ಸುರತ್ಕಲ್ ನ ಚಿತ್ರಾಪುರ ಬೀಚ್ ಗೆ ತೆರಳಿದ್ದ ವಿಟ್ಲ ಮೂಲದ ಯುವತಿ ನೀರುಪಾಲು!
ಮಂಗಳೂರು, ಅಕ್ಟೋಬರ್ 20 : ರಜಾ ಹಿನ್ನೆಲೆ ಬೀಚ್ ಗೆ ತೆರಳಿದ್ದ ಅಪ್ರಾಪ್ತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿದ್ದು, ವಿಟ್ಲ ಮೂಲದ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಸುರತ್ಕಲ್ ಸಮೀಪದ ಚಿತ್ರಾಪುರ ಬೀಚ್ ನಲ್ಲಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿ ನಿಶಾ ಎಂದು ಗುರುತಿಸಲಾಗಿದ್ದು, ಈಕೆ ಮೂಲತಃ ನೇಪಾಲ ನಿವಾಸಿಯಾಗಿದ್ದು, ಪ್ರಸ್ತುತ ವಿಟ್ಲದಲ್ಲಿ ವಾಸವಾಗಿದ್ದಾಳೆ. ವಿಟ್ಲ ಮೂಲದ ದಿಗಂತ (15) ದಿವ್ಯರಾಜ್ (15) ತೇಜಸ್ (14) ಕೀರ್ತನ್ (16) ಅಶ್ಮಿತಾ (15) ನಿಶಾ (15) ಇವರೆಲ್ಲರೂ ಕುಳಾಯಿ ಚಿತ್ರಾಪುರ ಬೀಚ್ ಗೆ ನೀರಲ್ಲಿ ಆಟ ಆಡಲು ತೆರಳಿದಾಗ ನೀರಿನ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗಿದ್ದು, ಇವರನ್ನು ಹತ್ತಿರದ ಮೀನುಗಾರರು ಮತ್ತು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ನಾಲ್ಕು ಜನ ಆರೋಗ್ಯವಾಗಿದ್ದು, ತೇಜಸ್ ಎಂಬ ಬಾಲಕನನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ನಿಶಾ ಎಂಬ ಬಾಲಕಿಯು ಮೃತಪಟ್ಟಿರುತ್ತಾರೆ. ನಿಶಾ ಮತ್ತು ಅಶ್ವಿತಾ ನೇಪಾಳ ಮೂಲದವರು ಎಂದು ವರದಿಯಾಗಿದೆ.
ಬಂಟ್ವಾಳ: ಪ್ರೇಮ ವೈಫಲ್ಯದಿಂದ ಮನನೊಂದು ಯುವಕ ಆತ್ಮಹತ್ಯೆ
ಬಂಟ್ವಾಳ,ಅ 20 : ಪ್ರೇಮ ವೈಫಲ್ಯ ಕಂಡ ಕಾರಣಕ್ಕಾಗಿ ಮಾನಸಿಕವಾಗಿ ನೊಂದುಕೊಂಡ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಕಾಮಾಜೆ ಎಂಬಲ್ಲಿ ನಡೆದಿದೆ.
ಕಡೇಶಿವಾಲಯ ಗ್ರಾಮದ ನೆಲ್ಲಿ ಗುಡ್ಡೆ ನಿವಾಸಿ ಸಚಿನ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ.
ಕಡೇಶಿವಾಲಯ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ದಿ.ಸುಂದರ ಎಂಬವರ ಮಗ ಸಚಿನ್ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಸಚಿನ್ ಬಂಟ್ವಾಳದ ಲೆವಿನ್ ಇಲೆಕ್ಟ್ರಿಕಲ್ ಕಂಪೆನಿಯಲ್ಲಿ ಇಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಅ.18 ರಂದು ಕೆಲಸಕ್ಕೆ ಹೋದವನು ರಾತ್ರಿಯಾದರೂ ಮನೆಗೆ ಬರದ ಹಿನ್ನೆಲೆಯಲ್ಲಿ ಈತನನ್ನು ಹುಡುಕಲು ಶುರು ಮಾಡಿದ್ದರು.
ಪೋನ್ ಮಾಡಿದಾಗ ರಿಂಗ್ ಆಗುತ್ತಿತ್ತು ವಿನಹ ರಿಸೀವ್ ಮಾಡದ ಇರುವಾಗ ಬಂಟ್ವಾಳದ ಕಾಮಾಜೆ ಮಾವನ ಮನೆಯರವಲ್ಲಿ ವಿಚಾರಿಸಿದ್ದಾರೆ. ಅವರು ಹುಡುಕಿದಾಗ ಮುಂಜಾನೆ ಸುಮಾರು 3 ಗಂಟೆಯ ವೇಳೆ ಈತನ ಸ್ಕೂಟರ್ ಬಿ.ಮೂಡ ಗ್ರಾಮದ ಮಿತ್ತಕೋಡಿ ಎಂಬಲ್ಲಿರುವ ಮೈದಾನದ ಬಳಿ ನಿಲ್ಲಿಸಲಾಗಿತ್ತು.
ಆದರೆ ಸಚಿನ್ ಅಲ್ಲಿ ಕಾಣದ ಹಿನ್ನೆಲೆಯಲ್ಲಿ ಪೋನ್ ಮಾಡಿದಾಗ ಅಲ್ಲೇ ಸಮೀಪದ ಗುಡ್ಡವೊಂದರಲ್ಲಿ ಪೋನ್ ರಿಂಗು ಕೇಳುತ್ತಿತ್ತು ಎಂದು ಹೋಗಿ ನೋಡಿದಾಗ ಆತ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.
ಆತ್ಮಹತ್ಯೆ ಮಾಡುವ ಮೊದಲು ಈತ ಚೀಟಿಯನ್ನು ಬರೆದು ಕಿಸೆಯಲ್ಲಿಟ್ಟಿದ್ದು, ಇದೀಗ ಚೀಟಿ ಪೋಲೀಸರ ಕೈ ಸೇರಿದೆ. ಪ್ರೇಮ ವೈಫಲ್ಯ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಈತ ಚೀಟಿಯಲ್ಲಿ ಬರೆದಿದ್ದ ಎಂದು ಹೇಳಲಾಗಿದ್ದು,ಮರಣೋತ್ತರ ಪರೀಕ್ಷಾ ವರದಿಯ ಬಳಿಕ ಪೋಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಲಿದೆ.
ನಗರ ಠಾಣಾ ಇನ್ಸ್ ಪೆಕ್ಟರ್ ಆನಂತ ಪದ್ಮನಾಭ ಮತ್ತು ಎಸ್. ಐ.ರಾಮಕೃಷ್ಣ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದಾಖಲಿಸಿಕೊಂಡಿದ್ದಾರೆ.