ಉಪ್ಪಿನಂಗಡಿ: ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ, ನೆಲ್ಯಾಡಿಯ ಯುವಕ ಮೃತ್ಯು
ಉಪ್ಪಿನಂಗಡಿ;ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರವಯುವಕ ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.ಮಂಗಳೂರು- ಬೆಂಗಳೂರು ರಸ್ತೆಯ ಉಪ್ಪಿನಂಗಡಿಯ ಸಣ್ಣಂಪಾಡಿ ಎಂಬಲ್ಲಿ ಘಟನೆ ನಡೆದಿದೆ.
ನೆಲ್ಯಾಡಿ ಮೊರೆಂಕಳನಿವಾಸಿ ಇಕ್ಬಾಲ್(25) ಮೃತ ದುರ್ದೈವಿ.ಇಕ್ಬಾಲ್ ಕೆಲಸದ ನಿಮಿತ್ತ ಉಪ್ಪಿನಂಗಡಿಗೆ ಬಂದಿದ್ದು, ಬಳಿಕ ಕೆಲಸ ಮುಗಿಸಿ ವಾಪಾಸ್ಸು ತೆರಳುವಾಗ ಬೈಕ್ ಸಣ್ಣಂಪಾಡಿ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಅಪಘಾತ ನಡೆದಿದೆ.ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಹಾಸನದಲ್ಲಿ 2 ಮನೆ ಕುಸಿತ, ವೃದ್ಧೆ ಸಾವು: ಅಂಗಡಿಗೆ ಹೋಗಿದ್ದಕ್ಕೆ ಬದುಕುಳಿದ ತಾಯಿ-ಮಗು :
ಹಾಸನ, (ಜುಲೈ 25): ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ (rain) ನಿರ್ಮಾಣ ಹಂತದ ಮನೆಯ ಗೋಡೆ ಕುಸಿದು ಬಿದ್ದು ಓರ್ವ ವೃದ್ದೆ ಮೃತಪಟ್ಟಿರುವ ಘಟನೆ ಹಾಸನ(Hassan) ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ನಡೆದಿದೆ. ಕುಸಿದ ಗೋಡೆಯಡಿ ಸಿಲುಕಿ ಗೌರಮ್ಮ(62) ಎನ್ನುವವರು ಮೃತಪಟ್ಟಿದ್ದಾರೆ. ಇನ್ನು ವೃದ್ಧೆಯ ಪತಿ ನಟರಾಜ್ ಗೆ ಗಂಭೀರ ಗಾಯಗಳಾಗಿದ್ದು,,ಅವರನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿಲಾಗಿದೆ. ನಿನ್ನೆ(ಜುಲೈ 25) ರಾತ್ರಿ ಮನೆಯೊಳಗೆ ಅಡುಗೆ ಮಾಡುತ್ತಿದ್ದಾಗ ಏಕಾಏಕಿ ಗೋಡೆ ಕುಸಿದುಬಿದ್ದಿದೆ. ಪರಿಣಾಮ ಗೌರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಅಂಗಡಿಗೆ ಹೋಗಿ ಬರುವಷ್ಟರಲ್ಲೇ ಕುಸಿದುಬಿದ್ದ ಮನೆ
ಇನ್ನೊಂದೆಡೆ ಇದೇ ಹಾಸನದಲ್ಲಿ ಮತ್ತೊಂದು ಮನೆ ಕುಸಿದು ಬಿದ್ದಿದೆ. ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಚಂಪಕನಗರದಲ್ಲಿ ಸಚಿನ್ ಎಂಬುವವರಿಗೆ ಸೇರಿದ ಮನೆ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ತಾಯಿ, ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಾತಿ ಹಾಗೂ ಮಗು ಅಂಗಡಿಗೆ ಹೋಗಿ ವಾಪಾಸ್ ಬರುವಷ್ಟರಲ್ಲಿ ಮನೆ ಕುಸಿದುಬಿದ್ದಿದೆ. ಇದರಿಂದ ತಾಯಿ, ಮಗು ಬದುಕುಳಿದಿದ್ದಾರೆ.
ಸಚಿನ್ ಕೆಲಸಕ್ಕೆ ಹೋಗಿದ್ದರೆ, ಪತ್ನಿ ಸ್ವಾತಿ ಮಗುವಿನೊಂದಿಗೆ ಅಂಗಡಿಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ಇನ್ನು ಸ್ಥಳಕ್ಕೆ ಆರ್‌ಐ ಮತ್ತು ವಿಎ ಭೇಟಿ ನೀಡಿ ಪರಿಶೀಲಿಸಿದ್ದು ಪರಿಹಾರ ನೀಡುವ ಭರವಸೆ ನೀಡಿದ್ದಾರೆ.