ಮಂಗಳೂರು :ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಕಲ್ಲು ತೂರಾಟ ; ವ್ಯಕ್ತಿಗೆ ಥಳಿಸಿದ ಸಾರ್ವಜನಿಕರು..!

ಮಂಗಳೂರು : ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಕಲ್ಲು ತೂರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಹಿಡಿದು ಸಾರ್ವಜನಿಕರು ಥಳಿಸಿದ ಘಟನೆ ಮಂಗಳೂರು ನಗರದ ಬೊಂದೇಲ್ ಚರ್ಚ್ ಬಳಿ ಬುಧವಾರ ಸಂಜೆ ನಡೆದಿದೆ.
ಅನಾಮಧೇಯ ಈ ವ್ಯಕ್ತಿ 55 ವರ್ಷ ಪ್ರಾಯದ ಸುಭಾಷ್ ಎಂದು ಹೇಳಲಾಗಿದ್ದು ಆತ ಬಿಜಾಪುರ ಮೂಲದವ ಎಂದು ತಿಳಿದು ಬಂದಿದೆ.
ಪರಿಸರದಲ್ಲಿ ಈತನ ಅಸಭ್ಯ ವರ್ತನೆ. ಮತ್ತು ಕಲ್ಲು ತೂರಾಟದಿಂದ ಆಕ್ರೋಶಗೊಂಡ ಸಾರ್ವಜನಿಕರನ್ನು ಕಟ್ಟಿ ಹಾಕಿ ಥಳಿಸಿದ್ದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ,
ಸ್ಥಳಕ್ಕೆ ಬಂದ ಕಾವೂರು ಪೊಲೀಸರು ಆತನನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ 108 ವಾಹನ ಮೂಲಕ ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ, ಪೊಲೀಸ್ ಮಾಹಿತಿ ಪ್ರಕಾರ ಈತ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ತಿಳಿದು ಬಂದಿದೆ, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಪುತ್ತೂರು – ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರ…!!
ಪುತ್ತೂರು ನವೆಂಬರ್ 09: ಪುತ್ತೂರು ನಗರದ ಪರ್ಲಡ್ಕ ಕಲ್ಲಿಮಾರು ಎಂಬಲ್ಲಿ ಬೃಹತ್ ಗಾತ್ರದ ಮರ ರಸ್ತೆ ಅಡ್ಡಲಾಗಿ ಬಿದ್ದು, ರಸ್ತೆ ಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆದ ಘಟನೆ ನಡೆದಿದೆ.
ಕರಾವಳಿಯಲ್ಲಿ ಹಿಂಗಾರು ಮಳೆ ಅಬ್ಬರ ಮುಂದುವರೆದಿದ್ದು, ಹಲವೆಡೆ ಮಳೆ ಹಾನಿಯಾಗಿದೆ. ನಿರಂತರ ಹಿಂಗಾರು ಮಳೆಯಿಂದಾಗಿ ಪುತ್ತೂರಿನ ಪರ್ಲಡ್ಕ ಕಲ್ಲಿಮಾರು ಎಂಬಲ್ಲಿ ಬೃಹತ್ ಗಾತ್ರದ ಮರ ರಸ್ತೆ ಅಡ್ಡಲಾಗಿ ಬಿದ್ದು, ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದೆ. ಸದ್ಯ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ನಿರತರಾಗಿದ್ದು, ಕಳೆದ 1 ಗಂಟೆಯಿಂದ ಕಾರ್ಯಾಚರಣೆ ನಡೆಯುತ್ತಿದೆ, ಬೃಹತ್ ಮರ ಹಿನ್ನಲೆ ಕಾರ್ಯಾಚರಣೆ ವಿಳಂಬವಾಗುತ್ತಿದೆ.