ಗುರುವಾರ, ಮಾರ್ಚ್ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Gejjegiri: ದ.ಕನ್ನಡ ಜಿಲ್ಲೆಗೆ ಸಚಿವರಾಗಿ ಆಗಮಿಸಿದ ದಿನವೇ ಗೆಜ್ಜೆಗಿರಿಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ

Twitter
Facebook
LinkedIn
WhatsApp
Gejjegiri: ದ.ಕನ್ನಡ ಜಿಲ್ಲೆಗೆ ಸಚಿವರಾಗಿ ಆಗಮಿಸಿದ ದಿನವೇ ಗೆಜ್ಜೆಗಿರಿಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ

Gejjegiri ಪುತ್ತೂರು: ಸಚಿವನಾಗಿ ತುಳುನಾಡಿನ ಈ ಮಣ್ಣಿಗೆ ಆಗಮಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ (Primary and Secondary Education) ಸಚಿವ ಮಧು ಬಂಗಾರಪ್ಪ (Madhu Bangarappa) ನೇರವಾಗಿ ಗೆಜ್ಜೆ ಗಿರಿಗೆ (Gejjegiri) ಆಗಮಿಸಿದ್ದಾರೆ.

ವಿಮಾನ ನಿಲ್ಧಾನದಲ್ಲಿ ನನಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ (Gejjegiri) ಶಿಲಾನ್ಯಾಸ ಸಂಧರ್ಭದಲ್ಲಿ ನಾನು ಶಿಲಾನ್ಯಾಸ ಕ್ಕೆ ಹಾಲು ಹಾಕಿದ ಬಗ್ಗೆ ನೆನಪಾಯಿತು, ಈ ದಿನವೇ ನಾನು ಗೆಜ್ಜೆಗಿರಿಗೆ ಹೋಗಬೇಕು ಎಂಬ ಪ್ರೇರಣೆ ಆಕಾಂಕ್ಷೆ ನನ್ನ ಮನದಾಳದಲ್ಲಿ ಮೂಡಿತು, ಕೂಡಲೇ ನನ್ನವರಲ್ಲಿ ಈ ವಿಷಯ ಪ್ರಸ್ತಾಪಿಸಿದೆ ಮತ್ತು ಗೆಜ್ಜೆಗಿರಿಗೆ ಹೋಗಲು ತೀರ್ಮಾನಿಸಿದೆ. ನನ್ನ ತಂದೆ ಬಂಗಾರಪ್ಪ (Bangarappa) ರವರನ್ನು ಪ್ರೀತಿಸುವ ಅದೆಷ್ಟೋ ಹೃದಯಗಳು ಇಲ್ಲಿ ಇವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ ಸಚಿವ ಮಧು ಬಂಗಾರಪ್ಪ (Madhu Bangarappa).

ಕ್ಷೇತ್ರಾಡಳಿತ ಸಮಿತಿ ಶ್ರೀ ನಾರಾಯಣ ಗುರು (Sree Narayana Guru) ನಿಗಮಸ್ಥಾಪನೆ ಮತ್ತು ಅದಕ್ಕೆ ಹಣ ಮೀಸಲು ಇಡುವ ಬಗ್ಗೆ ಹಾಗೂ ಕ್ಷೇತ್ರಾಭಿವೃದ್ಧಿಯ ಮನವಿಗೆ ಪೂರಕವಾಗಿ ಸ್ಪಂದಿಸಿದರು. ಗೆಜ್ಜೆಗಿರಿಯಲ್ಲಿ ವಿಶೇಷ ಪ್ರಾರ್ಥನೆ ಯನ್ನು ಸಲ್ಲಿಸಿದರು. ಗೆಜ್ಜೆಗಿರಿಯಲ್ಲಿ (Gejjegiri) ವಿಶೇಷ ಪ್ರಾರ್ಥನೆ ಯನ್ನು ಸಲ್ಲಿಸಿದರು. ಈ ಕ್ಷೇತ್ರ ಒಂದು ವಿಶೇಷ ಕ್ಷೇತ್ರವಾಗಿದ್ದು, ಇದರ ಅಭಿವೃದ್ಧಿಗೆ ನಾನು ಸಹಕಾರ ಒದಗಿಸುವುದಾಗಿ ಈ ಸಂದರ್ಭದಲ್ಲಿ ಅವರು ನುಡಿದಿದ್ದಾರೆ. ಸತ್ಯ ಧರ್ಮ, ನ್ಯಾಯಕ್ಕೆ ಹೆಸರುವಾಸಿಯಾದ ಕೋಟಿ ಚೆನ್ನಯ್ಯರ (Koti and Chennayya) ಆದರ್ಶ ಪರಂಪರೆ ಬಿಂಬಿಸುವ ಸುಮಾರು 550 ವರ್ಷಗಳ (years) ಇತಿಹಾಸ (History) ವನ್ನು ತಿಳಿಸುವ ಈ ಕ್ಷೇತ್ರ ನಾನು ಭಕ್ತಿಯಿಂದ ನೆನೆಯುವ ಕ್ಷೇತ್ರ ಇದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಶಿಲಾನ್ಯಾಸ (Foundation stone) ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸಿ ಶಿಲಾನ್ಯಾಸವನ್ನು ನೆರವೇರಿಸಿದ ನೆನಪುಗಳನ್ನು ಅವರು ಈ ಸಂದರ್ಭದಲ್ಲಿ ಹಂಚಿಕೊಂಡರು.

ಈ ಸಂದರ್ಭದಲ್ಲಿ ಪುತ್ತೂರು (Puttur) ಶಾಸಕರಾದ ಅಶೋಕ್ ಕುಮಾರ್ ರೈ (Ashok Kumar Rai), ಕೆಪಿಸಿಸಿ ಸಂಯೋಜಕ ಹೇಮನಾಥ್ ಶೆಟ್ಟಿ ಕಾವು (Hemanath Shetty), ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಪಿ೦ತಾಬರ ಹೆರಾಜೆ, ಗೌರವಾಧ್ಯಕ್ಷರಾದ ಜಯಂತ ನಡು ಬೈಲು, ಉಪಾಧ್ಯಕ್ಷ ರವಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಹಿರಿಯರಾದ ಶ್ರೀಧರ ಪೂಜಾರಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕ್ಷೇತ್ರದ ಟ್ರಸ್ಟಿ ಗಳಾದ ಡಾ. ರಾಜಾರಾಮ್, ಕಾನೂನು ಸಲಹೆಗಾರದ ನವನೀತ್.ಡಿ. ಹಿ೦ಗಾಣಿ,
ಕ್ಷೇತ್ರದ ವಕ್ತಾರ ರಾದ ರಾಜೇಂದ್ರ ಚಿಲಿಂಬಿ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕೆಡಿಂಜ, ಕ್ಷೇತ್ರದ ಮ್ಯಾನೇಜರ್ ದೀಪಕ್ ಕೋಟ್ಯಾನ್, ನಾರಾಯಣ ಪೂಜಾರಿ ಉಪಸ್ಥಿತರಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು