ಬಂಟ್ವಾಳ :19 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಯ ಬಂಧನ
Twitter
Facebook
LinkedIn
WhatsApp
ನೆಲ್ಯಾಡಿ : ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ಬಂಟ್ವಾಳ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ 52/2004 U/s 454,457,380, 454 IPC ( ಮಾನ್ಯ ACJ & JMFC Bantwal ಇಲ್ಲಿಯ LPC No:2/2015)ರ ಆರೋಪಿ ಸುಮಾರು ೧೯ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆ ಹಳೆಪೇಟೆ ಟಿ.ಬಿ.ಕ್ರಾಸ್ ನಿವಾಸಿ ಮಣಿ @ಮಣಿಕಂಠ (೪೧) ಎಂಬಾತನನ್ನು ಬಂಟ್ವಾಳ ಠಾಣಾ ವಾರೆಂಟ್ ಸಿಬ್ಬಂದಿಯಾದ ಹೆಚ್‌ಸಿ ಗಣೇಶ್, ಕ್ರೈಂ ಸಿಬ್ಬಂದಿಗಳಾದ ಹೆಚ್‌ಸಿ ರಾಜೇಶ್, ಪ್ರವೀಣ್‌ರವರು ಮಾಹಿತಿ ಸಂಗ್ರಹಿಸಿ ನೆಲ್ಯಾಡಿ ಸಮೀಪ ಬೆಳ್ತಂಗಡಿ ತಾಲೂಕಿನ ಶಿಬಾಜಿ ಎಂಬಲ್ಲಿ ಮಾ.೧ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.