ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾಂ. ಪಂ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಆಚಾರ್ಯ ವೇಣೂರಿನಲ್ಲಿ ಪತ್ತೆ!
ಬಂಟ್ವಾಳ: ಅಮ್ಟಾಡಿ ಗ್ರಾಮ ಪಂಚಾಯತ್ ಗ್ರೇಡ್ 1 ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ನಿನ್ನೆಯಿಂದ ನಾಪತ್ತೆಯಾಗಿದ್ದಾರೆಂದು ಅವರ ಪತ್ನಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಇದೀಗ ಅವರು ಇಂದು ಸಂಜೆ ವೇಣೂರು ಎಂಬಲ್ಲಿ ಸಿಕ್ಕಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಹಾಗೂ ಕುಟುಂಬದವರು ಅವರನ್ನು ಮನೆದು ಕರೆದುಕೊಂಡು ಹೋಗಿದ್ದಾರೆ.
ಘಟನೆಯ ವಿವರ:
ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಆಚಾರ್ಯ (75) ಎಂಬವರು ನಾಪತ್ತೆಯಾಗಿದ್ದು ಅವರ ಮೊಬೈಲ್ ವಾಲ್ಪಾಡಿಯ ಕೊಯ ಕ್ಕುಡೆ ಚಡಾವ್ ಎಂಬಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿತ್ತು.
ಪಂಚಾಯತ್ ಕಾರ್ಯದರ್ಶಿಯಾಗಿರುವ ಲಕ್ಷ್ಮೀನಾರಾಯಣ ಅವರ ನಾಪತ್ತೆ ಬಗ್ಗೆ ಅವರ ಪತ್ನಿ ವಂದನಾ ಪುಂಜಾಲಕಟ್ಟೆ ಪೋಲೀಸ್ ಠಾಣೆ ಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಅದರಂತೆ ಅವರ ಮೊಬೈಲ್ ಲೊಕೇಶನ್ ಹಾಕಿದಾಗ ವಾಲ್ಪಾಡಿ ಕೊಯಕುಡೆ ಚಡಾವ್ ತೋರಿಸುತ್ತಿದ್ದುದರಿಂದ ಪುಂಜಾಲ್ಕಟ್ಟೆ ಪೊಲೀಸರು ಮತ್ತು ಸಂಬಂಧಿಕರು ಹುಡುಕಾಡಿಕೊಂಡು ಬಂದಿದ್ದರು. ಅದರೆ ಅವರ ಮೊಬೈಲ್ ಮಾತ್ರ ರಸ್ತೆ ಬದಿ ಪತ್ತೆಯಾಗಿದ್ದು ಬೈಕ್ ನಲ್ಲಿ ಬಂದಿದ್ದ ಲಕ್ಷ್ಮೀನಾರಾಯಣ ಪತ್ತೆಯಾಗಿರಲಿಲ್ಲ.
ಕೆ.ಎ.-21 , EC 5599 ನಂಬರ್ ನ ಹೀರೊ ನೀಲಿ ಬಣ್ಣದ ಬೈಕ್ ನಲ್ಲಿ ಅವರು ಬಂದಿದ್ದರೆನ್ನಲಾಗಿದೆ .ಮೊಬೈಲ್ ನ್ನು ವಾಲ್ಪಾಡಿಯಲ್ಲಿ ಎಸೆದು ಬೈಕ್ ನಲ್ಲಿ ಹೋಗಿರಬಹುದೆಂದು ಹೇಳಲಾಗುತ್ತಿತ್ತು.