ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ (ರಿ.), ನೀರ್ಪಾಜೆ ಇದರ 37 ನೇ ವರ್ಷದ ಶ್ರೀ ವಿದ್ಯಾಗಣೇಶೋತ್ಸವ

ಕನ್ಯಾನ : ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ (ರಿ.), ನೀರ್ಪಾಜೆ ಇದರ 37 ನೇ ವರ್ಷದ ಶ್ರೀ ವಿದ್ಯಾಗಣೇಶೋತ್ಸವವು ದಿನಾಂಕ : 19.09.2023ನೇ ಮಂಗಳವಾರ ಕನ್ಯಾನ ಗ್ರಾಮದ ನೀರ್ಪಾಜೆ ಶಾಲೆಯಲ್ಲಿ ನಡೆಯಲಿದೆ.
ದಿನಾಂಕ: 19.09.2023ನೇ ಮಂಗಳವಾರ ಬೆಳಗ್ಗೆ ಗಂಟೆ 7-30ಕ್ಕೆ ಶ್ರೀ ವಿದ್ಯಾಗಣಪತಿ ದೇವರ ಪ್ರಾಣ ಪ್ರತಿಷ್ಠೆ, 10.00ಕ್ಕೆ 16 ಕಾಯಿಯ ಗಣಪತಿ ಹವನ ಪ್ರಾರಂಭ ಮತ್ತು ಆಟೋಟ ಸ್ಪರ್ಧೆ ಪ್ರಾರಂಭ, 10.30ಕ್ಕೆ ಭಜನಾ ಕಾರ್ಯಕ್ರಮ (ಶ್ರೀ ಮೂಕಾಂಜಕಾ ಭಜನಾ ಮಂಡಳಿ, ಬೆರಿಪದವು), ಮಂಗಳಾರತಿ, 12.00ಕ್ಕೆ : ಗಣಪತಿ ಹವನ, ಪೂರ್ಣಾಹುತಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ.
ಮಧ್ಯಾಹ್ನ ಗಂಟೆ 1.00ರಿಂದ ಕಬಡ್ಡಿ (ಜ್ಯೂನಿಯರ್ ವಿಭಾಗ 10ನೇ ತರಗತಿ ಒಳಗಿನ) ಮತ್ತು (ಸೀನಿಯರ್ ವಿಭಾಗ), ಸಂಜೆ ಗಂಟೆ 5.30ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಪ್ರಾರಂಭ (ನೀರ್ಪಾಜೆ ಶಾಲಾ ಮಕ್ಕಳು ಮತ್ತು ವಿ.ಜಿ.ಎನ್ ಫ್ರೆಂಡ್ಸ್ ನೀರ್ಪಾಜೆ) ಇವರಿಂದ, 6.00ರಿಂದ ಸಾರ್ವಜನಿಕ ಶ್ರೀ ಸತ್ಯಗಣಪತಿ ದೇವರ ಪೂಜೆ ಪ್ರಾರಂಭ, ರಾತ್ರಿ ಗಂಟೆ 7.00ಕ್ಕೆ ಸಭಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣೆ,

ರಾತ್ರಿ ಗಂಟೆ 9.00 ರಿಂದ : ಮಹಾಮಂಗಳಾರತಿ, ಪ್ರಸಾದ ವಿತರಣೆ ತದನಂತರ ಮರ್ತನಾಡಿ ಹೊಳೆಯ ವಿಪುಲ ಪುಣ್ಯ ಜಲದಲ್ಲಿ ಶ್ರೀ ವಿದ್ಯಾಗಣಪತಿ ದೇವರ ವಿಸರ್ಜನೆ.
ತಾವೆಲ್ಲರೂ ಇಷ್ಟಮಿತ್ರರೊಡಗೂಡಿ ಬಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರೊಂದಿಗೆ ಶ್ರೀ ವಿದ್ಯಾಗಣಪತಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಸರ್ವರಿಗೂ ಆದರದ ಸ್ವಾಗತ ಬಯಸುವ,
ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ (ರಿ.), ನೀರ್ಪಾಜೆ.