ಮಂಗಳೂರು: ಮಟ್ಕ ಚೀಟಿ ದಂದೆ - ಮೂವರ ಬಂಧನ
Twitter
Facebook
LinkedIn
WhatsApp
ಮಂಗಳೂರು, ಜು 18: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಉರ್ವಾ ಜಂಕ್ಷನ್ ಹತ್ತಿರದ ಮೈದಾನದಲ್ಲಿ ಮಟ್ಕ ಚೀಟಿ ದಂದೆ ನಡೆಸುತ್ತಿದ್ದ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ದೀಪಕ್ ಶೆಟ್ಟಿ ಕೋಡಿಕಲ್, ಅನಿಲ್ ಶೆಟ್ಟಿ ಕೋಡಿಕಲ್, ಗಿರೀಶ್ ರೈ ವಾಮಂಜೂರು ಎಂದು ಗುರುತಿಸಲಾಗಿದೆ.
ಮಟ್ಕ ಚೀಟಿ ದಂದೆ ನಡೆಸುತ್ತಿದ್ದ ಮೂರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.