ತುಂಬೆಯ ರಾಮಲ್ ಕಟ್ಟೆ ಹೆದ್ದಾರಿಯಲ್ಲಿ ಅಪಘಾತ! ಗಾಯಾಳು ಸಾವು
ಬಂಟ್ವಾಳ: ತುಂಬೆ ಸಮೀಪ ರಾಮಲ್ ಕಟ್ಟೆ ಎಂಬಲ್ಲಿ ಹೆದ್ದಾರಿಯಲ್ಲಿ ಕಾರು ಮತ್ತು ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸವಾರ ತಿಮ್ಮಪ್ಪ ಎಂಬವರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
ಸೋಮವಾರ ಸಂಜೆ 6:15 ಗಂಟೆಗೆ ಬಂಟ್ವಾಳ ತಾಲೂಕು ತುಂಬೆ ಗ್ರಾಮದ ರಾಮಲಕಟ್ಟೆ ಎಂಬಲ್ಲಿ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ ಸಿ ರೋಡು ಕಡೆಯಿಂದ ಮಂಗಳೂರು ಕಡೆಗೆ ಕಾರನ್ನು ಅದರ ಚಾಲಕ ಓವರ್ ಟೇಕ್ ಮಾಡಲು ಚಲಾಯಿಸಿಕೊಂಡು ಹೋಗಿ ಅದೇ ಮಾರ್ಗವಾಗಿ ಮಂಗಳೂರು ಕಡೆಗೆ ತಿಮ್ಮಪ್ಪ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರ್ ಬಲ ಬದಿಯ ಹ್ಯಾಂಡಲ್ ಗೆ ಕಾರಿನ ಎಡ ಬದಿ ತಾಗಿ ಅಪಘಾತವಾಗಿದೆ. ಪರಿಣಾಮ ಸ್ಕೂಟರ್ ಸವಾರ ತಿಮ್ಮುಪ್ಪ ರವರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಗಾಯ ನೋವುಗಳಾದವರನ್ನು ಸಾರ್ವಜನಿಕರು ಉಪಚರಿಸಿ ವಾಹನವೊಂದರಲ್ಲಿ ಮಂಗಳೂರು ಜಿಲ್ಲಾ ವಸ್ತಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದು ಗಾಯಾಳು ತಿಮ್ಮಪ್ಪ ರವರು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ಪರೀಕ್ಷಿಸಿ ಮತಪಟ್ಟಿರುದಾಗಿ ತಿಳಿಸಿರುತ್ತಾರೆ. ಬಂಳ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ 55/2025 ಕಲಂ : 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ