ಪುಂಜಾಲಕಟ್ಟೆ: 2 ಸಾವಿರ ಮಕ್ಕಳಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೋಗುವ ಕೆಸರುಮಯ ರಸ್ತೆಗೆ ತಾತ್ಕಾಲಿಕ ದುರಸ್ತಿ
ಪುಂಜಾಲಕಟ್ಟೆ: ಶ್ರೀ ಮಂಜಪ್ಪ ಮೂಲ್ಯ ಮತ್ತು ಶ್ರೀ ದಿವಾಕರ್ ಶೆಟ್ಟಿ ಇವರ ಮುಂದಾಳತ್ವದಲ್ಲಿ ಕೆಸರುಮಯವಾಗಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಸಂಪರ್ಕ ರಸ್ತೆಗೆ ಜಲ್ಲಿ ಹುಡಿಯನ್ನು ಹಾಕಿ ದುರಸ್ತಿ ಮಾಡಲಾಯಿತು. ಟಿ ಎಸ್ ಎನ್ ಕ್ರಷರ್ ನ ಮಾಲಕರ ಜಲ್ಲಿ ಹುಡಿಯನ್ನು ಉಚಿತವಾಗಿ ನೀಡಿ ಸಹಕರಿಸಿದರು, ರಾಜಲಕ್ಷ್ಮಿ ಮೋಟರ್ಸ್ ಮಾಲಕರು ಟಿಪ್ಪರನ್ನು ಉಚಿತವಾಗಿ ನೀಡಿದರು. ಶ್ರೀ ಮನೋಹರ್ ಮತ್ತು ದಿನೇಶ್ ರವರಿಗೂ, ಮಿತ ದರದಲ್ಲಿ ಜೆಸಿಬಿ ಕೆಲಸವನ್ನು ನಿರ್ವಹಿಸಿದ ಸುಧಾಕರ್ ಶೆಟ್ಟಿ ಪುರಿಯ, ಈ ಕಾರ್ಯದಲ್ಲಿ ವಿಶೇಷವಾಗಿ ಶ್ರಮಿಸಿದ ಶ್ರೀ ಮಂಜಪ್ಪ ಮೂಲ್ಯ ಮತ್ತು ಶ್ರೀ ದಿವಾಕರ್ ಶೆಟ್ಟಿ ಇವರಿಗ ವಿದ್ಯಾರ್ಥಿಗಳು ಹಾಗೂ ಪೋಷಕರು ಅಭಿನಂದನೆಯನ್ನು ಸಲ್ಲಿಸಿದರು.
ಸುಮಾರು 90 ವರ್ಷಗಳ ಹಳೆಯ ಸರಕಾರಿ ಶಿಕ್ಷಣ ಸಂಸ್ಥೆ ಪ್ರಸ್ತುತ ಎರಡು ಸಾವಿರಕ್ಕಿಂತ ಅಧಿಕ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಆದರೆ ಶಾಲೆಗೆ ಹೋಗುವ ರಸ್ತೆಯು ಸರಿಯಾದ ಚರಂಡಿಯ ವ್ಯವಸ್ಥೆ ಇಲ್ಲದೆ ಕೆಸರುಮಯವಾಗಿದ್ದು ವಿದ್ಯಾರ್ಥಿಗಳು ಹೋಗಲು ಪರದಾಡುತ್ತಿದ್ದರು. ಇದನ್ನು ಅರಿತ ಶಾಲೆಯ ಹಿತೈಷಿಗಳು ಈ ಈ ರಸ್ತೆಯನ್ನು ದುರಸ್ತಿ ಮಾಡಿ ಶಾಲ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟರು.
ಬೆಳ್ತಂಗಡಿ ಕ್ಷೇತ್ರದ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾ ರವರು ಈ ರಸ್ತೆಗೆ ಸೂಕ್ತವಾದ ಡಾಮರಿಕರಣ ಅಥವಾ ಕಾಂಕ್ರೀಟೀಕರಣದ ವ್ಯವಸ್ಥೆಯನ್ನು ಮಾಡಿ ಕೊಡುತ್ತೇನೆ ಎಂಬ ಭರವಸೆಯನ್ನು ನೀಡಿದ್ದಾರೆ. ಈ ಶಾಲೆಯು ಪ್ರಸ್ತುತ ಅತ್ಯಾಧಿಕ ವಿದ್ಯಾರ್ಥಿಗಳು ಇರುವ ಕೆಲವೇ ಕೆಲವು ಸರಕಾರಿ ಶಾಲೆಗಳ ಪೈಕಿ ಒಂದಾಗಿದೆ. ಇತ್ತೀಚಿಗೆ ಇಲ್ಲಿ ಸುಮಾರು 14 ಲಕ್ಷ ರೂ ವೆಚ್ಚದಲ್ಲಿ ಪೋಷಕರ ಹಾಗೂ ದಾನಿಗಳ ನೆರವಿನಿಂದ ನಿರ್ಮಿಸಲ್ಪಟ್ಟ ಅತ್ಯಾಧುನಿಕ ಶೌಚಾದ್ಘಾಟನೆ ಗೊಂಡಿತ್ತು ಇದು ಎಲ್ಲರ ಶ್ಲಾಘನೆಗೆ ಒಳಪಟ್ಟಿತ್ತು.