ಸೋಮವಾರ, ಮೇ 20, 2024
ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!-ಸಿಎಂ ಸಿದ್ದರಾಮಯ್ಯಗೆ ಸೋಮಾರಿ ಸಿದ್ದು ಎಂದು ನಟ ಚೇತನ್ ಅಹಿಂಸಾ ವ್ಯಂಗ್ಯ..!-Gold Rate: ಇಂದಿನ ಚಿನ್ನಾಭರಣದ ಬೆಲೆ ಹೇಗಿದೆ; ಖರೀದಿಗೆ ಸೂಕ್ತವೇ.?-ಆರ್ಸಿಬಿ ಗೆ ಕಪ್ ಗೆಲ್ಲಲು ಮುಂದಿನ ಪಂದ್ಯ ಯಾವಾಗ; ಎದುರಾಳಿ ತಂಡ ಯಾವುದು.?-ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವರು ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ; ಇರಾನ್ ಮಾದ್ಯಮ ವರದಿ-ಬಿಜೆಪಿ ಅಭ್ಯರ್ಥಿಗೆ ಒಬ್ಬನಿಂದಲೇ 8 ಬಾರಿ ಮತ; ವೈರಲ್ ವಿಡಿಯೋ ಇಲ್ಲಿದೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್ ಗಳನ್ನು ಲೈಕ್‌ ಮಾಡುವುದು ಅಪರಾಧವಲ್ಲ ; ಕೋರ್ಟ್ ಆದೇಶ

Twitter
Facebook
LinkedIn
WhatsApp
ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್ ಗಳನ್ನು ಲೈಕ್‌ ಮಾಡುವುದು ಅಪರಾಧವಲ್ಲ ; ಕೋರ್ಟ್ ಆದೇಶ

ಪ್ರಯಾಗರಾಜ್:‌ ಸಾಮಾಜಿಕ ಜಾಲತಾಣಗಳಲ್ಲಿ (Social Media) ಪೋಲಿ ಹಾಗೂ ಅಶ್ಲೀಲ ಫೋಟೊಗಳು ಮತ್ತು ವಿಡಿಯೊಗಳನ್ನು (Obscene Post) ಅಪ್‌ಲೋಡ್‌ ಮಾಡುವುದನ್ನು ನಿಷೇಧಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿರುತ್ತವೆ. ಕೆಲವೊಮ್ಮೆ ಅತಿರೇಕದ ವಿಡಿಯೊಗಳನ್ನು ಅಪ್‌ಲೋಡ್‌ ಮಾಡುವ ಕಾರಣ ಇಂತಹ ಆಗ್ರಹಗಳು ಜೋರಾಗುತ್ತವೆ. ಇದರ ಬೆನ್ನಲ್ಲೇ, “ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೊಗಳನ್ನು ಲೈಕ್‌ ಮಾಡುವುದು ತಪ್ಪಲ್ಲ” ಎಂದು ಅಲಹಾಬಾದ್‌ ಹೈಕೋರ್ಟ್‌ (Allahabad High Court) ಮಹತ್ವದ ಆದೇಶ ಹೊರಡಿಸಿದೆ.

 

ಆಗ್ರಾದ ಮೊಹಮ್ಮದ್‌ ಇಮ್ರಾನ್‌ ಕಾಜ್ಮಿ ಎಂಬ ವ್ಯಕ್ತಿಯು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಲೈಕ್‌ ಮಾಡಿದ್ದಕ್ಕಾಗಿ, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಇದನ್ನು ಪ್ರಶ್ನಿಸಿ ವ್ಯಕ್ತಿಯು ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋಗಿದ್ದು, ನ್ಯಾಯಮೂರ್ತಿ ಅರುಣ್‌ ಕುಮಾರ್‌ ದೇಶ್ವಾಲ್‌ ಅವರು ವ್ಯಕ್ತಿ ವಿರುದ್ಧದ ಕೇಸ್‌ ರದ್ದುಗೊಳಿಸಲು ಆದೇಶಿಸಿದರು. ಇದೇ ವೇಳೆ ಅವರು, “ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾದ ವಿಡಿಯೊಗಳನ್ನು ಲೈಕ್‌ ಮಾಡುವುದು ಅಪರಾಧವಲ್ಲ” ಎಂದರು.

 

ಯಾವುದು ಅಪರಾಧ?

ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಆದ ಫೋಟೊ ಅಥವಾ ವಿಡಿಯೊವನ್ನು ನೋಡಿ, ಲೈಕ್‌ ಮಾಡಿದರೆ ಯಾವುದೇ ತೊಂದರೆ ಇಲ್ಲ. ಆದರೆ, “ಫೇಸ್‌ಬುಕ್‌ನಲ್ಲಿ ವಿಡಿಯೊ ಅಥವಾ ಫೋಟೊವನ್ನು ಶೇರ್‌ ಮಾಡುವುದು, ಎಕ್ಸ್‌ ಜಾಲತಾಣದಲ್ಲಿ ಅದನ್ನು ರಿಪೋಸ್ಟ್‌ ಮಾಡುವುದು ಅಪರಾಧ” ಎಂಬುದಾಗಿ ಅಲಹಾಬಾದ್‌ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಅಶ್ಲೀಲ ಪೋಸ್ಟ್‌ಗಳನ್ನು ಶೇರ್‌ ಮಾಡಿದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 67ರ ಪ್ರಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೋರ್ಟ್‌ ತಿಳಿಸಿದೆ.

ಸುಮಾರು 600-700 ಮುಸ್ಲಿಮರು ಅನುಮತಿ ಇಲ್ಲದೆಯೇ ಒಂದೆಡೆ ಸೇರಿದ ವಿಡಿಯೊ ಅಥವಾ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಆಗಿತ್ತು. ಇದನ್ನು ಮೊಹಮ್ಮದ್‌ ಇಮ್ರಾನ್‌ ಕಾಜ್ಮಿ ಅವರು ಲೈಕ್‌ ಮಾಡಿದ್ದರು. ಆದರೆ, ಇದೇ ಕಾರಣಕ್ಕೆ ಅವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿತ್ತು. “ಐಟಿ ಕಾಯ್ದೆಯ ಸೆಕ್ಷನ್‌ 67 ಪ್ರಕಾರ ಯಾವುದೇ ಅಸಮಂಜಸ, ಅಶ್ಲೀಲ ಪೋಸ್ಟ್‌ಅನ್ನು ಶೇರ್‌ ಮಾಡುವುದು ಅಪರಾಧವಾಗಿದೆಯೇ ಹೊರತು, ಲೈಕ್‌ ಮಾಡುವುದಲ್ಲ” ಎಂದು ಅಲಹಾಬಾದ್‌ ಹೈಕೋರ್ಟ್‌ ತಿಳಿಸಿತು.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ