Panchayath Election: ಪುತ್ತೂರಿನಲ್ಲಿ ಮೂರನೇ ಸ್ಥಾನಕ್ಕೆ ಜಾರಿದ ಬಿಜೆಪಿ; ನಿಡ್ನಳ್ಳಿ ಕಾಂಗ್ರೆಸ್ ಬೆಂಬಲಿತ ಜಯಭೇರಿ - ಆರ್ಯಪು ಪುತ್ತಿಲ್ಲ ಪರಿವಾರ ಬೆಂಬಲಿತ ಜಯಬೇರಿ
Panchayath Election ಪುತ್ತೂರು: ನಿಡ್ನಳ್ಳಿ 1ನೇ ವಾರ್ಡಿನ ಉಪಚುನಾವಣೆಯಲ್ಲಿ (Panchayath Election) ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎನ್ ಸತೀಶ್ ಶೆಟ್ಟಿ ಬಾಕಿಮಾರ್ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರ ಎರಡನೇ ಸ್ಥಾನ ಪಡೆದುಕೊಂಡಿದ್ದು, ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ನಿಡ್ನಳ್ಳಿಯ ವಾರ್ಡ್ 1ರಲ್ಲಿ ಒಟ್ಟು 607 ಮತದಾರರಿದ್ದು, ಒಟ್ಟು 529 ಮತ ಚಲಾವಣೆಯಾಗಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎನ್ ಸತೀಶ್ ಶೆಟ್ಟಿ ಬಾಕಿತ್ತಿಮಾರ್ ಜಯ ಗಳಿಸಿದ್ದರೆ, ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಜಗನ್ನಾಥ ರೈ ಕೊಳಂಬೆತ್ತಿಮಾರ್ ಎರಡನೇ ಸ್ಥಾನ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಎಂ. ಚಂದ್ರಶೇಖರ್ ಪ್ರಭು ಗೋಳಿತ್ತಡಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ನಿಡ್ನಳ್ಳಿ ಗ್ರಾಪಂನ ಚುನಾವಣಾಧಿಕಾರಿಯಾಗಿದ್ದ ತಾ.ಪಂ, ಯೋಜನಾಧಿಕಾರಿ ಸುಕನ್ಯಾ, ಸಹಾಯಕ ಚುನಾವಣಾಧಿಕಾರಿಯಾಗಿದ್ದ ಪಿಡಿಓ ಸಂಧ್ಯಾಲಕ್ಷ್ಮೀ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.
ಉಜಿರೆ: ಉಜಿರೆ ಗ್ರಾಮ ಪಂಚಾಯತಿನ ಒಂದು ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅನಿಲ್ ಡಿಸೋಜ 491ಮತ ಪಡೆದು ಭರ್ಜರಿ ಜಯ ಸಾಧಿಸಿದ್ದಾರೆ.
ಬಿಜೆಪಿ ಬೆಂಬಲಿತ ರಮೇಶ್ ಶೆಟ್ಟಿ 192 ಮತ ಪಡೆದು ಪರಾಭವಗೊಂಡಿದ್ದಾರೆ.ಜು.23ರಂದು ಬೆಳಿಗ್ಗೆ ಯಿಂದಲೆ ಮಳೆ ಇದ್ದರು ಮಳೆಗೆ ಲೆಕ್ಕಿಸದೆ ಮತದಾರರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದರು. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆದಿದ್ದು, ಒಟ್ಟು 1174ರಲ್ಲಿ 683 ಜನ ಮತ ಚಲಾಯಿಸಿದ್ದಾರೆ.337ಜನ ಗಂಡಸರು, 346ಜನ ಹೆಂಗಸರು ಮತದಾನದಲ್ಲಿ ಭಾಗವಹಿಸಿದ್ದರು. ಉಜಿರೆ ಗ್ರಾಮ ಪ೦ಚಾಯತ್ ವಾರ್ಡ್ 4ರ ‘ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾಗಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೈಸನ್ ವೇಗಸ್ ರವರು ವಿದೇಶಕ್ಕೆ ತೆರಳಿರುವ ಉದ್ದೇಶದಿಂದ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಮೇಶ್ ಶೆಟ್ಟಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅನಿಲ್ ಪ್ರಕಾಶ್ ಡಿ’ಸೋಜಾ ನಡುವೆ ನೇರ ಸ್ಪರ್ಧೆ ನಡೆದಿತ್ತು.
ಪುತ್ತೂರು ವಿಧಾನಸಭೆ ಚುನಾವಣೆಯಲ್ಲಿ ವಿರೋಚಿತ ಸೋಲು ಕಂಡು ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಪುತ್ತೀಲ ಪರಿವಾರ ಜಯದ ಖಾತೆ ತೆರೆದಿದೆ. ಆರ್ಯಪು ಗ್ರಾಮ ಪಂಚಾಯಿತಿನ ಎರಡನೇ ವಾರ್ಡಿಗೆ ನಡೆದ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಜಯಭೇರಿ ಬಾರಿಸುವ ಮೂಲಕ ರಾಜಕೀಯ ಆಟ ಶುರುವಾದಂತಾಗಿದೆ. ಪುತ್ತಿಲ ಪರಿವಾರದ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಲಾಯ 499 ಮತ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದೀಶ್ ಬಂಡಾರಿ 140 ಮತ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ ಪುರುಷೋತ್ತಮ ಪ್ರಭು 353 ಮತ ಪಡೆದುಕೊಂಡಿದ್ದಾರೆ. 1237 ಮತದಾರರನ್ನು ಹೊಂದಿರುವ ಆರ್ಯಪಿನ ವಾರ್ಡ್ ಎರಡರಲ್ಲಿ 999 ಮತ ಚಲಾವಣೆಯಾಗಿತ್ತು ಆರ್ಯಪು ಗ್ರಾಮ ಪಂಚಾಯತ್ ಚುನಾವಣೆ ಅಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಪಿ ಡಿ ಓ ನಾಗೇಶ್ ಎಂ ಅವರ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.