ಶನಿವಾರ, ಸೆಪ್ಟೆಂಬರ್ 7, 2024
ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ-ನಟ ದರ್ಶನ್ ಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!

Twitter
Facebook
LinkedIn
WhatsApp
ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!

ಕರಾವಳಿ ಸಿಟಿ ಮಂಗಳೂರಿನಲ್ಲಿ ಗ್ರಾಂಡ್‌ ಆಗಿ ನಡೆಯುತ್ತಿದ್ದ ಕಂಬಳ, ಇದೇ ಮೊದಲ ಬಾರಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ. ಮುಂದಿನ ತಿಂಗಳು 25 ಮತ್ತು 26ಕ್ಕೆ (ನವೆಂಬರ್ 25 ಮತ್ತು 26, 2023) ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ ಎಂದು ಪುತ್ತೂರು ಎಂಎಲ್‌ಎ ಮತ್ತು ಬೆಂಗಳೂರು ಕಂಬಳ ಕಮೀಟಿ ಹೆಡ್ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಜಿಲ್ಲಾ ಕಂಬಳ ಸಮಿತಿಯ ಜತೆ ಸೇರಿ ಬೆಂಗಳೂರು ಕಂಬಳ ಸಮಿತಿ ಈ (ನಮ್ಮ ಕಂಬಳ) ಬೆಂಗಳೂರು ಕಂಬಳವನ್ನು ಆಯೋಜನೆ ಮಾಡಲಿದೆ. ಈ ಕಂಬಳವನ್ನು ಕಂಬಳದಲ್ಲಿ ಉಪಯೋಗಿಸುವ ಕೋಣಗಳ ಮಾಲೀಕರ ಜತೆ ಚರ್ಚಿಸಿ ಆಯೋಜಿಸಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜನರು ಕಂಬಳವನ್ನು ನೋಡಬಹುದು.   

ಮುಂಬರುವ ಬೆಂಗಳೂರು ಕಂಬಳದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಉಳಿದ ಕೆಲವು ಜಿಲ್ಲೆಗಳಿಂದ ಕೋಣಗಳು ಆಗಮಿಸಲಿದ್ದು, ಸುಮಾರು 7 ಲಕ್ಷ ಜನರು ಈ ಹಬ್ಬವನ್ನು ನೋಡಲು ಬರಬಹುದು ಎಂಬ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ನವೆಂಬರ್ 23ಕ್ಕೆ ಕೋಣಗಳು ಮಂಗಳೂರಿನಿಂದ ಲಾರಿಯಲ್ಲಿ ಹೊರಟು ಬೆಂಗಳೂರು ತಲುಪಲಿದ್ದು, ಬಳಿಕ ಕಂಬಳಕ್ಕೆ ಸಿದ್ಧವಾಗಲಿವೆ.

ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳಕ್ಕೆ ನಟ ರಜನಿಕಾಂತ್, ಐಶ್ವರ್ಯಾ ರೈ ಬಚ್ಚನ್, ಅನುಶ್ಕಾ ಶೆಟ್ಟಿ ಹಾಗೂ ರಿಷಭ್ ಶೆಟ್ಟಿ ಭಾಗವಹಿಸಲಿರುವುದು ಪಕ್ಕಾ ಎನ್ನಲಾಗಿದೆ. ನಟಿ ಶಿಲ್ಪಾ ಶೆಟ್ಟಿ ಎಂದಿನಂತೆ ಬರುವ ನಿರೀಕ್ಷೆ ಕೂಡ ಇದೆ. ಸಿನಿಮಾ ತಾರೆಯರ ಹೊರತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಲವು ಮಂತ್ರಿಗಳು ಆಗಮಿಸಲಿದ್ದಾರೆ. ಉಳಿದ ಕ್ಷೇತ್ರಗಳ ಬಹಳಷ್ಟು ವಿಐಪಿಗಳು ಆಗಮಿಸಲಿದ್ದಾರೆ ಎನ್ನಲಾಗಿದೆ.

ಕಂಬಳವು ಸುಮಾರು 6 ಕೋಟಿ ರೂ. ಖರ್ಚಿನಲ್ಲಿ ನಡೆಯಲಿದ್ದು, 2000 ವಿಐಪಿಗಳು ಆಗಮಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ದಕ್ಷಿಣ ಕನ್ನಡ ಭಾಗದ ಸುಮಾರು 150 ಫುಡ್ ಸ್ಟಾಲ್‌ಗಳು ಬರಲಿದ್ದು, ತುಳುನಾಡಿನ ಆಹಾರಕ್ರಮವನ್ನು ಪ್ರತಿನಿಧಿಸಲಿವೆ. 145 ಮೀಟರ್ ಟ್ರಾಕ್‌ನಲ್ಲಿ ಈ ಕೋಣಗಳ ಓಟದ ಸ್ಪರ್ಧೆ ನಡೆಯಲಿದ್ದು, ಭಾಗವಹಿಸುವ ಎಲ್ಲಾ ಕೋಣಗಳು ಮೆಡಲ್ ಪಡೆಯಲಿವೆ ಎನ್ನಲಾಗಿದೆ. 

ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಸುವ ಉದ್ದೇಶದಿಂದ ಇಲ್ಲೊಂದು ‘ತುಳು ಭವನ’ ನಿರ್ಮಾಣ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಜತೆಗೆ, ಪಿಲಿಕುಳದಲ್ಲಿ ಕಂಬಳಕ್ಕಾಗಿ ಒಂದು ಎಕರೆ ಜಮೀನು ಮಂಜೂರಿಗಾಗಿ ಸರ್ಕಾರಕ್ಕೆ ಅರ್ಜಿ ಕೊಡಲಾಗಿದೆ ಎಂದು MLA ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಒಟ್ಟನಲ್ಲಿ, ಬೆಂಗಳೂರಿನಲ್ಲಿ ಕಂಬಳ ನಡೆಯುವ ಮೂಲಕ ಈ ಹಬ್ಬವು ಮುಂಬರುವ ದಿನಗಳಲ್ಲಿ ನ್ಯಾಷನಲ್ ಮತ್ತು ಇಂಟರ್‌ನ್ಯಾಷನಲ್ ಖ್ಯಾತಿ ಪಡೆಯುವ ದಾರಿಯಲ್ಲಿದೆ ಎನ್ನಬಹುದು.  

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ