ಹೆಬ್ರಿ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ಹೆಬ್ರಿ: ತಾಲ್ಲೂಕಿನ ಶಿವಪುರದ ಮೇಲ್ ಮುಕ್ಕಾಣಿಯಲ್ಲಿ ಮರದ ಕೊಂಬೆಗೆ ನೇಣು ಬಿಗಿದುಕೊಂಡು ರಂಗನಾಥ ಶೆಟ್ಟಿ (33) ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತರಾಗಿದ್ದ ರಂಗನಾಥ ಶೆಟ್ಟಿ ಹಿರಿಯಡ್ಕ ಸೌಹಾರ್ದ ಸಹಕಾರ ಸಂಘದ ಉದ್ಯೋಗಿಯಾಗಿದ್ದರು. ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೊಂಡೆರಂಗಡಿ: ಬಾವಿಗೆ ಹಾರಿ ಆತ್ಮಹತ್ಯೆ
ಹೆಬ್ರಿ: ಕೊರಗಪ್ಪ ಪೂಜಾರಿ (49) ಎಂಬವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಕ್ಕುಜೆ ಗ್ರಾಮದ ದೊಂಡೇರಂಗಡಿಯಲ್ಲಿ ಗುರುವಾರ ಸಂಭವಿಸಿದೆ.
ಸಂಸಾರದೊಂದಿಗೆ ಮುಂಬಯಿಯಲ್ಲಿ ವಾಸವಿದ್ದ ಕೊರಗಪ್ಪ ಪೂಜಾರಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದಾರೆ ಎನ್ನಲಾಗಿದ್ದು ಎರಡು ದಿನಗಳ ಹಿಂದೆ ಪತ್ನಿಯ ತಂಗಿಯ ಗಂಡನ ಮನೆ ದೊಂಡೇರಂಗಡಿಗೆ ಬಂದಿದ್ದರು. ಮನೆ ಬಳಿಯ ತೋಟದ ಬಾವಿಗೆ ಹಾರಿ ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಕವಿತ ನೀಡಿದ ದೂರು ಅಜೆಕಾರು ಠಾಣೆಯಲ್ಲಿ ದಾಖಲಾಗಿದೆ.
ಭಾರೀ ಮಳೆಗೆ ಕುಸಿದ ಹಾಸನ-ಮೈಸೂರು ರಸ್ತೆಯ ಫ್ಲೈಓವರ್ ಸ್ಲ್ಯಾಬ್; ಹೆಚ್ಚಿದ ಆತಂಕ
ಹಾಸನ: ಭಾರೀ ಮಳೆಗೆ ಫ್ಲೈಓವರ್ ಸ್ಲ್ಯಾಬ್‌ಗಳು (Flyover Slab) ಹಾಗೂ ಮಣ್ಣು ಕುಸಿದಿರುವ ಘಟನೆ ಹಾಸನ (Hassan) ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ-373 (National Highway) ಹಾಸನದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಬೇಲೂರು-ಬಿಳಿಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಹಂಗರಹಳ್ಳಿ ಬಳಿ ನಿರ್ಮಿಸಲಾಗಿತ್ತು. ಫ್ಲೈಓವರ್ ನಿರ್ಮಾಣ ಹಂತದಲ್ಲಿರುವಾಗಲೇ ಎರಡು ಬಾರಿ ಕುಸಿದಿದ್ದರೂ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿರಲಿಲ್ಲ.
ಇದೀಗ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 3ನೇ ಬಾರಿಗೆ ಫ್ಲೈಓವರ್ ಸ್ಲ್ಯಾಬ್‌ಗಳು ಹಾಗೂ ತಳಪಾಯದ ಮಣ್ಣು ಕುಸಿದಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಸಂಪೂರ್ಣ ಫ್ಲೈಓವರ್ ಕುಸಿಯುವ ಆತಂಕ ಎದುರಾಗಿದೆ. ಕಳಪೆ ಕಾಮಗಾರಿಯೇ ಫ್ಲೈಓವರ್ ಕುಸಿಯಲು ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆ ಹೆಚ್ಚಾದರೆ ವಾಹನಗಳ ಸಂಚಾರ ಬಂದ್ ಆಗುವ ಸಾಧ್ಯತೆ ಎದುರಾಗಿದೆ.