ಬೆಳ್ತಂಗಡಿ :ರಾತ್ರಿಯಿಡೀ ದೇವರ ಮನೆ ಗುಡ್ಡದಲ್ಲಿ ಹುಡುಕಾಡಿದ ಸ್ನೇಹಿತರು ಮತ್ತು ಪೊಲೀಸರು; ನಾಪತ್ತೆಯಾಗಿದ್ದ ಯುವಕ ಊರಲ್ಲಿ ಪತ್ತೆ...!
ಬೆಳ್ತಂಗಡಿ ಅಕ್ಟೋಬರ್ 11: ಸ್ನೇಹಿತರೊಂದಿಗೆ ಮೂಡಿಗೆರೆ ದೇವರ ಮನೆ ಪ್ರವಾಸಕ್ಕೆ ತೆರಳಿ ನಾಪತ್ತೆಯಾಗಿದ್ದ ಬೆಳ್ತಂಗಡಿಯ ಯುವಕ ಪತ್ತೆಯಾಗಿದ್ದು, ಇದೀಗ ಮನೆ ಸೇರಿದ್ದಾನೆ.
ಬೆಳ್ತಂಗಡಿ ತಾಲೂಕಿನ ಕೊಯ್ಯುರಿನ ನಿವಾಸಿ ದೀಕ್ಷಿತ್ (27) ನಾಪತ್ತೆಯಾದ ಯುವಕ, ಇತ ತನ್ನ ಸ್ನೇಹಿತರೊಂದಿಗೆ ದೇವರ ಮನೆ ಪ್ರವಾಸಕ್ಕೆ ತೆರಳಿದ್ದರು. ಬಳಿಕ ಹಿಂದಿರುಗಿ ಬರುವಾಗ ರಸ್ತೆ ಮದ್ಯೆ ಸ್ನೇಹಿತರಲ್ಲಿ ಗಲಾಟೆ ನಡೆದಿದೆ. ಈ ವೇಳೆ ಗುಡ್ಡ ತೋಟ ಬಳಿ ಕಾರು ನಿಲ್ಲಿಸಿ ಯುವಕರು ಜಗಳವಾಡಿಕೊಂಡಿದ್ದು, ದೀಕ್ಷಿತ್ ಮುನಿಸಿಕೊಂಡು ಕಾರು ಹತ್ತದೆ ಕಣ್ಣರೆಯಾಗಿದ್ದು, ಮಂಗಳವಾರ ಸಂಜೆ ನಾಪತ್ತೆಯಾಗಿದ್ದು ಸ್ಥಳೀಯರು ಹಾಗೂ ಬಣಕಲ್ ಪೊಲೀಸರು ಹಾಗೂ ಅರಣ್ಯ ಇಲಾಖೆ ಹುಡುಕಾಟ ನಡೆಸಿದರು ಪತ್ತೆಯಾಗಿಲ್ಲ.
ಇದೀಗ ಯುವಕ ಬೇರೆ ವಾಹನದ ಮೂಲಕ ಊರಿಗೆ ಮರಳಿ ಪತ್ತೆಯಾಗಿರುವ ಬಗ್ಗೆ ಬಣಕಲ್ ಪೊಲೀಸರಿಗೆ ಮನೆ ಮಂದಿ ಮಾಹಿತಿ ನೀಡಿದ್ದಾರೆ.
ಕಳೆಂಜ -ಶಾಸಕ ಪ್ರತಾಪ್ ಸಿಂಹ ನಾಯಕ್ ಮೇಲೆ ಕೈ ಮಾಡಿದ ಅರಣ್ಯ ಇಲಾಖೆ ಅಧಿಕಾರಿ
ಪುತ್ತೂರು ಅಕ್ಟೋಬರ್ 09: ಕಳೆಂಜ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ನಿರ್ಮಿಸುತ್ತಿರುವ ಮನೆ ಅರಣ್ಯ ಜಾಗದಲ್ಲಿದೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮನೆ ತೆರವುಗೊಳಿಸಲು ಆಗಮಿಸಿದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಬಿಜೆಪಿ ಶಾಸಕರ ನಡುವೆ ದೊಡ್ಡ ವಾಗ್ವಾದವೇ ನಡೆದಿದ್ದು, ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಎಂಎಲ್ ಸಿ ಪ್ರತಾಪ್ ಸಿಂಹ ನಾಯಕ್ ಮೇಲೆ ಕೈ ಮಾಡಲು ಹೋದ ಘಟನೆ ನಡೆದಿದೆ.
ಕಳೆಂಜ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ನಿರ್ಮಿಸುತ್ತಿರುವ ಮನೆ ಅರಣ್ಯ ಜಾಗದಲ್ಲಿದೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಂದು ಬೆಳಗ್ಗೆ ಅದನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ವಿಷಯ ತಿಳಿದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಜನಪ್ರತಿನಿಧಿಗಳ ಮಾತನ್ನು ಕೇಳದ ಅರಣ್ಯ ಇಲಾಖೆಯ ಅಧಿಕಾರಿಗಳು ತಾತ್ಕಾಲಿಕವಾಗಿ ನಿರ್ಮಿಸಿದ್ದ ಶೆಡ್ ನ್ನು ತೆರವುಗೊಳಿಸಲು ಮುಂದಾಗಿದ್ದಾರೆ.
ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಶಾಸಕರ ನಡುವೆ ವಾಗ್ವಾದ ನಡೆದಿದ್ದು, ಪರಸ್ಪರ ಕೈ ಕೈ ಮಿಲಾಯಿಸಲು ಹಂತಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಈ ಈ ನಡುವೆ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮೇಲೆ ಕೈ ಮಾಡಲು ಹೋದ ಘಟನೆ ನಡೆದಿದ್ದು. ಈ ವೇಳೆ ಪ್ರತಾಪ್ ಸಿಂಹ ನಾಯಕ್ ಬೆಂಬಲಕ್ಕೆ ಬಂಟ್ವಾಳ, ಸುಳ್ಯ,ಬೆಳ್ತಂಗಡಿ ಶಾಸಕರು ಬಂದು ಪರಿಸ್ಥಿತಿ ತಿಳಿಗೊಳಿಸಿದರು. ಆದರೂ ಅರಣ್ಯ ಇಲಾಖೆಯ ಅಧಿಕಾರಿ ಪ್ರತಾಪ್ ಸಿಂಹ ನಾಯಕ್ ಅವರನ್ನೇ ಅರೆಸ್ಟ್ ಮಾಡಿ ಎಂದು ಪೊಲೀಸರಿಗೆ ಹೇಳಿದ್ದು. ಪರಿಸ್ಥಿತಿ ಬಿಗಡಾಯಿಸಿದಾಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ವಿವಾದಿತ ಜಾಗಕ್ಕೆ ಡಿಸಿಎಫ್ ಅಂಟೋನಿ ಮರಿಯಪ್ಪ ಭೇಟಿ ನೀಡಿ ಶಾಸಕರೊಂದಿಗೆ ಮಾತುಕತೆ ನಡೆಸಿದರು. ಕೊನೆಗೆ ವಿವಾದಿತ ಜಾಗದ ಜಂಟಿ ಸರ್ವೆ ನಡೆಸಲು ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಅರಣ್ಯ,ಕಂದಾಯ ಇಲಾಖೆಯ ಜಂಟಿ ಸರ್ವೆ ನಡೆಸಿದ ಬಳಿಕ ವಿವಾದಿತ ಜಾಗ ಅರಣ್ಯ ಇಲಾಖೆಗೆ ಸೇರಿದಲ್ಲಿ ಮನೆ ತೆರವಿನ ಭರವಸೆ ಜನಪ್ರತಿನಿಧಿಗಳು ನೀಡಿದರು. ಒಂದು ವೇಳೆ ಸರ್ವೆ ಬಳಿಕ ಜಾಗ ಕಳೆದುಕೊಳ್ಳುವ ಕುಟುಂಬಕ್ಕೆ ಸರಕಾರಿ ಜಾಗ ನೀಡುವ ಭರವಸೆ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೀಡಿದರು.