ಮಲಗಿದ್ದಲ್ಲೆ ಕೊನೆಯುಸಿರೆಳೆದ 22ರ ಯುವಕ.

ಬೈಂದೂರು: ಊಟ ಮಾಡಿ ಮನೆಯಲ್ಲಿ ಮಲಗಿದ್ದಾಗ ದೇಹದಲ್ಲಿ ಆಯಾಸಗೊಂಡು ಯುವಕನೊಬ್ಬ ಹಠಾತ್ ಮೃತಪಟ್ಟ ಘಟನೆ ಬೈಂದೂರು ಸಮೀಪದ ಮದ್ದೋಡಿ ರಸ್ತೆಯ ದರ್ಖಾಸ್ ಕಾಲನಿಯಲ್ಲಿ ನಡೆದಿದೆ.
ಬೈಂದೂರು ಮದ್ದೋಡಿ ರಸ್ತೆಯ ದರ್ಖಾಸ್ ಕಾಲನಿ ನಿವಾಸಿಯಾಗಿರುವ ಸಂದೇಶ್ (22) ಮೃತಪಟ್ಟ ಯುವಕ.
ಈತ ಕೂಲಿ ಕೆಲಸ ಮಾಡಿಕೊಂಡಿದ್ದು ಆರೋಗ್ಯವಂತನಾಗಿದ್ದ.ರಾತ್ರಿ ಊಟ ಮಾಡಿ ಮಲಗಿದ್ದಾಗ ಮೈಯೆಲ್ಲಾ ಬೆವತು ಮನೆಯವರನ್ನು ಕೂಗಿ ಕರೆದಿದ್ದ. ಮನೆಯವರು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಪುಂಜಾಲಕಟ್ಟೆಯಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಯುವತಿಯೋರ್ವಳು ಊಟ ಮಾಡಿ ಮಲಗಿದಲ್ಲಿಯೇ ಅಸ್ವಸ್ಥಗೊಂಡು ಸಾವಿಗೀಡಾಗಿದ್ದರು. ಹೃದಯಾಘಾತದಿಂದ ಸಾವು ಸಮಭವಿಸಿತ್ತೆಂದು ಅನಂತರ ಪರೀಕ್ಷಿಸಿದ ವೈದ್ಯರು ತಿಳಿಸಿದ್ದರು.
ಬಂಟ್ವಾಳ: ರಿಕ್ಷಾ-ಕಾರಿನ ನಡುವೆ ಅಪಘಾತ: ನಾಲ್ವರಿಗೆ ಗಾಯ
ಬಂಟ್ವಾಳ, ಸೆ 04 : ರಿಕ್ಷಾ ಮತ್ತು ಕಾರಿನ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಬಾಲಕಿ ಸಹಿತ ನಾಲ್ವರು ಗಾಯಗೊಂಡ ಘಟನೆ ವಗ್ಗ ಎಂಬಲ್ಲಿ ನಡೆದಿದೆ.
ಎಂಟು ವರ್ಷದ ಬಾಲಕಿ ಶ್ರೀನಿತ , ಪದ್ಮಲತಾ, ಅಪ್ಪಿಪೂಜಾರಿ ಮತ್ತು ಚಾಲಕ ಸಂಜೀವ ಪೂಜಾರಿ ಗಾಯಗೊಂಡವರು. ಕಾರು ಚಾಲಕ ಮಹಮ್ಮದ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ವಗ್ಗ ಸಮೀಪದ ಕಾಡಬೆಟ್ಟು ಕ್ರಾಸ್ ಎಂಬಲ್ಲಿ ಈ ಘಟನೆ ನಡೆದಿದೆ. ಕಾಡಬೆಟ್ಟು ಕ್ರಾಸ್ ನಿಂದ ಹೆದ್ದಾರಿಗೆ ರಿಕ್ಷಾ ಪ್ರವೇಶ ಮಾಡುವ ಸಂದರ್ಭದಲ್ಲಿ ಡಿಕ್ಕಿಹೊಡೆದಿದೆ. ಮಂಗಳೂರಿನಿಂದ ಬೆಳ್ತಂಗಡಿ ಮಾರ್ಗವಾಗಿ ಬೆಂಗಳೂರುಕಡೆಗೆ ಹೋಗುತ್ತಿದ್ದ ಕಾರಿಗೆ ಕಾಡಬೆಟ್ಟು ಕ್ರಾಸ್ ನಲ್ಲಿ ಏಕಾಏಕಿ ರಿಕ್ಷಾ ಹೆದ್ದಾರಿಗೆ ನುಗ್ಗಿಸಿದ ಪರಿಣಾಮ ವಾಗಿ ಅಪಘಾತ ನಡೆದಿದೆ ಎಂದು ಹೇಳಲಾಗಿದ್ದು,ಕಾರು ಚಾಲಕ ಮಹಮ್ಮದ್ ರಿಕ್ಷಾ ಚಾಲಕನ ಮೇಲೆ ದೂರು ನೀಡಿದ್ದಾರೆ.
ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.