ಕಿನ್ನಿಗೋಳಿ: ನಿಯಂತ್ರಣ ತಪ್ಪಿ ಜೀಪ್ ಪಲ್ಟಿ; ತಾಯಿ, ಮಗುವಿಗೆ ಗಾಯ!
Twitter
Facebook
LinkedIn
WhatsApp
ಮುಲ್ಕಿ ಸಮೀಪದ ಕೊಲ್ನಾಡು ಬಳಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಜೀಪ್ ಪಲ್ಟಿಯಾಗಿದ್ದು, ಜೀಪ್ ನಲ್ಲಿದ್ದ ತಾಯಿ ಹಾಗೂ ಮಗು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಾಳುಗಳನ್ನು ದೇರಳಕಟ್ಟೆ ತೌಡುಗೋಳಿ ನಿವಾಸಿಗಳಾದ ವಿನಿಶಾ (22) ಮತ್ತು 6 ವರ್ಷದ ಮಗು ಎಂದು ಗುರುತಿಸಲಾಗಿದ್ದು, ಜೀಪ್ ಚಾಲಕ ವಿಲ್ಸನ್ ರೋಶನ್ ಕೂಡಾ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಬೊಲೆರೋ ಜೀಪ್ ದೇರಳಕಟ್ಟೆ ತೌಡುಗೋಳಿಯಿಂದ ಉಡುಪಿ ಕಡೆಗೆ ಹೋಗುತ್ತಿದ್ದು, ಕೊಲ್ನಾಡು ತಲುಪುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗ್ಯಾಸ್ ಪೈಪ್ ಲೈನ್ ಕಾಮಗಾರಿ ನಡೆಸುತ್ತಿದ್ದ ಟ್ರ್ಯಾಕ್ಟರ್ ಏಕಾಏಕಿ ಅಡ್ಡ ಬಂದಿದೆ ಎನ್ನಲಾಗಿದೆ.
ಈ ಸಂದರ್ಭ ಬೊಲೆರೋ ವಾಹನ ಚಾಲಕ ಅಪಘಾತ ತಪ್ಪಿಸಲು ಯತ್ನಿಸಿದ್ದು, ಚಾಲಕನ ನಿಯಂತ್ರಣ ಜೀಪ್ ತಪ್ಪಿ ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಜೀಪ್ ಸಂಪೂರ್ಣ ಹಾನಿಯಾಗಿದ್ದು, ಮಹಿಳೆ ಮತ್ತು ಮಗು ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.. ಬಳಿಕ ಕ್ರೇನ್ ಮೂಲಕ ಜೀಪ್ ನ್ನು ಸ್ಥಳದಿಂದ ತೆರವುಗೊಳಿಸಲಾಯಿತು.