ಬುಧವಾರ, ಮೇ 15, 2024
ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!-ಕೊನೆಗೂ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ; ಕೋರ್ಟ್ ಷರತ್ತುಗಳೇನು.?-ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್-ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Loksabha Elections 2024: ಕಾಂಗ್ರೆಸ್ ನಿಂದ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಕರ್ನಾಟಕದಿಂದ ಯಾರಿಗೆಲ್ಲಾ ಸ್ಥಾನ?

Twitter
Facebook
LinkedIn
WhatsApp
Loksabha Elections 2024: ಕರ್ನಾಟಕ ಸೇರಿದಂತೆ 39 ಅಭ್ಯರ್ಥಿಗಳ ಕಾಂಗ್ರೆಸ್ ನಿಂದ ಮೊದಲ ಪಟ್ಟಿ ಬಿಡುಗಡೆ..!

ಮುಂಬರುವ ಲೋಕಸಭಾ ಚುನಾವಣೆಗೆ (Loksabha Elections 2024)  ಕಾಂಗ್ರೆಸ್ (Congress) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸರಣಿ ಸಭೆಗಳ ನಂತರ ಅಂತಿಮವಾಗಿ ಇಂದು (ಮಾರ್ಚ್ 08) ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಕೆ.ಸಿ.ವೇಣುಗೇಪಾಲ್‌, ಅಜಯ್ ಮಕೇನ್‌, ಪವನ್ ಖೇರಾ ಅವರು ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು. ಕರ್ನಾಟಕದ 7, ತೆಲಂಗಾಣದ 4, ಛತ್ತೀಸ್​ಗಡದ 6, ಕೇರಳದ 15, ಮೇಘಾಲಯದ 2, ನಾಗಲ್ಯಾಂಡ್, ಸಕ್ಕಿಂ​ ಹಾಗೂ ತ್ರಿಪುರದ ತಲಾ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಘೋಷಿಸಿದೆ. ಈ ಮೂಲಕ ಒಟ್ಟು 39 ಅಭ್ಯರ್ಥಿಗಳ ಪಟ್ಟಿಯನ್ನು ಬಿಡಗಡೆ ಮಾಡಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಾರಿಯೂ ಕೇರಳದ ವಯನಾಡಿನಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನು ಶಶಿ ತರೂರ್​  ಅವರಿಗೆ ತಿರುವನಂತಪುರಂ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಇನ್ನು ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಕರ್ನಾಟಕದ 7 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನ ಘೋಷಿಸಿದೆ.  ವಿಜಯಪುರ, ಶಿವಮೊಗ್ಗ, ಹಾಸನ, ತುಮಕೂರು, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ, ಹಾವೇರಿ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ.

ಕರ್ನಾಟಕದ 7 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟ

  • ಶಿವಮೊಗ್ಗ- ಗೀತಾ ಶಿವರಾಜ್​ ಕುಮಾರ್
  • ತುಮಕೂರು- ಎಸ್​ಪಿ ಮುದ್ದಹನುಮೇಗೌಡ
  • ಮಂಡ್ಯ- ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
  • ಹಾಸನ- ಶ್ರೇಯಸ್ ಪಟೇಲ್
  • ಬೆಂಗಳೂರು ಗ್ರಾಮಾಂತರ- ಡಿಕೆ ಸುರೇಶ್
  • ವಿಜಯಪುರ- ಎಚ್​ಆರ್​ ಅಲ್ಗೂರ್​
  • ಹಾವೇರಿ: ಆನಂದ್ ಸ್ವಾಮಿ ಗಡ್ಡ ದೇವರಮಠ

ತೆಲಂಗಾಣದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ

ಈ ಪಟ್ಟಿಯಲ್ಲಿ ತೆಲಂಗಾಣದ ನಾಲ್ಕು ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಜಹೀರಾಬಾದ್ ಕ್ಷೇತ್ರ- ಸುರೇಶ್ ಕುಮಾರ್ ಶೆಟ್ಕರ್, ಚೇವೆಲ್ಲಾ ಕ್ಷೇತ್ರ ಸುನೀತಾ ಮಹೇಂದರ್ ರೆಡ್ಡಿ, ನಲ್ಗೊಂಡ ಕ್ಷೇತ್ರ- ಕುಂದೂರು ರಘುವೀರ್, ಮಹಬೂಬಾಬಾದ್ ಕ್ಷೇತ್ರ (ಎಸ್‌ಟಿ )- ಪೋರಿಕ ಬಲರಾಮ್ ನಾಯಕ್​ಗೆ ಟಿಕೆಟ್​ ನೀಡಲಾಗಿದೆ.

ಕೇರಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ

  • ವಯನಾಡ್ (ಕೇರಳ): ರಾಹುಲ್ ಗಾಂಧಿ
  • ಕಾಸರಗೋಡು (ಕೇರಳ): ರಾಜಮೋಹನ್ ಉಣ್ಣಿತ್ತಾನ್
  • ಕಣ್ಣೂರು (ಕೇರಳ): ಕೆ ಸುಧಾಕರನ್
  • ವಡಕರ (ಕೇರಳ): ಶಫಿ ಪರಂಬಿಲ್
  • ಕೋಝಿಕ್ಕೋಡ್ (ಕೇರಳ): ಎಂಕೆ ರಾಘವನ್
  • ಪಾಲಕ್ಕಾಡ್ (ಕೇರಳ): ವಿಕೆ ಶ್ರೀಕಂಠನ್
  • ಅಲತೂರ್(ಎಸ್‌ಸಿ) (ಕೇರಳ): ರೆಮ್ಯಾ ಹರಿದಾಸ್
  • ತ್ರಿಶೂರ್ (ಕೇರಳ): ಕೆ ಮರಳೀಧರನ್
  • ಚಾಲಕ್ಕುಡಿ (ಕೇರಳ): ಬೆನ್ನಿ ಬಹನ್ನಾನ್
  • ಎರ್ನಾಕುಲಂ(ಕೇರಳ): ಹಿಬಿ ಇಡೆನ್
  • ಇಡುಕ್ಕಿ(ಕೇರಳ): ಡೀನ್ ಕುರಿಯಾಕೋಸ್
  • ಮಾವೇಲಿಕರ(ಎಸ್‌ಸಿ)(ಕೇರಳ): ಕೋಡಿಕುನ್ನಿಲ್ ಸುರೇಶ್
  • ಪಟ್ಟಣಂತಿಟ್ಟ(ಕೇರಳ): ಆ್ಯಂಟೋ ಆ್ಯಂಟೋನಿ
  • ಅತ್ತಿಂಗಲ್(ಕೇರಳ): ಅಡೂರ್ ಪ್ರಕಾಶ್
Names of Congress candidates for 39 Lok Sabha seats for 2024
Names of Congress candidates for 39 Lok Sabha seats for 2024

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ