ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Mulki : ಮೂಲ್ಕಿ ಮೂಲದ ಅಮೆರಿಕನ್‌ ಮೆಥೋಡಿಸ್ಟ್‌ ಬಿಷಪ್‌ ಸುದರ್ಶನ್‌ ನಿಧನ

Twitter
Facebook
LinkedIn
WhatsApp
Mulki : ಮೂಲ್ಕಿ ಮೂಲದ ಅಮೆರಿಕನ್‌ ಮೆಥೋಡಿಸ್ಟ್‌ ಬಿಷಪ್‌ ಸುದರ್ಶನ್‌ ನಿಧನ

ಮೂಲ್ಕಿ: (Mulki)ಮೊದಲ ಭಾರತೀಯ ಅಮೆರಿಕನ್‌ ಮೆಥೋಡಿಸ್ಟ್‌ ಬಿಷಪ್‌(Methodist Bishop), ಮೂಲತಃ ಮೂಲ್ಕಿಯವರಾದ (Sudarshan Devdhar)ಸುದರ್ಶನ್‌ ದೇವಧರ್‌ (72) ಅವರು ಜು. 19ರಂದು ಅಮೆರಿಕದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. 2004ರಲ್ಲಿ ಈಶಾನ್ಯ ಪ್ರಾಂತೀಯ ಪರಿಷತ್ತಿನ ಬಿಷಪ್‌ ಹುದ್ದೆಗೆ ಆಯ್ಕೆಯಾಗಿ ಅಮೆರಿಕದ ಯುನೈಟೆಡ್‌ ಮೆಥೋಡಿಸ್ಟ್‌ ಚರ್ಚ್‌ನ ಬಿಷಪ್‌ ಆಗಿದ್ದ ಮೊಟ್ಟಮೊದಲ ಭಾರತೀಯ ಅಮೆರಿಕನ್‌ ಆಗಿದ್ದು, 2023ರ ಜ. 1ರಂದು ನಿವೃತ್ತರಾಗಿದ್ದರು.

ಬಿಷಪ್‌ ದೇವಧರ್‌ ಅವರು ಬೋಸ್ಟನ್‌ ಪ್ರದೇಶದ ರೆಸಿಡೆಂಟ್‌ ಬಿಷಪ್‌ ಆಗಿದ್ದರು. 1982ರಲ್ಲಿ ಸಭಾಪಾಲಕರಾಗಿ ಸೇವೆ ಆರಂಭಿಸಿ 8 ವರ್ಷಗಳ ಕಾಲ ಓಂಟಾರಿಯೊ ಜಿಲ್ಲೆ ಮತ್ತು ನ್ಯೂಯಾರ್ಕ್‌ನ ಉತ್ತರಕೇಂದ್ರ ಜಿಲ್ಲೆಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದರು.

ಬಿಷಪರಾಗಿ ಅವರು ನ್ಯೂಜೆರ್ಸಿ ಎಪಿಸ್ಕೋಪಲ್‌ ಪ್ರದೇಶದ ಜವಾಬ್ದಾರಿಯನ್ನು 8 ವರ್ಷಗಳ ಕಾಲ ಯಶಸ್ವಿಯಾಗಿ ನಿರ್ವಹಿಸಿದ ಅನಂತರ 2012ರಲ್ಲಿ ಬೋಸ್ಟನ್‌ ಪ್ರಾಂತದ ಜವಾಬ್ದಾರಿಯನ್ನು ಹೊಂದಿದರು. 1951ರ ಎ. 1ರಂದು ಜನಿಸಿದ್ದ ಅವರು ಡೀಕನ್‌ರಾಗಿ ದಕ್ಷಿಣಭಾರತ ಐಕ್ಯಸಭೆಯ ದೀಕ್ಷೆ ಪಡೆದು ಮೊತ್ತಮೊದಲು ಕೊಡಗಿನ ಮಡಿಕೇರಿಯಲ್ಲಿ ಸೇವೆಸಲ್ಲಿಸಿದರು.

ಸಭಾಪಾಲಕರ ಕುಟುಂಬದಲ್ಲಿ ಜನಿಸಿದ ಅವರು ಮೂಲ್ಕಿಯ ವಿಜಯ ಕಾಲೇಜಿನಿಂದ ಮೈಸೂರು ವಿಶ್ವವಿದ್ಯಾನಿಲಯದಡಿಯಲ್ಲಿ ಬಿ.ಕಾಂ. ಪದವಿ ಗಳಿಸಿ ಅನಂತರ ಬೆಂಗಳೂರಿನ ಯುನೈಟೆಡ್‌ ಥಿಯೋಲಾಜಿಕಲ್‌ ಕಾಲೇಜಿನಿಂದ ಬ್ಯಾಚುಲರ್‌ ಆಫ್‌ ಡಿವಿನಿಟಿ ಪದವಿಯನ್ನು ಪಡೆದರು. ಎಂ.ಟೆಕ್‌ ಪದವಿಯನ್ನು ಪರ್ಕಿನ್ಸ್‌ ಸ್ಕೂಲ್‌ ಆಫ್‌ ಥಿಯಾಲಜಿಯಿಂದ ದಕ್ಷಿಣ ಮೆಥೋಡಿಸ್ಟ್‌ ವಿಶ್ವವಿದ್ಯಾಲಯದಡಿಯಲ್ಲಿ, ಎಂ.ಫಿಲ್‌. ಮತ್ತು ಪಿಎಚ್‌.ಡಿ.ಯನ್ನು ಡ್ರೂ ಯುನಿವರ್ಸಿಟಿ ನ್ಯೂ ಜೆರ್ಸಿಯಿಂದ ಪಡೆದಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು