ಚಾರ್ಮಾಡಿ ಬಳಿ ಗಾಂಜಾ ಮಾರಾಟ ಯತ್ನ - ಓರ್ವನ ಬಂಧನ
ಬೆಳ್ತಂಗಡಿ, ಆ 14: ಇಲ್ಲಿಗೆ ಸಮೀಪದ ಚಾರ್ಮಾಡಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೂಲತಃ ಕಕ್ಕಿಂಜೆ ನಿವಾಸಿಯಾಗಿರುವ, ಪ್ರಸ್ತುತ ಬಂಟ್ವಾಳ ತಾಲೂಕು ಸಜಿಪನಡು ಗ್ರಾಮದ ಲಕ್ಶ್ಮಣಕಟ್ಟೆ ಬಳಿಯ ನೌಫಲ್ ಎಂದು ಗುರುತಿಸಲಾಗಿದೆ. ಆರೋಪಿ ಪೊಲೀಸರನ್ನು ಕಂಡು ಸಂಶಯಾಸ್ಪದವಾಗಿ ವರ್ತಿಸಿದ್ದು ಈ ಸಂದೇಗೊಂಡು ವಿಚಾರಿಸಲು ಆತನ ಬಳಿ ಬಂದಾಗ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ.
ಆತನ ಬಳಿ ಪ್ಲಾಸ್ಟಿಕ್ ಕೈಚೀಲದಲ್ಲಿ 150 ಗ್ರಾಂ ನಷ್ಟು ಗಾಂಜಾದ ಮೊಗ್ಗು, ಎಲೆ ಮತ್ತು ಬೀಜ ಇರುವುದನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ವಸ್ತುಗಳ ಒಟ್ಟು ಮೌಲ್ಯ ಅಂದಾಜು 4 ಸಾವಿರ ರೂ.ಆಗಿದ್ದು, ಈ ಬಗ್ಗೆ ಎನ್‌ಡಿಪಿಎಸ್ ಕಾಯ್ದೆಯಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಬಂಟ್ವಾಳ, ಆ 14: ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪುದು ಗ್ರಾಮದ ಕುಮ್ಡೆಲು ನಿವಾಸಿ ಕೃಷ್ಣ(೪೧) ಬಂಧಿತ ಆರೋಪಿ. ಕಳ್ಳತನ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ ಈತ ಅ ಬಳಿಕ ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಈತನನ್ನು ಪೊಲೀಸ್ ನಿರೀಕ್ಷಕ ಎಚ್. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣಾಧಿಕಾರಿ ಹರೀಶ್ ಹಾಗೂ ಸಿಬ್ಬಂದಿಗಳಾದ ಗಣೇಶ್ ಪ್ರಸಾದ್, ರಾಧಾಕೃಷ್ಣನ್, ಯೋಗೇಶ್ ಡಿ.ಎಲ್, ಹಾಗೂ ವಿಜಯ್ ರವರು ಮಾಹಿತಿ ಸಂಗ್ರಹಿಸಿ ಬಡಗ ಮಿಜಾರು ಎಂಬಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದರು