KSRTC ಬಸ್ ಡಿಕ್ಕಿ: ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತಕ್ಕೆ ಹಾನಿ
ಮಡಿಕೇರಿ: ಇಂದು ಮುಂಜಾನೆ ಆಘಾತಕಾರಿ ಘಟನೆ ನಡೆದಿದೆ. KSRTC ಬಸ್ ಮಂಜು ಮುಸುಕಿದ ರಸ್ತೆಯಲ್ಲಿ ಬಂದು ನೇರವಾಗಿ ವೃತ್ತಕ್ಕೆ ಡಿಕ್ಕಿ ಆದ ಹಿನ್ನಲೆ ಈ ದುರ್ಘಟನೆ.
ಇದೇ ಮೊದಲ ಬಾರಿಗೆ ವೀರ ಸೇನಾಧಿಕಾರಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಭಾರಿ ಹಾನಿ ಸಂಭವಿಸಿದೆ. ನೆಲಕ್ಕೆ ಉರುಳಿ ಬಿದ್ದಿರುವ ತಿಮ್ಮಯ್ಯ ಪ್ರತಿಮೆ.
ಬೆಂಗಳೂರಿನಿಂದ ಮಡಿಕೇರಿ ಬಸ್ ನಿಲ್ದಾಣಕ್ಕೆ ಆಗಮಿಸಿದ ಬಸ್ ಎಂದು ಅಂದಾಜಿಸಲಾಗಿದೆ ಹೆಚ್ಚಿನ ಮಾಹಿತಿ ಇನ್ನಷ್ಟೆ
ಕೆಆರ್‌ಎಸ್ ಬೃಂದಾವನದಲ್ಲಿ ಹುಚ್ಚು ನಾಯಿ ದಾಳಿ – ಐವರು ಪ್ರವಾಸಿಗರಿಗೆ ಗಾಯ
ಮಂಡ್ಯ: ಕೆಆರ್‌ಎಸ್ (KRS Brindavan) ಉತ್ತರ ಬೃಂದಾವನದಲ್ಲಿ ಹುಚ್ಚು ನಾಯಿ ದಾಳಿ ನಡೆಸಿ ಐದು ಮಂದಿ ಪ್ರವಾಸಿಗರು ಗಾಯಗೊಂಡಿರುವ ಘಟನೆ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ಕೆಆರ್‌ಎಸ್ ಬೃಂದಾವನಕ್ಕೆ ಪ್ರವಾಸಿಗರು ಆಗಮಿಸಿದ್ದರು. ಉತ್ತರ ಬೃಂದಾವನದಲ್ಲಿ ಕಳೆದ ರಾತ್ರಿ ಹುಚ್ಚು ನಾಯಿ ಕಾಣಿಸಿಕೊಂಡಿದ್ದು, ಇದ್ದಕ್ಕಿದ್ದಂತೆ ಪ್ರವಾಸಿಗರ ಮೇಲೆ ದಾಳಿ ನಡೆಸಿದೆ.
ನಾಯಿ ದಾಳಿಯಿಂದ ಐವರು ಪ್ರವಾಸಿಗರು ಗಾಯಗೊಂಡಿದ್ದಾರೆ. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಹುಚ್ಚು ನಾಯಿಯನ್ನು ಸ್ಥಳದಿಂದ ಓಡಿಸಿದ್ದಾರೆ. ಘಟನೆಯಿಂದ ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ.
ಮತ್ತೆ ಹುಚ್ಚು ನಾಯಿ ಬರಬಹುದೆಂಬ ಎಚ್ಚರಿಕೆಯಿಂದ ಉತ್ತರ ಬೃಂದಾವನವನ್ನು ಬಂದ್ ಮಾಡಲಾಗಿದೆ. ನಾಯಿ ದಾಳಿಯಿಂದ ಗಾಯಗೊಂಡವರಿಗೆ ಮೈಸೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.