ಚುನಾವಣೆ ಸೋಲಿನ ಬೆನ್ನಲ್ಲೇ ಬಿಆರ್ಎಸ್ಗೆ ನಾಯಕ ಹೃದಯಘಾತದಿಂದ ನಿಧನ !
ಇತ್ತೀಚಿಗೆ ನಡೆದು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಭಾರತೀಯ ರಾಷ್ಟ್ರೀಯ ಸಮಿತಿ ಹೀನಾಯ ಲೋಲು ಕಂಡು ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ.
ಇದರ ಮಧ್ಯೆ ದುಃಖಕರ ವಿಚಾರ ಪಕ್ಷಕ್ಕೆ ಆಘಾತವನ್ನುಂಟು ಮಾಡಿದೆ. ಬಿಆರ್ಎಸ್ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾದ ಪಾಗಾಲ ಸಂಪತ್ ರೆಡ್ಡಿ ನಿಧನರಾಗಿದ್ದಾರೆ.
ಜನಗಾಮ ಜಿಲ್ಲಾ ಪರಿಷತ್ ಅಧ್ಯಕ್ಷ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಪಾಗಾಲ ಸಂಪತ್ ರೆಡ್ಡಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹನ್ಮಕೊಂಡದ ಚೈತನ್ಯಪುರಿಯಲ್ಲಿರುವ ಅವರ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾದ ಅವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಚಿಕಿತ್ಸೆ ನೀಡುತ್ತಿರುವಾಗಲೇ ಅವರು ಕೊನೆಯುಸಿರೆಳೆದಿದ್ದಾರೆ.
ಬಿಆರ್ಎಸ್ ಕಾರ್ಯಾಧ್ಯಕ್ಷ, ಶಾಸಕ ಕೆಟಿಆರ್ ಪಾಗಾಲ ಸಂಪತ್ ರೆಡ್ಡಿ ಕುಟುಂಬಸ್ಥರನ್ನು ಭೇಟಿ ಮಾಡಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಬಿಆರ್‌ಎಸ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಪಾಗಾಲ ಸಂಪತ್ ರೆಡ್ಡಿ ಅವರ ನಿಧನ ದುಃಖ ತಂದಿದೆ ಎಂದು ಸಚಿವ ಕೆಟಿಆರ್ ಹೇಳಿದರು. ಕೆಸಿಆರ್ ಜತೆ 14 ವರ್ಷಗಳ ಕಾಲ ಸೈನಿಕರಂತೆ ಕೆಲಸ ಮಾಡಿದ್ದು, ಸಂಪತ್ ರೆಡ್ಡಿ ಅವರ ಸಾವು ಪ್ರತಿಯೊಬ್ಬ ಬಿಆರ್ಎಸ್ ಕಾರ್ಯಕರ್ತನಿಗೂ ಆಘಾತ ತಂದಿದೆ ಎಂದರು.
ಸಂಪತ್ ರೆಡ್ಡಿ ಅವರು ಜಿಲ್ಲಾ ಪಕ್ಷದ ಅಧ್ಯಕ್ಷರಾಗಿ ಸಕ್ರಿಯವಾಗಿ ಕೆಲಸ ಮಾಡಿದ್ದು, ಪಕ್ಷ ಯಾವುದೇ ಕಾರ್ಯಕ್ರಮ ನೀಡಿದರೂ ಬದ್ಧತೆಯಿಂದ ಕೆಲಸ ಮಾಡಿ ಯಶಸ್ವಿಗೊಳಿಸಿದ್ದಾರೆ ಎಂದಿದ್ದಾರೆ. ಕೆಸಿಆರ್ ಮತ್ತು ಪಕ್ಷದ ಪರವಾಗಿ ಸಂಪತ್ ರೆಡ್ಡಿ ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಸಂಪತ್ ರೆಡ್ಡಿ ಕುಟುಂಬಕ್ಕೆ ಎಲ್ಲ ರೀತಿಯಿಂದಲೂ ಬೆಂಬಲ ನೀಡುವುದಾಗಿ ಕೆಟಿಆರ್ ಭರವಸೆ ನೀಡಿದ್ದಾರೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಜಿಪಂ ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ಪಕ್ಷದ ಕಚೇರಿಗಳಲ್ಲಿ ಗೌರವ ವಂದನೆ ಸಲ್ಲಿಸಬೇಕು ಎಂದು ಬುಧವಾರ ಪಕ್ಷದ ಸರತಿಗೆ ಕೆಟಿಆರ್ ಮನವಿ ಮಾಡಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಆರ್ಎಸ್ 39 ಸ್ಥಾನಗಳಲ್ಲಿ ಗೆದ್ದರೆ, ಕಾಂಗ್ರೆಸ್ 65 ಸ್ಥಾನಗಳಲ್ಲಿ ಗೆದ್ದು ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸಲಿದೆ