬರುವ ವಾಹನಗಳು ಕೆಎಸ್‌ಆರ್‌ಟಿಸಿ ಜಂಕ್ಷನ್ ಮುಖಾಂತರ ಕೊಟ್ಟಾರ ಕ್ರಾಸ್/ ಕುಂಟಿಕಾನದ ಕಡೆಗೆ ಸಂಚರಿಸುವುದು,

ಕುಂಟಿಕಾನ ಕೊಟ್ಟಾರ ಕ್ರಾಸ್ ಕಡೆಯಿಂದ ಬರುವ ವಾಹನಗಳನ್ನು ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ ನ ಮುಖಾಂತರ ಬಿಜೈ ಚರ್ಚ್ ಕಡೆಗೆ ಸಂಚರಿಸುವುದು

ರೋಡ್ ಶೋಗೆ ಬರುವ ವಾಹನಗಳ ಪಾರ್ಕಿಂಗ್ ಸ್ಥಳಗಳು

ಕರಾವಳಿ ಮೈದಾನ    , ಲೇಡಿಹಿಲ್ ಶಾಲಾ ಮೈದಾನ, ಲೇಡಿಹಿಲ್ ಚರ್ಚ್ ಮೈದಾನ, ಉರ್ವ ಮಾರ್ಕೆಟ್ ಮೈದಾನ    , ಉರ್ವ ಸ್ಟೋರ್ ಮೈದಾನ, ಉರ್ವ ಕೆನರಾ ಶಾಲಾ ಮೈದಾನ, ಕೆನರಾ ಕಾಲೇಜು ಮೈದಾನ,    ಡೊಂಗರಕೇರಿ ಕೆನರಾ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಗಣಪತಿ ಶಾಲಾ ಮೈದಾನ    , ರಾಮಕೃಷ್ಣ ಶಾಲಾ ಮೈದಾನ, ಬಂಟ್ಸ್ ಹಾಸ್ಟೇಲ್    , ಸಿ.ವಿ ನಾಯಕ್ ಹಾಲ್ ಮೈದಾನ, ಟಿ.ಎಂ.ಎ ಪೈ ಹಾಲ್ ಮೈದಾನ,    ಬಿ.ಇ.ಎಂ ಶಾಲಾ ಮೈದಾನ, ನೆಹರೂ ಮೈದಾನ    , ಪುರಭವನ ಪಾರ್ಕಿಂಗ್ ಸ್ಥಳ, ಕದ್ರಿ ಮೈದಾನ, ಕೆಪಿಟಿ ಕಾಲೇಜು ಮೈದಾನ, ಕೆಟಿಪಿ ಬಳಿಯ ಆರ್.ಟಿ.ಓ ಮೈದಾನ, ಪದುವಾ ಕಾಲೇಜು ಮೈದಾನ.

ಗೋಲ್ಡ್ ಫಿಂಚ್ ಸಿಟಿ ಮೈದಾನ, ಕೂಳೂರು,    ಸುಲ್ತಾನ್ ಬತ್ತೇರಿ ಗ್ರೌಂಡ್ಸ್
ಗೋಕರ್ಣಥೇಶ್ವರ ಕಾಲೇಜು ಗ್ರೌಂಡ್, ಎಮ್ಮೆಕರೆ ಮೈದಾನ, ಮಂಗಳೂರು ವಿಶ್ವವಿದ್ಯಾನಿಲಯ ಮೈದಾನ, ಹಂಪನಕಟ್ಟೆ, ಮಿಲಾಗ್ರಿಸ್ ಚರ್ಚ್ ಪಾರ್ಕಿಂಗ್ ಗ್ರೌಂಡ್    , ಮಿಲಾಗ್ರಿಸ್ ಕಾಲೇಜು ಮೈದಾನ, ಬಲ್ಮಠ ಶಾಂತಿ ನಿಲಯ ಮೈದಾನ, ಸೆಂಟ್ ಸೆಬಾಸ್ಟಿನ್ ಹಾಲ್ ಪಾಕಿಂಗ್ (ಸೆಂಟ್ ಅಗ್ನೇಸ್ ಶಾಲೆ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ