ಗುರುವಾರ, ಮಾರ್ಚ್ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಛಾಯಾಗ್ರಾಹಕ ಸುಷ್ಮಾ ಸ್ಟುಡಿಯೋ ವೀಡಿಯೋ ಮಾಲಕ “ಸುಬ್ಬು ಮೂಡುಬಿದಿರೆ’ ನಿಧನ

Twitter
Facebook
LinkedIn
WhatsApp
Subbu Moodbidri

ಮೂಡುಬಿದಿರೆ: ಸುಷ್ಮಾ ಸ್ಟುಡಿಯೋ ವೀಡಿಯೋ ಮಾಲಕ ಸುಬ್ರಹ್ಮಣ್ಯ ಯಾನೆ ಸುಬ್ಬು (55) (Subbu Moodbidri) ಜು. 26ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹನ್ನೊಂದರ ಬಾಲಕನಾಗಿರುವಾಗಲೇ “ಪದ್ಮಶ್ರೀ ಸ್ಟುಡಿಯೋ’ದಲ್ಲಿ ಅರವಿಂದ ಕುಮಾರ್‌ ಅವರ ಶಿಷ್ಯರಾಗಿ, ಬಳಿಕ “ನವ್ಯ ಸ್ಟುಡಿಯೋ’ದ ಪಾಲುದಾರರಾಗಿ, 16 ವರ್ಷಗಳಿಂದ ತಮ್ಮದೇ ಆದ “ಸುಷ್ಮಾ ಸ್ಟುಡಿಯೋ’ ನಡೆಸತೊಡಗಿದ್ದ ಅವರು “ಸುಬ್ಬು ಮೂಡುಬಿದಿರೆ’ (Subbu Moodbidri) ಎಂದೇ ಪರಿಚಿತರು.

ಪತ್ರಿಕೆಗಳಿಗೆ ಹವ್ಯಾಸಿ ಛಾಯಾಚಿತ್ರಗ್ರಾಹಕರಾಗಿ, ಸಚಿತ್ರ ಕಥೆಗಳಿಗೆ ಹೊಂದುವ ಮಾಡೆಲ್‌ ಚಿತ್ರಗಳನ್ನು ಒದಗಿಸುತ್ತಿದ್ದ ಸುಬ್ಬು, ಓರ್ವ ಹವ್ಯಾಸಿ ರಂಗ ಕಲಾವಿದರೂ ಆಗಿದ್ದರು. ಎರಡೂವರೆ ದಶಕಗಳ ಹಿಂದೆ ಮೂಡುಬಿದಿರೆಯಲ್ಲಿ ಮೊದಲ ಕೇಬಲ್‌ ಟೀವಿ ಸುದ್ದಿಜಾಲ ಆಡ್ಲಾ ನ್ಯೂಸ್‌ ಆರಂಭವಾದಾಗ ಛಾಯಾಚಿತ್ರಗ್ರಾಹಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಬನ್ನಂಜೆ ಉಪನ್ಯಾಸ ರೆಕಾರ್ಡಿಂಗ್‌
“ಈ ಟೀವಿ’ಯಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಸುಪ್ರಭಾತ ಕಾರ್ಯಕ್ರಮಕ್ಕಾಗಿ ನಿರಂತರ ಐದು ವರ್ಷಗಳ ಅವಧಿಗೆ ಬನ್ನಂಜೆಯವರ ನಿವಾಸದಲ್ಲಿ ತಾವೊಬ್ಬರೇ ಪ್ರವಚನಗಳ ರೆಕಾರ್ಡಿಂಗ್‌ ಅನ್ನು ನಡೆಸಿದ್ದರು.

ಅವರ ನಿಧನಕ್ಕೆ ದ.ಕ. ಜಿಲ್ಲಾ ಕಾರ್ಯನಿರತ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ರಾಜೇಶ್‌ ಶಾನುಭಾಗ್‌ ಮತ್ತಿತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಸರಗೋಡು: ಎಂಡಿಎಂಎ ಮಾದಕ ವಸ್ತು ಸಾಗಾಟದ ಸೂತ್ರಧಾರ ಅರೆಸ್ಟ್

ಕಾಸರಗೋಡು: ಬೆಂಗಳೂರು ಕೇಂದ್ರೀಕರಿಸಿ ಜಿಲ್ಲೆಗೆ ಎಂಡಿಎಂಎ ಮಾದಕ ವಸ್ತು ಸಾಗಾಟದ ಸೂತ್ರಧಾರ ನೋರ್ವನನ್ನು ಡಿವೈಎಸ್ಪಿ ಸಿ.ಕೆ ಸುನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಬಂಧಿತನನ್ನು ನೈಜೀರಿಯಾದ ಮೋಸೆಸ್ ಮೋ೦ಡೆ (33) ಎಂದು ಗುರುತಿಸಲಾಗಿದೆ.

ಆರೋಪಿಯನ್ನು ಗುರುವಾರ ಬೆಳಿಗ್ಗೆ ಬೆಂಗಳೂರಿನಿಂದ ಕಾಸರಗೋಡಿಗೆ ತಲುಪಿಸಲಾಗಿದೆ. ಈತನ ನೇತೃತ್ವದ ತಂಡವು ಕಾಸರಗೋಡು ಜಿಲ್ಲೆಗೆ ಹಲವಾರು ಬಾರಿ ಮಾದಕ ವಸ್ತು ತಲಪಿಸಿದ್ದು, ಮಾದಕ ವಸ್ತು ವ್ಯವಹಾರ ಬಗ್ಗೆ ಮಹತ್ವದ ಸುಳಿವು ಲಭಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೆನಾ ತಿಳಿಸಿದ್ದಾರೆ.

ಈ ಹಿಂದೆ ಕೊಕೇನ್ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೋಸೆಸ್ ಮೋ೦ಡೆ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆ ಗೊಂಡಿದ್ದ ಈತ ಎಂಡಿಎಂಎ ಮಾದಕ ವಸ್ತು ವಹಿವಾಟು ನಡೆಸುತ್ತಿದ್ದನು ಎಂದು ಎಸ್ಪಿ ತಿಳಿಸಿದ್ದಾರೆ.

ಕಳೆದ ಏಪ್ರಿಲ್ ನಲ್ಲಿ ಬೇಕಲ ಠಾಣಾ ವ್ಯಾಪ್ತಿಯಲ್ಲಿ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೈಜೀರಿಯಾದ ಹಫ್ಸತ್ ರಿಯಾನಾತ್ ಎಂಬ ಯುವತಿಯನ್ನು ಬಂಧಿಸಲಾಗಿತ್ತು. ಈಕೆಯಿಂದ ಮಾಹಿತಿ ಪಡೆದಿದ್ದ ಪೊಲೀಸರು ತನಿಖೆ ನಡೆಸಿ ಬೆಂಗಳೂರಿನಿಂದ ಸಾಗಾಟದ ರೂವಾರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು