ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!

Twitter
Facebook
LinkedIn
WhatsApp
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಚಿನ್ನ ಕಂಡರೆ ಹೆಣವೂ ಬಾಯಿಬಿಡುತ್ತದೆ ಎಂದು ಒಂದು ಹೊಸ ಗಾದೆಯೇ ಮಾಡಬೇಕಾದೀತೇನೋ! ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Kempegowda International Airport) ಚಿನ್ನವನ್ನು ಕಣ್ತಪ್ಪಿಸಿ ತರಲು ಜನರು ಮಾಡುವ ಹೊಸ ಹೊಸ ಉಪಾಯಗಳಿಗೆ ಇನ್ನೋವೇಟಿವ್‌ ಐಡಿಯಾ ಪ್ರಶಸ್ತಿ ಕೊಡಬೇಕಾದೀತೇನೋ!

ಆ ಮಟಕ್ಕೆ ಜನರು ಹುಚ್ಚುಗಟ್ಟಿಕೊಂಡು ಚಿನ್ನದ ಗಟ್ಟಿಯನ್ನು ವಿದೇಶಗಳಿಂದ ತರಲು (Gold Smuggling) ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ವಿಮಾನ ನಿಲ್ದಾಣದಲ್ಲಿ (Bangalore Airport) ಸಿಕ್ಕಿಬೀಳುತ್ತಾರೆ, ಇನ್ನು ಕೆಲವರು ಸಿಕ್ಕಿ ಹಾಕಿಕೊಳ್ಳದೆ ಬಚಾವಾಗುತ್ತಾರೆ!

ಗುದದ್ವಾರ, ಕಾಲಿನ ಮಂಡಿಯಲ್ಲಿ ಚಿನ್ನ!

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಳು ಎರಡು ದಿನದ ಹಿಂದೆ ನಡೆಸಿದ ಕಾರ್ಯಾಚರಣೆಯಲ್ಲಿ ಕೋಟಿ ಕೋಟಿ ಮೌಲ್ಯದ ಚಿನ್ನ ಸೀಜ್ ಮಾಡಿದ್ದಾರೆ. ದುಬೈ ಹಾಗೂ ಕೊಲೊಂಬೊದಿಂದ ಬಂದ ನಾಲ್ವರು ಪ್ರಯಾಣಿಕರ ತೀವ್ರ ತಪಾಸಣೆ ವೇಳೆ ಅವರಲ್ಲಿ ಮೂರು ಕೆಜಿ ಚಿನ್ನ ಪತ್ತೆಯಾಗಿದೆ. ಅವರು ಅದನ್ನು ಎಲ್ಲಿಟ್ಟುಕೊಂಡಿದ್ದರು ಎಂದು ತಿಳಿದರೆ ನೀವು ಮೂಗಿಗೆ ಬೆರಳಿಡುತ್ತೀರಿ! ಯಾಕೆಂದರೆ ಅವರಲ್ಲಿ ಕೆಲವರ ಬಳಿ ಚಿನ್ನ ಪತ್ತೆಯಾಗಿದ್ದು ಗುದದ್ವಾರದಲ್ಲಿ (Gold Found in anus). ಇನ್ನೊಬ್ಬ ಕಾಲಿನ ಮಂಡಿಯಲ್ಲಿ ಆಪರೇಟ್‌ ಮಾಡಿ ಚಿನ್ನ ಇಟ್ಟುಕೊಂಡು ಬಂದಿದ್ದ.

ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯಲ್ಲಿ ನಾಲ್ವರು ಪ್ರಯಾಣಿಕರ ಕರಾಮತ್ತು ಬಯಲಾಗಿದ್ದು, ಒಟ್ಟು 1 ಕೋಟಿ 77 ಲಕ್ಷ ಮೌಲ್ಯದ ಮೂರು ಕೆಜಿ ಚಿನ್ನದ ಬಿಸ್ಕೆಟ್‌ಗಳು ಸಿಕ್ಕಿವೆ. ನಾಲ್ವರೂ ಪ್ರಯಾಣಿಕರು ಈಗ ಪೊಲೀಸರ ವಶದಲ್ಲಿದ್ದು, ಈ ಸಾಗಾಟದ ಹಿಂದಿರುವ ಜಾಲವನ್ನು ಭೇದಿಸಲು ಪ್ರಯತ್ನಿಸಲಾಗುತ್ತಿದೆ.

ಪೇಸ್ಟ್‌ ಮಾಡಿ ಪ್ಯಾಂಟ್‌ನೊಳಗೆ ಹಚ್ಚಿದ್ದ!

ಇನ್ನೊಂದು ಘಟನೆಯಲ್ಲಿ ವ್ಯಕ್ತಿಯೊಬ್ಬ ಅದೆಷ್ಟು ಪ್ಲ್ಯಾನ್‌ ಮಾಡಿದ್ದ ಎಂದರೆ ಪ್ಯಾಂಟ್ ಹಾಗೂ ಒಳ‌ ಉಡುಪಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಅವನ ಖತರ್ನಾಕ್‌ ಬುದ್ಧಿ ಹೇಗೆ ವರ್ಕ್‌ ಮಾಡಿತ್ತು ಎಂದರೆ ಕೊಲಂಬೊದಿಂದ ಶ್ರೀಲಂಕಾ ಏರ್ಲೈನ್ಸ್ ನಲ್ಲಿ ಬಂದಿದ್ದ ಈ ಪ್ರಯಾಣಿಕ ಪೌಡರ್ ರೂಪದಲ್ಲಿ ಚಿನ್ನವನ್ನು ಪೇಸ್ಟ್ ಮಾಡಿ ಪ್ಯಾಂಟ್ ಒಳಗಡೆ ಮರೆ ಮಾಚಿದ್ದ.

ಪ್ಯಾಂಟ್‌ನ ಸೊಂಟದ ಪಟ್ಟಿಯ ಒಳಗಡೆ ಒಂದು ಕಡೆ ಜೇಬಿನ ತರ ಮಾಡುತ್ತೇವಲ್ಲ. ಇವರು ಇಡೀ ಪಟ್ಟಿಯನ್ನೇ ಹಾಗೆ ಮಾಡಿದ್ದ. ಅದರಲ್ಲಿ ಚಿನ್ನವನ್ನು ಪೇಸ್ಟ್‌ ಮಾಡಿ ಅಂಟಿಸಿದ್ದ. ವಿಮಾನ ನಿಲ್ದಾಣದಿಂದ ತಪ್ಪಿಸಿಕೊಂಡರೆ ಅದನ್ನು ಚಿನ್ನವಾಗಿ ಮರು ರೂಪ ನೀಡುವುದು ಕಷ್ಟವೇನಲ್ಲ ಅನ್ನುವುದು ಅವನ ಲೆಕ್ಕಾಚಾರವಾಗಿತ್ತು. ಆದರೆ, ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡ ಆತನನ್ನು ಈಗ ಚಿನ್ನದ ಸಹಿತ ಬಂಧಿಸಲಾಗಿದೆ. ಆತನ ಪ್ಯಾಂಟ್‌ನಲ್ಲಿ ಸುಮಾರು 74 ಗ್ರಾಂ ಚಿನ್ನ ಪತ್ತೆಯಾಗಿದೆ. ಇದೀಗ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ಸೋಶಿಯಲ್‌ ಮೀಡಿಯಾ ಹೀರೋ ಪೊಲೀಸ್‌ ಅಧಿಕಾರಿ ಉಗ್ರರಿಂದ ಹಣ ಪಡೆದು ಸಿಕ್ಕಿಬಿದ್ದ!

ಶ್ರೀನಗರ: ಸೋಶಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಎನಿಸಿರುವ, ಸರ್ಕಾರದಿಂದಲೂ ಈ ಹಿಂದೆ ಮನ್ನಣೆಗೆ ಪಾತ್ರವಾಗಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಶೇಖ್ ಆದಿಲ್ ಮುಷ್ತಾಕ್ ( Sheikh Adil Mushtaq) ಎಂಬವರನ್ನು ಭಯೋತ್ಪಾದನೆ ಸಂಬಂಧಿತ ಭ್ರಷ್ಟಾಚಾರ (police corruption) ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶ್ರೀನಗರದಲ್ಲಿ ಬಂಧಿಸಿದ್ದಾರೆ.

ಬಾರಾಮುಲ್ಲಾದ ನಿವಾಸಿ ಶೇಖ್ ಆದಿಲ್ ಅವರು ಉತ್ತರ ಕಾಶ್ಮೀರದ ಸುಂದರ ತಾಣವಾದ ಗುರೆಜ್‌ನಲ್ಲಿ ಪ್ರವಾಸೋದ್ಯಮಕ್ಕೆ ನೀಡಿದ ಒತ್ತು, ಪ್ರಚಾರದಿಂದ ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಪಡೆದಿದ್ದಾರೆ. ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಪ್ರಕರಣದಲ್ಲಿ ತನಿಖೆಯನ್ನು ಮುಚ್ಚಿಹಾಕಲು ಲಷ್ಕರ್-ಎ-ತೊಯ್ಬಾ (Lashkar-e-Taiba – LeT) ಕಾರ್ಯಕರ್ತ ಮುಜಾಮಿಲ್ ಜಹೂರ್‌ ಎಂಬಾತನಿಂದ ಹಣ ಪಡೆದ ಆರೋಪವೂ ಇವರ ಮೇಲೆ ಇದೆ. ಬಂಧನಕ್ಕೊಳಗಾಗಿರುವ ಇವರು ಈಗ ಜೈಲಿನಲ್ಲಿದ್ದಾರೆ.

ಫೆಬ್ರವರಿ 7ರಂದು ನೌಗಾಮ್ ಪೊಲೀಸರು ರಾಷ್ಟ್ರೀಯ ಹೆದ್ದಾರಿಯ ಲಸ್ಜನ್ ಕ್ರಾಸಿಂಗ್‌ನಲ್ಲಿ ಮೂವರು ಶಂಕಿತರನ್ನು ಬಂಧಿಸಿ ಉಮರ್ ಆದಿಲ್ ದಾರ್ ಎಂಬಾತ ಸಾಗಿಸುತ್ತಿದ್ದ 31,65,200 ರೂ. ಹಣ, 1 ಮೊಬೈಲ್ ಫೋನ್, ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿದ ಸಾಹಿತ್ಯವನ್ನು ವಶಪಡಿಸಿಕೊಂಡಿದ್ದರು. ಆಗ ಶ್ರೀನಗರದ ಉಪವಿಭಾಗೀಯ ಪೊಲೀಸ್ ಅಧಿಕಾರಿಯಾಗಿದ್ದ ಶೇಖ್‌ ಆದಿಲ್ ಈ ಪ್ರಕರಣದ ತನಿಖೆ ನಡೆಸುತ್ತಿದ್ದರು.

ನಂತರ ಈ ಪ್ರಕರಣದ ತನಿಖೆಯು ಬೇರೊಬ್ಬ ಅಧಿಕಾರಿಗೆ ವರ್ಗಾವಣೆಯಾಗಿತ್ತು. ಈ ಸಂದರ್ಭದಲ್ಲಿ 3 ಲಕ್ಷ ರೂ.ಗಳಷ್ಟು ಅಕ್ರಮ ಹಣ ಅನುಮಾನಾಸ್ಪದ ಖಾತೆಯೊಂದಕ್ಕೆ ವರ್ಗಾವಣೆಯಾಗಿರುವುದು ಕಂಡುಬಂದಿತ್ತು. ಇದರ ಮೂಲವನ್ನು ಶೋಧಿಸಿದಾಗ ಅದು ಶೇಖ್‌ ಆದಿಲ್‌ ಬುಡಕ್ಕೆ ಬಂದಿದೆ. ಹಣ ಸಾಗಣೆ ಪ್ರಕರಣದ ಆರೋಪಿಯಾಗಿರುವ ಆದಿಲ್‌ ದರ್‌ ಕೂಡ, ಪ್ರಕರಣವನ್ನು ಸೀಮಿತಗೊಳಿಸಲು ಅಥವಾ ಮುಚ್ಚಿಹಾಕಲು ತನಗೆ ಹಣವನ್ನು ನೀಡುವಂತೆ ಶೇಖ್‌ ಆದಿಲ್‌ ಹೇಳಿದ್ದುದಾಗಿ ಆರೋಪಿಸಿದ್ದಾನೆ.

ಬಂಧಿತರ ಪ್ರಾಥಮಿಕ ವಿಚಾರಣೆಯಲ್ಲಿ ಅವರು ಲಷ್ಕರೆ ತಯ್ಬಾದ ಪ್ರಾಥಮಿಕ ಕಾರ್ಯಕರ್ತರು ಎಂಬುದು ತಿಳಿದುಬಂದಿದೆ. ಕಾಶ್ಮೀರದಲ್ಲಿ ಮತ್ತು ಗಡಿಯುದ್ದಕ್ಕೂ ಎಲ್‌ಇಟಿಯು ರೂಪಿಸಿದ ದೊಡ್ಡ ಕ್ರಿಮಿನಲ್ ಪಿತೂರಿಯ ಭಾಗವಾಗಿ ಪಾಕಿಸ್ತಾನ ಮೂಲದ ಅವರ ಹ್ಯಾಂಡ್ಲರ್‌ಗಳ ನಿರ್ದೇಶನದ ಮೇರೆಗೆ ಈ ಹಣವನ್ನು ಒಯ್ಯಲಾಗುತ್ತಿತ್ತು. ಈ ವಿಚಾರವನ್ನು ಮುಚ್ಚಿಹಾಕಲು ಪೊಲೀಸ್‌ ಅಧಿಕಾರಿ ಪ್ರಯತ್ನಿಸಿದ್ದು, ಅದು ಈಗ ಆತನಿಗೆ ಮುಳುವಾಗಿದೆ.

ಶೇಖ್‌ ಆದಿಲ್‌, ಗುರೆಜ್‌ನಲ್ಲಿ ಪ್ರವಾಸೋದ್ಯಮಕ್ಕೆ ಪ್ರಚಾರ ನೀಡುತ್ತಿದ್ದುದಲ್ಲದೆ, ಆಕ್ಟ್‌ ಆಫ್‌ ಕೈಂಡ್‌ನೆಸ್‌ ಮತ್ತಿತರ ಕಾರ್ಯಕ್ರಮಗಳನ್ನೂ ಕೈಗೊಂಡು ಅದಕ್ಕೆ ಸಂಬಂಧಿಸಿದ ಫೋಟೋ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವ ಮೂಲಕ ಸ್ಥಳೀಯರಲ್ಲಿ ಹೀರೋ ಎನಿಸಿಕೊಂಡಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist